Get Updates
Get notified of breaking news, exclusive insights, and must-see stories!

ಮಕ್ಕಳ ಹೆಗಲು ಇನ್ನು ಹಗುರ : ಒಂದೇ ಪುಸ್ತಕದಲ್ಲಿ ಮೂರು ಪಠ್ಯಗಳು

ಕೊಯಮತ್ತೂರು : ಕೆ.ಜಿ.ಗಟ್ಟಲೆ ಪುಸ್ತಕಗಳ ಮೂಟೆ ಹೊರುವ ಮಕ್ಕಳಿಗೆ ದೇಶದಲ್ಲೇ ಮೊದಲ ಬಾರಿಗೆ ಇಲ್ಲೊಂದು ಸಿಹಿ ಸುದ್ದಿ.....

ಸ್ಥಳೀಯ ಮನೋಜ್‌ ಪುಸ್ತಕ ಪ್ರಕಾಶಕ ಸಂಸ್ಥೆ ನಾಲ್ಕು ವಿಷಯಗಳ ಪಠ್ಯವನ್ನು ಒಂದೇ ಪುಸ್ತಕದೊಳಗೆ ಬಂಧಿಸಿ, ತಮ್ಮ ಹೊಸ ಶೋಧಕ್ಕೆ ತಕ್ಕಂಥ ಡಿಸ್ಕವರಿ ಎಂಬ ಹೆಸರನ್ನು ಇಟ್ಟು ಮಾರುಕಟ್ಟೆಗೆ ತರು-ತ್ತಿದ್ದಾರೆ. ವರ್ಷವಿಡೀ ಮಕ್ಕಳು ಎಲ್ಲಾ ವಿಷಯಗಳ ಪಠ್ಯ ಪುಸ್ತಕಗಳನ್ನು ಶಾಲೆಗೆ ಒಯ್ಯುವುದನ್ನು ತಪ್ಪಿಸುವ ಉದ್ದೇಶದಿಂದ ಮನೋಜ್‌ ಸಂಸ್ಥೆ ಈ ಹೊಸ ಯತ್ನ ಮಾಡಿದೆ. ನಗರದ 20 ಶಾಲೆಗಳು ಮುಂದಿನ ಶಾಲಾ ವರ್ಷ (ಜೂನ್‌ 2001) ದಿಂದ ಈ ಪುಸ್ತಕವನ್ನು ಜಾರಿಗೆ ತರಲು ಒಪ್ಪಿವೆ.

ಇಂಗ್ಲಿಷ್‌, ಗಣಿತ, ಪರಿಸರ ವಿಜ್ಞಾನ ಮತ್ತು ಸಮಾಜ ಶಾಸ್ತ್ರ ವಿಷಯಗಳ ಪಠ್ಯಗಳು ‘ಡಿಸ್ಕವರಿ’ಯಲ್ಲಿವೆ. ಸದ್ಯಕ್ಕೆ 5ನೇ ಇಯತ್ತೆವರೆಗೆ ಈ ಪುಸ್ತಕವನ್ನು ಮುದ್ರಿಸಲಾಗಿದೆ. ಪುಸ್ತಕಗಳ ಒಂದು ಸೆಟ್ಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ದೇಶಾದ್ಯಂತ ಜಾರಿಗೆ ತರುತ್ತಾರೆನ್ನುವ ನಂಬಿಕೆ ನಮ್ಮದು. ಪುಸ್ತಕ ನಗರದ ಮಾರುಕಟ್ಟೆಯಲ್ಲಿ ಮುಂದಿನ ಬುಧವಾರದಿಂದ ಲಭ್ಯ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಭಕ್ತವತ್ಸಲಂ ವಿವರಿಸಿದರು.

ಬಾಲಂಗೋಚಿ : ಕರ್ನಾಟಕ ರಾಜ್ಯ ಶಿಕ್ಷಣ ಸಚಿವರಾದ ಎಚ್‌.ವಿಶ್ವನಾಥ್‌ ಕಂಪ್ಯೂಟರ್‌ ಯೋಜನೆಗಳ ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು, ಮಕ್ಕಳ ಹೆಗಲ ಮೇಲಿನ ಭಾರ ಇಳಿಸುವ ಕಡೆಯೂ ಗಮನ ಹರಿಸಲಿ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+