ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಡಿಯಂಟ್‌ ಮೇಲೆ ದಾಳಿ : 12 ಕೋಟಿ ರು.ನಕಲಿ ಸಾಫ್ಟ್‌ವೇರ್‌ ವಶ

By Staff
|
Google Oneindia Kannada News

ಬೆಂಗಳೂರು : ರೇಡಿಯಂಟ್‌ ಸಾಫ್ಟ್‌ವೇರ್‌ ಬೋಧನಾ ಕೇಂದ್ರದ ಬೆಂಗಳೂರಿನ 2 ಹಾಗೂ ಚೆನ್ನೈನ 1 ಶಾಖೆಯ ಮೇಲೆ ಬೌದ್ಧಿಕ ಆಸ್ತಿ ಹಕ್ಕು ಜಾರಿ (ಎನ್‌ಫೋರ್ಸರ್ಸ್‌ ಆಫ್‌ ಇಂಟಲೆಕ್ಚುಯಲ್‌ ಪ್ರಾಪರ್ಟಿ ರೈಟ್ಸ್‌) ಅಧಿಕಾರಿಗಳು ದಾಳಿ ನಡೆಸಿ, 12.71 ಕೋಟಿ ರುಪಾಯಿ ನಕಲಿ ಸಾಫ್ಟ್‌ವೇರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ರೇಡಿಯಂಟ್‌ ಶಾಖೆಗಳು ಮತ್ತು ಚೆನ್ನೈನ ಒಂದು ಶಾಖೆಯ ಮೇಲೆ ಸ್ಥಳೀಯ ಪೊಲೀಸರ ಸಹಾಯದಿಂದ ಅಧಿಕಾರಿಗಳು ದಾಳಿ ನಡೆಸಿದರು. ತಾನು ಅಮೆರಿಕೆಯ ಸಾಫ್ಟ್‌ವೇರ್‌ ಕಂಪನಿ ಒರ್ಯಾಕಲ್‌ನ ಸಾಫ್ಟ್‌ವೇರ್‌ ಬಳಸಿ ತರಬೇತಿ ನೀಡುತ್ತಿರುವುದಾಗಿ ಗ್ರಾಹಕರನ್ನು ಸೆಳೆಯುತ್ತಿತ್ತು. ರೇ ಆಫ್‌ ಹೋಪ್‌ ಎಂಬುದು ಸಂಸ್ಥೆಯ ಧ್ಯೇಯ ವಾಕ್ಯ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ರಿಂದ 4 ಲಕ್ಷ ರುಪಾಯಿ ಬೆಲೆ ಇರುವ ಒರ್ಯಾಕಲ್‌ ಸಾಫ್ಟ್‌ವೇರ್‌ನ ನಕಲು ಪ್ರತಿಗೆ ಕೇವಲ 300ರಿಂದ 400 ರುಪಾಯಿಗಳು. ರೇಡಿಯಂಟ್‌ ಸಂಸ್ಥೆ ಪ್ರತಿ ತರಬೇತಿಗೆ ತಲಾ 10 ರಿಂದ 15 ಸಾವಿರ ರುಪಾಯಿ ಶುಲ್ಕ ಸುಲಿಯುತ್ತಿತ್ತು.

ಸಂಸ್ಥೆಯ ವಲಯ ವ್ಯವಸ್ಥಾಪಕ ಕುಮಾರ್‌, ಶಾಖಾ ವ್ಯವಸ್ಥಾಪಕ ಅಬ್ರಹಾಂ ಎಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂ ಶಾಖೆಯ ವ್ಯವಸ್ಥಾಪಕ ವಿಮಲ್‌ ಹಾಗೂ ಎಂಜಿನಿಯರ್‌ ಅನಿಲ್‌ ಎಂಬುವರನ್ನು ಅಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. 1957ರ ಹಕ್ಕು ಸ್ವಾಮ್ಯ ಕಾಯ್ದೆಯ ಪರಿಚ್ಛೇದ 51, 63, 69(ಬಿ) ಹಾಗೂ ಭಾರತೀಯ ದಂಡ ಸಂಹಿತೆ 420ರ ಅನ್ವಯ ಎರಡೂ ಠಾ-ಣೆಗಳಲ್ಲಿ ದೂರು ದಾಖಲಿಸಲಾಗಿದೆ. ಸಾಫ್ಟ್‌ವೇರ್‌ ಕುರಿತ ನಕಲಿ ಮಾಹಿತಿ ಪುಸ್ತಕಗಳನ್ನೂ ವಶಪಡಿಸಿಕೊಳ್ಳಗಿದೆ.

ಬಾಲಂ-ಗೋ-ಚಿ : ಎಸಿ ರೂಮಿ-ನಿಂ-ದ ಬೀದಿ-ಗೆ ಬಂದ ರೇಡಿ-ಯೆಂ-ಟ್‌.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X