ಸುಶ್ಮಿತ, ಐಶ್ವರ್ಯ ರೈ ಹಾದಿಯಲ್ಲಿ ಪ್ರಿಯಾಂಕಾ
ನವದೆಹಲಿ : ಮೊನ್ನೆ ಮೊನ್ನೆ ತಾನೆ ವಿಶ್ವಸುಂದರಿಯ ಕಿರೀಟ ಹೊತ್ತು, ಭಾರತ ಸೌಂದರ್ಯದ ಗಣಿ ಎಂದು ಸಾರಿದ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತಾರೆಯಾಗಿ ಮೆರೆಯಬೇಕೆಂಬ ತಮ್ಮ ಮನದಂತರಾಳದ ಮಾತುಗಳನ್ನು ಬಹಿರಂಗಗೊಳಿಸಿದ್ದಾರೆ.
ಮಾಜಿ ವಿಶ್ವ ಸುಂದರಿಯರಾದ ಐಶ್ವರ್ಯ ರೈ, ಸುಶ್ಮಿತಾ ಸೆನ್‌ರಂತೆಯೇ ತಮಗೂ ಚಿತ್ರರಂಗದಲ್ಲಿ ತಾರೆಯಾಗಿ ಮಿನುಗಲು ವಿರೋಧವೇನಿಲ್ಲ ಎಂದು ಹೇಳುವ ಮೂಲಕ, ಐಶ್ವರ್ಯ ರೈ ಹಾದಿಯಲ್ಲಿ ತಾವೂ ನಡೆಯಲು ಸಿದ್ಧ ಎಂದು ಸಾರಿದ್ದಾರೆ.
ನಾನು ಮೂಲತಃ ರಂಗ ಕಲಾವಿದೆ. ಅಭಿನಯಶಾರದೆ ನನಗೆ ಕೃಪೆ ತೋರಿದ್ದಾಳೆ. ಬಾಲಿವುಡ್‌ನಲ್ಲಿ ನನಗೆ ಉತ್ತಮ ಅವಕಾಶ ದೊರಕಿದರೆ, ನಾನ್ಯಾಕೆ ಅದನ್ನು ನಿರಾಕರಿಸಬೇಕು. ಸಂತಸದಿಂದಲೇ ಸ್ವೀಕರಿಸುತ್ತೇನೆ ಎಂದು ವಿಶ್ವ ಸುಂದರಿಯ ಕಿರೀಟ ಧರಿಸಿದ ಬಳಿಕ ಪ್ರಥಮ ಬಾರಿಗೆ ತಾಯ್ನಾಡಿಗೆ ಮರಳಿದ ಈ ತ್ರಿಭುವನ ಸುಂದರಿ, ದೆಹಲಿಯಲ್ಲಿ ನಡೆದ ಪ್ರಪ್ರಥಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆತ್ಮವಿಶ್ವಾಸವೇ ಗೆಲುವಿನ ಗುಟ್ಟು : ತಮ್ಮಲ್ಲಿರುವ ಆತ್ಮವಿಶ್ವಾಸವೇ ತಮ್ಮ ಗೆಲುವಿನ ಗುಟ್ಟು ಎಂದು ಗಂಟಾಘೋಷವಾಗಿ ಸಾರಿದ ಅವರು, ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ವ್ಯೂಹದ ತಂತ್ರದಿಂದಾಗಿಯೇ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತ ಸುಂದರಿಯರು ಯಶಸ್ಸು ಗಳಿಸುತ್ತಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದರು.
ಮದುವೆ ಪ್ರಸ್ತಾಪ : ವಿಶ್ವ ಸುಂದರಿ ಎಂದ ಮೇಲೆ ಆಕೆಯನ್ನು ವರಿಸುವ ಸುರ ಸುಂದರನಾರು ? ಎಂಬ ಕುತೂಹಲ ಸಹಜ ತಾನೆ. ಪತ್ರಕರ್ತರೊಬ್ಬರು ಈ ಬಗ್ಗೆ ಪ್ರಶ್ನಿಸಿದಾಗ. ಪ್ರಿಯಾಂಕ ಹೇಳಿದ್ದು : ನಾನು ಪ್ರೀತಿಸುವ ಹುಡುಗನ ಜೊತೆ, ಅದೂ ಹಿರಿಯರ ಸಮ್ಮತಿ ಪಡೆದು ಮದುವೆ ಆಗುತ್ತೇನೆ.
ಕೊನೆ ಸಿಡಿ : ಹೃತಿಕ್ 20ರಂದು ಬೆಂಗಳೂರಲ್ಲಿ ಸೂಸನ್ ಕೈ ಹಿಡಿದ ಎಂಬ ಸುದ್ದಿ ಕೇಳಿ ಹದಿಹರೆಯದ ಎಷ್ಟೋ ಹುಡುಗಿಯರ ಹೃದಯಗಳು ರೋದಿಸುತ್ತಿರುವಾಗ, ಪ್ರಿಯಾಂಕ ತಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ ಸುದ್ದಿ ಕೇಳಿ, ವಿಶ್ವ ಸುಂದರಿಯನ್ನು ಕನಸಲ್ಲೇ ಕಾಣುತ್ತಿದ್ದ ಹರೆಯದ ಹುಡುಗರೂ ಏನೋ ಕಳೆದುಕೊಂಡವರಂತೆ ಪರಿತಪಿಸುತ್ತಿದ್ದಾರಂತೆ !
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications