Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರಯಾಣ ಸಂಭವ. ಅನಿರೀಕ್ಷಿತ ಖರ್ಚಿದೆ. ಹಗ್ಗವೇ ಹಾವಾಗಿ ಬುಸುಗುಟ್ಟುತ್ತದೆ. ಒಪ್ಪಂದ - ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ನಾಲ್ಕು ಬಾರಿ ಚಿಂತಿಸಿ.

ವೃಷಭ : ಶತ್ರುಗಳಿಗಿಂತ, ನಿಮಗೆ ಹಿತಶತ್ರುಗಳೇ ಹೆಚ್ಚಾಗಿದ್ದಾರೆ. ನಯವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಭೂಮಿ ಖರೀದಿಯಲ್ಲಿ ಲಾಭವಿದೆ. ನ್ಯಾಯ ನಿಮ್ಮ ಕಡೆ ವಾಲಿದೆ.

ಮಿಥುನ : ಕಷ್ಟಗಳೆಲ್ಲಾ ಕೊನೆಗೊಳ್ಳುವ ಕಾಲ ಇದು. ಸಂತಸ ಕ್ಷೀರ ಸಾಗರದಂತೆ ಹರಿದು ಬರುತ್ತದೆ. ಕುಲದೇವರ ಅರ್ಚನೆಯಿಂದ ಎಲ್ಲ ವ್ಯವಹಾರದಲ್ಲೂ ಜಯವಿದೆ.

ಕಟಕ : ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಸಾಧಿಸಿದ್ದೀರಿ. ಸಂಗಾತಿಯಾಂದಿಗೆ ಸುಂದರ ದಿನ. ಅಪರೂಪದ ಜನರ ಭೇಟಿ ಸಂಭವ. ಷೇರು ವ್ಯವಹಾರದಲ್ಲಿ ಪ್ರಗತಿ.

ಸಿಂಹ : ಆರೋಗ್ಯಕ್ಕಿಂತಲೂ ಬೇರೇ ಭಾಗ್ಯ ಇದೆಯೇ. ಏನಿದ್ದರೇನು, ನೆಮ್ಮದಿ ಇಲ್ಲದಿದ್ದ ಮೇಲೆ. ನಿಯಮಿತ ಆಹಾರ ಸೇವನೆಯಿಂದ ಆರೋಗ್ಯದ ವೃದ್ಧಿ. ವೈದ್ಯೋ ನಾರಾಯಣೋ ಹರಿಃ ಎನ್ನುವುದನ್ನು ಮರೆಯಬೇಡಿ.

ಕನ್ಯಾ :ಗೆಳೆಯರ ಮಾತಿಗೆ ಬೆಲೆ ಕೊಡುವವರು ನೀವಲ್ಲ. ಇಂದು ನಿಮ್ಮ ಗೆಳೆಯನ ಸಲಹೆ ಗೌರವಿಸಿದರೆ, ಪ್ರಗತಿ ಇದೆ. ಹೊಸ ಒಡಂಬಡಿಕೆಯಲ್ಲಿ ತೊಡಗುವ ಮುನ್ನ ಚಿಂತಿಸುವುದು ಅಗತ್ಯ.

ತುಲಾ : ಮನದಂತರಾಳದಲ್ಲಿ ಕುಟುಕುತ್ತಿರುವ ವಿಷಯಗಳನ್ನು ಕಿತ್ತು ಹೊರಗೆ ಹಾಕಿ. ಉಪ್ಪು ಅನ್ನ ತಿಂದರೂ ನೆಮ್ಮದಿ ಇರಬೇಕಲ್ಲವೇ. ಧನದೇವತೆ ಚಂಚಲೆ ಎಂಬುದನ್ನು ಮರೆಯಬೇಡಿ.

ವೃಶ್ಚಿಕ : ಹೊರಗೆ ಕೊರೆಯುತ್ತಿರುವ ಚಳಿ, ನಿಮ್ಮ ಮನಸ್ಸನ್ನೂ ಬಿಲ್ಲಿನಂತೆಯೇ ಬಾಗಿಸಿದೆ. ಹೆದೆಯೇರಿಸಲು ಇದು ಸಕಾಲ. ಮುಟ್ಟಿದ್ದೇಲ್ಲಾ ಚಿನ್ನ ಆಗುತ್ತದೆ. ತಡವೇಕೆ ಕಾರ್ಯಪ್ರವೃತ್ತರಾಗಿ.

ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಾಹನ, ವಸ್ತು ಖರೀದಿ ಯೋಗವಿದೆ. ಆರ್ಥಿಕ ವಿಷಯದಲ್ಲಿ ತೃಪ್ತಿ. ಚೋರಭಯವಿದೆ ಎಚ್ಚರಿಕೆ.

ಮಕರ : ಧನಲಕ್ಷ್ಮೀ ಅನುಗ್ರಹ ಪ್ರಾಪ್ತವಾಗಿದೆ. ನಿಮಗರಿವಿಲ್ಲದೆ ನಿಮ್ಮಲ್ಲಿ ನವಚೈತನ್ಯ ಮೂಡಿದೆ. ಬಡ್ತಿಯ ಸಿಹಿ ಸುದ್ದಿಯೂ ಕೇಳಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಭಾರಿ ಮನ್ನಣೆ ದೊರಕಲಿದೆ.

ಕುಂಭ : ರಾಜ ಯಾರಾದರೇನು, ರಾಗಿ ಬೀಸುವುದು ತಪ್ಪೀತೆ ಎನ್ನುವ ಭಾವನೆ ನಿಮ್ಮದು. ನಿಮ್ಮ ಶ್ರಮದ ಕಾಯಕಕ್ಕೆ ಬೆಲೆ ಬಂದೇ ತೀರುತ್ತದೆ. ಕೀಳರಿಮೆ ಬಿಟ್ಟರೆ ಜಯ ಖಂಡಿತ.

ಮೀನ : ಆದದ್ದೆಲ್ಲಾ ಒಳಿತೆ ಆಯಿತು. ಧೈರ್ಯವೇ ಸರ್ವತ್ರ ಸಾಧನ. ದೇವರನ್ನು ನಂಬಿದವರಿಗೆ ಸೋಲಿಲ್ಲ. ನಿಮಗೆ ಕೇಡು ಬಗೆಯುವವರಿಗೂ ನೀವು ಒಳ್ಳೆಯದನ್ನೇ ಬಯಸಿ. ಶತ್ರುವಿನ ಹೆಸರು ಮಗನಿಗಿಡಬೇಕು ಎಂಬುದನ್ನು ಕೇಳಿಲ್ಲವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+