ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃತಿಕ್‌- ಸೂಜನ್‌ ಮದುವೆ : ಎರಡು ಧರ್ಮಗಳ ಹಸ್ತಲಾಘವ

By Staff
|
Google Oneindia Kannada News

*ವಿದ್ಯಾ ಪುರೋಹಿತ

ಬೆಂಗಳೂರು : ಆಗರ್ಭ ಶ್ರೀಮಂತಿಕೆಯ ಪರಿಸರ, ಬಿಗಿ ಪೊಲೀಸ್‌ ಬಂದೋಬಸ್ತ್‌ , ತೀರ ಹತ್ತಿರದ ಬಂಧು ಬಾಂಧವ ವರ್ಗ ಮತ್ತು ಹಿಂದಿ ಸಿನಿಮಾ ಜಗತ್ತಿನ ಜಗಜಗ ಮಿನುಗುವ ನಕ್ಷತ್ರಗಳ ಸಮ್ಮುಖದಲ್ಲಿ ನಟ ಹೃತ್ತಿಕ್‌ ರೋಷನ್‌ ಅವರ ಮದುವೆ ಬುಧವಾರ ಬೆಂಗಳೂರಿನಲ್ಲಿ ಸರಳ, ಆದರೆ ಶಾಸ್ತ್ರೋಕ್ತವಾಗಿ ನೆರವೇರಿತು.

ಬೆಂಗಳೂರಿನ ಹೊರವಲಯದಲ್ಲಿರುವ ನಟ ಸಂಜಯ್‌ಖಾನ್‌ ಅವರ ನಂದನವನದಲ್ಲಿ ಬೆಳಗ್ಗೆ ಮುಸ್ಲಿಂ ಸಂಪ್ರದಾಯಗಳ ರೀತ್ಯ ಮದುವೆ ನಡೆದರೆ ಸಂಜೆ ಹಿಂದೂ ಸಂಪ್ರದಾಯದ ಬಾರಾತ್‌ ಸಮೇತ ಲಗ್ನ ಕಾರ್ಯಗಳು ಸಂಭ್ರಮದಿಂದ ಕೈಗೂಡಿದವು. ಇದರೊಂದಿಗೆ ಹಿಂದಿ ಚಲನಚಿತ್ರ ಜಗತ್ತಿನ ಎರಡು ದೊಡ್ಡ ಮನೆತನ ಮತ್ತು ಎರಡು ವಿಭಿನ್ನ ಧರ್ಮ, ಸಂಸ್ಕೃತಿಗಳು ಮದುವೆಯ ನೆಪದಲ್ಲಿ ಹಸ್ತಲಾಘವ ಮಾಡಿದಂತಾಯಿತು.

ಅರಿಶಿನ ಮೆತ್ತಿಕೊಂಡು ನಳನಳಿಸುತ್ತಿದ್ದ ವರ ಹೃತ್ತಿಕ್‌ ಮದುವೆಗೆ ಮುಂಚೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದರು : ನಾನು ಮದುವೆಯಾಗುವುದರಿಂದ ನನ್ನ ಅಭಿಮಾನಿಗಳ ಹೃದಯಕ್ಕೇನೂ ಘಾಸಿಯಾಗುವುದಿಲ್ಲ, ನನ್ನ ಉತ್ತರೋತ್ತರ ಅಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ಅವರು ನನ್ನ ಬೆನ್ನು ತಟ್ಟುತ್ತಾರೆ , ಶುಭಾಶಯಗಳನ್ನು ಕೋರುತ್ತಾರೆ ಎಂದರು.

ಮದುವೆಯ ಸಂಭ್ರಮ ಮತ್ತು ಔಪಚಾರಿಕ ಅಗತ್ಯಗಳು ಇಲ್ಲಿಗೇ ಕೊನೆ ಆಗುವುದಿಲ್ಲ. ಎರಡೂ ಧರ್ಮದ ವಿಧಿ ವಿಧಾನಗಳೊಂದಿಗೆ ಹೃತ್ತಿಕ್‌ ಮತ್ತು ಸೂಜನ್‌ ಮದುವೆ ಆಗಿದ್ದರೂ ಅವರು ಇದೇ ಬುಧವಾರ ರಿಜಿಸ್ಟರ್‌ ಮದುವೆಯಾಗಿ ಕಾನೂನು ಪ್ರಕಾರವೂ ದಂಪತಿ ಎನಿಸುತ್ತಾರೆ. ಹಾಗೆ ನೋಡಿದರೆ ಯಾರು ಯಾವುದೇ ಧರ್ಮ, ಜಾತಿಯ ಪ್ರಕಾರ ಲಗ್ನವಾದರೂ ಕೂಡ ಮದುವೆ ರಿಜಿಸ್ಟರ್‌ ಆಗಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಬಹುತೇಕ ಇಂಡಿಯಾದಲ್ಲಿ ಇದನ್ನೆಲ್ಲ ಯಾರೂ ಗೌರವಿಸುವುದಿಲ್ಲ. ನಮ್ಮ ನೆಲದ ಕಾನೂನನ್ನು ಗೌರವಿಸುತ್ತಲೇ ನಿಕಾ ಮಾಡಿಕೊಂಡು ಸಪ್ತಪದಿ ತುಳಿದ ನವ ವಧೂವರರಿಗೆ ಹಾಗೂ ಅವರಿಗೆ ಮಾರ್ಗದರ್ಶನ ಮಾಡಿದ ಹಿರಿಯರಿಗ ಕನ್ನಡ.ಇಂಡಿಯಾ ಇನ್‌ಫೊ ಡಾಟ್‌ ಕಾಮ್‌ನ ಶುಭಕಾಮನೆಗಳು.

ಅಂದಹಾಗೆ ಸೂಸನ್‌ ಹಾಗೂ ಹೃತಿಕ್‌ ಮದುವೆಯ ನಂತರ ಮಧುಚಂದ್ರಕ್ಕೆ ಯೂರೋಪ್‌ಗೆ ತೆರಳುತ್ತಿದ್ದಾರೆ. ಯೂರೋಪ್‌ನಿಂದ ಮರಳಿದ ನಂತರ ಹೃತಿಕ್‌ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಮದುವೆಗಾಗಿಯೇ ಹೃತಿಕ್‌ ಮೂರು ದಿನ ಬಿಡುವು ಮಾಡಿಕೊಂಡಿದ್ದರು.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X