Get Updates
Get notified of breaking news, exclusive insights, and must-see stories!

ಕನ್ನಡಿಗನಿಗೊಂದು ಗಿಡ : ನೆಡುತ್ತಿದೆ ಆದಿ ಚುಂಚನಗಿರಿ ಸಂಸ್ಥಾನ

ಶಿವಮೊಗ್ಗ : ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠವು ನಾಲ್ಕು ನೂರು ಕೋಟಿ ರೂಪಾಯಿ ವೆಚ್ಚದ ಕರ್ನಾಟಕ ವನ ಸಂವರ್ಧನ ಯೋಜನೆಯನ್ನು ರೂಪಿಸಿದ್ದು , ರಾಜ್ಯದಲ್ಲಿ ಐದು ಕೋಟಿ ಗಿಡ ನೆಡುವ ಗುರಿ ಇಟ್ಟುಕೊಂಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಾಲ ಗಂಗಾಧರನಾಥ ಸ್ವಾಮಿಗಳು, ಈ ಯೋಜನೆಯು ಜನವರಿ 11ರಂದು ಅಸ್ತಿತ್ವಕ್ಕೆ ಬರಲಿದೆ ಎಂದರು. ಇದಕ್ಕಾಗಿ 40 ಮಂದಿ ಸದಸ್ಯರಿರುವ ಕರ್ನಾಟಕ ವನ ಸಂವರ್ಧನ ಟ್ರಸ್ಟ್‌ನ್ನು ರಚಿಸಲಾಗಿದ್ದು, ಈ ಕುರಿತ ಯೋಜನಾ ವರದಿಯನ್ನು ಸದ್ಯದಲ್ಲಿಯೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. ಬಾಲಗಂಗಾಧರನಾಥ ಸ್ವಾಮಿಗಳು ಟ್ರಸ್ಟ್‌ನ ಅಧ್ಯಕ್ಷರಾಗಿದ್ದು ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಕಾರ್ಯದರ್ಶಿ ಯಲ್ಲಪ್ಪ ರೆಡ್ಡಿ ಟ್ರಸ್ಟ್‌ನ ಕಾರ್ಯದರ್ಶಿಯಾಗಿರುತ್ತಾರೆ.

ಯೋಜನೆಯಡಿಯಲ್ಲಿ ಗಿಡ ನೆಡಲು ಹಲವು ಯಂತ್ರಗಳನ್ನು, ಟ್ರಾಕ್ಟರ್‌ ಟ್ಯಾಂಕರ್‌ಗಳನ್ನು ಖರೀದಿಸಿ ಆರು ತಿಂಗಳ ಅವಧಿಯಲ್ಲಿ ಗಿಡಗಳನ್ನು ನೆಡಲಾಗುವುದು. ಪ್ರತಿ ಹತ್ತು ಕಿಲೋ ಮೀಟರ್‌ ವ್ಯಾಪ್ತಿಗೆ ಒಬ್ಬನನ್ನು ಗಿಡಗಳ ರಕ್ಷಣೆಗಾಗಿ ನೇಮಿಸಲಾಗುವುದು. ಪ್ರತಿ 30 ಕಿ.ಮೀ.ಗೆ ಒಂದು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿಗಳು ಟ್ರಸ್ಟ್‌ ಪರಿಸರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಿದೇಶೀ ಸಂಸ್ಥೆಗಳು ಮತ್ತು ಸ್ಥಳೀಯ ಸಂಘಗಳ ನೆರವು

ಈ ಯೋಜನೆಗಾಗಿ ವಿದೇಶೀ ಸಂಸ್ಥೆಗಳ ನೆರವು ಕೋರಲಾಗುವುದು. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಕಾರದೊಂದಿಗೆ ಯೋಜನೆ ಆರಂಭವಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ , ಐದು ಕೋಟಿ ಹಣ್ಣು ಹಂಪಲು ಮತ್ತು ಔಷಧೀಯ ಗಿಡಗಳನ್ನು ನೆಟ್ಟು, ಬೆಳೆಸಿ, ಪೋಷಿಸಲಾಗುವುದು. ನಂತರ ಆಯಾ ಪ್ರದೇಶದಲ್ಲಿ ಸಂಬಂಧ ಪಟ್ಟವರಿಗೆ ಈ ಗಿಡಗಳ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ಸ್ವಾಮೀಜಿ ವಿವರಿಸಿದರು.

ಬಾಲಂಗೋಚಿ : ಉನ್ನತ ಶಿಕ್ಷಣ ಪ್ರಸಾರಕ್ಕಿಂತಲೂ ಗಿಡ ನೆಡುವುದು ಮುಖ್ಯ ಅನ್ನುವುದು ನಮ್ಮ ಇತರ ಜಗದ್ಗುರುಗಳಿಗೆ ಅರ್ಥವಾಗುವುದು ಯಾವಾಗ ?

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+