ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಜಮೀನಿನ ವಿಚಾರಕ್ಕೆ ತಲೆ ಕೆಡಿಕೊಂಡಿದ್ದೀರಿ. ಚಿಂತೆ ಬೇಡ, ಕೋರ್ಟಿನಲ್ಲಿ ನಿಮಗೇ ಜಯ. ಹೊಸ ವ್ಯಾಪಾರ ಪ್ರಾರಂಭಿಸುವ ಯೋಚನೆ ಇದ್ದರೆ ಸದ್ಯಕ್ಕೆ ಬಿಟ್ಟುಬಿಡಿ.ವೃಷಭ : ನಿಮ್ಮ ಪ್ರಪೋಸಲ್‌ಗೆ ಇವತ್ತು ಅಸ್ತು ಸಿಕ್ಕುತ್ತದೆ. ಹಾಗಂತ ವಿಪರೀತ ಭಾವುಕರಾಗದೆ, ಅದನ್ನು ಉಳಿಸಿಕೊಂಡು ಹೋಗುವ ಬಗೆಗೆ ಗಮನವಿರಲಿ.
ಮಿಥುನ : ಒಂದಾದ ಮೇಲೊಂದರಂತೆ ಎರಗುತ್ತಿರುವ ಕಷ್ಟಗಳು ಮಂಕು ಕವಿಸಿವೆ. ಯಾರೊಬ್ಬರನ್ನಾದರೂ ನಂಬಿ. ಎಲ್ಲವನ್ನೂ ಅವರ ಹತ್ತಿರ ಹೇಳಿಕೊಂಡು ಹೃದಯ ಹಗುರ ಮಾಡಿಕೊಳ್ಳಿ.
ಕಟಕ : ಅನಿರೀಕ್ಷಿತ ಹೊಸತುಗಳು ನಿಮ್ಮದಾಗಲಿವೆ. ಹಳೆಯ ಚಿಂತೆ ಬದಿಗೊತ್ತಿ, ನಾಳಿನ ಬಗೆಗೆ ಯೋಚಿಸಿ.
ಸಿಂಹ : ಕುಟುಂಬದವರೆಲ್ಲಾ ನಿಮ್ಮನ್ನು ಹೀಗಳೆಯುವ ದಿನ. ಕೆಲ ದಿನಗಳಿಂದ ಕಚೇರಿ ಕೆಲಸದಲ್ಲೇ ಮುಳುಗಿರುವ ನಿಮ್ಮಂಥವರಿಗೆ ಇದು ಮಾಮೂಲು. ನೆಟ್ಟ ಬಾಣದ ಗುರಿ ಬದಲಿಸಬೇಡಿ.
ಕನ್ಯಾ : ಯಾರದೋ ಸಮಸ್ಯೆ ಬಿಡಿಸಲು ಹೋಗಿ ನೀವೇ ತಗಲಿ ಹಾಕಿಕೊಂಡಿದ್ದೀರಿ. ಇದೊಂದು ದೊಡ್ಡ ಪಾಠ. ಎರಡು ದಿನ ರಜಾ ಹಾಕಿ ಎಲ್ಲಾದರೂ ಸುತ್ತಿ ಬನ್ನಿ.
ತುಲಾ : ಬಹುದಿನಗಳಿಂದ ನೀವು ನಿರೀಕ್ಷಿಸುತ್ತಿರುವ ಗೆಳೆಯನ ಭೇಟಿ. ನಿಮ್ಮ ಕಾರ್ಯಕ್ರಮಗಳು ಅಂದುಕೊಂಡಂತೆ ನಡೆಯದಿದ್ದರೂ ಅದರಿಂದ ನಿಮಗೇ ಒಳಿತೇ ಆಗಲಿದೆ.
ವೃಶ್ಚಿಕ : ತಲೆ ಒಡೆದು ತಿನ್ನುವ ಯೋಚನೆ ಕೊರೆಯುತ್ತಿದೆ. ಬಿಟ್ಟುಬಿಡಿ. ಹಾಗೆ ಸಿಕ್ಕುವುದು ನಿಮಗೆ ದಕ್ಕದು. ವೃಥಾ ಹುಚ್ಚು ನಿರ್ಧಾರ ಬೇಡ.
ಧನಸ್ಸು : ಅದಾವುದೋ ಹೊಸ ಷೇರು ಕೊಳ್ಳಬೇಕೆಂದಿದ್ದೀರಲ್ಲ. ಬೇಡ. ಹಣವನ್ನು ಬೇರೆಡೆ ತೊಡಗಿಸಿ.
ಮಕರ : ಎಲ್ಲಾ ಉಂಟು, ನೆಮ್ಮದಿ ಇಲ್ಲ. ಸಂಜೆ ಒಂದೆರಡು ತಾಸು ಬಿಡುವು ಮಾಡಿಕೊಂಡು, ಹೆಂಡತಿ ಮಕ್ಕಳ ಜೊತೆ ದೇವಸ್ಥಾನಕ್ಕೆ ಹೋಗಿ.
ಕುಂಭ : ಲಲಿತ ಕಲೆಯ ಪೂರ್ಣ ಸಿದ್ಧಿ. ಬಹು ದಿನಗಳ ಅನಾರೋಗ್ಯ ಸಮಸ್ಯೆ ನಿವಾರಣೆ. ಹೊಸ ಕೆಲಸದ ಆಫರ್.
ಮೀನ : ಎರಡನ್ನು ಹತ್ತು ಮಾಡಿ, ಬೊಬ್ಬೆ ಹೊಡೆಯೋದು ಬೇಡ. ನೀವು ಮಾಡುವ ನೇಮಗಳನ್ನು ನೀವೇ ಮೀರುವುದರಿಂದ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ. ಆಡಿದಂತೆ ನಡೆದಲ್ಲಿ ಎಲ್ಲಾ ಸಮಸ್ಯೆ ಬಗೆಹರಿದೀತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications