Get Updates
Get notified of breaking news, exclusive insights, and must-see stories!

ಸಾವಿರ ಸುದ್ದಿಯ ಬೀರುತ ಬರುವನು,ತುಂಬಿದ ಚೀಲವು ಹೆಗಲೊಳಗೆ...

ಬೆಂಗಳೂರು : ಎರಡು ಕಾರ್ಮಿಕ ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿದ ಪರಿಣಾಮವಾಗಿ 14ನೇ ದಿನವಾದ ಸೋಮವಾರ ರಾಜ್ಯದ ಅಂಚೆ ಕಚೇರಿಗಳಲ್ಲಿ ಹಾಜರಾತಿ ಕಂಡುಬಂತು. ಭಾನುವಾರ ದೆಹಲಿಯಲ್ಲಿ ನಡೆದ ಮಾತುಕತೆಗಳ ಪರಿಣಾಮವಾಗಿ ರಾಜ್ಯದಲ್ಲೂ ಅಂಚೆ ನೌಕರರು ತಮ್ಮ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾದರು.

ರಾಜ್ಯದಲ್ಲಿ ಸುಮಾರು ಅರ್ಧದಷ್ಟು ಅಂಚೆ ಉದ್ಯೋಗಿಗಳು ಸೋಮವಾರ ಕೆಲಸಕ್ಕೆ ಹಾಜರಾಗಿದ್ದು, ಮಂಗಳವಾರದ ಹೊತ್ತಿಗೆ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ ಎಂದು ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಅವರ ಕಚೇರಿ ಮೂಲಗಳು ತಿಳಿಸಿವೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಅಂಚೆ ಮುಷ್ಕರ ಸೋಮವಾರ ಸಂಪೂರ್ಣ ಯಶಸ್ವಿಯಾಗಿತ್ತು. ಡಿಸೆಂಬರ್‌5ನೇ ತಾರೀಖಿನಿಂದಲೂ ಅಂಚೆ ನೌಕರರು ಅನಿರ್ದಿಷ್ಟ ಕಾಲಾವಧಿ ಮುಷ್ಕರದಲ್ಲಿ ತೊಡಗಿದ್ದರಿಂದ ರಾಜ್ಯದಲ್ಲಿ ಅಂಚೆ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ರಾಜ್ಯದ ಬಹುತೇಕ ಅಂಚೆ ಕಚೇರಿಗಳಲ್ಲಿ ಸೋಮವಾರ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು, ಇನ್ನು ಒಂದೆರಡು ದಿನದಲ್ಲೇ ಅಂಚೆ ಸೇವೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂಬ ಆಶಾಭಾವನೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮೂರು ಕಾರ್ಮಿಕ ಸಂಘಟನೆಗಳ ಪೈಕಿ ಎನ್‌.ಎಫ್‌.ಪಿ.ಯು.ಇ. ಮಾತ್ರ ಸೋಮವಾರ ಮಧ್ಯಾಹ್ನದವರೆಗೂ ತನ್ನ ಪಟ್ಟು ಸಡಿಲಿಸಿರಲಿಲ್ಲ. ಸಂಜೆಯ ವೇಳೆಗೆ ದೊರಕಿರುವ ವರ್ತಮಾನದ ಪ್ರಕಾರ ಎನ್‌ಎಫ್‌ಪಿಯುಇ ಸಹ ಕೆಲಸಕ್ಕೆ ಹಾಜರಾಗಲು ಸಮ್ಮತಿಸಿದೆ.

ಮೈಸೂರು ವರದಿ: ಕಳೆ--ದ 13 ದಿನ-ಗ-ಳಿಂ-ದ ಸ್ಥಗಿ-ತ-ಗೊಂ-ಡಿ-ದ್ದ ಅಂಚೆ ಸೇವೆ ಮೈಸೂರು -ನ-ಗ-ರ ಸೇರಿ-ದಂ-ತೆ ಸುತ್ತ-ಮು-ತ್ತ-ಲ ಪ್ರದೇ-ಶ-ಗ-ಳ-ಲ್ಲಿ ಪುನಾ-ರಂ-ಭ-ಗೊಂ-ಡಿದ್ದು, ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಹು-ತೇ-ಕ ಉದ್ಯೋ-ಗಿ-ಗ-ಳು ಸೋಮವಾರ ಕೆಲ-ಸ-ಕ್ಕೆ ಹಾಜ-ರಾ-ಗಿ-ದ್ದು, ನೌಕ-ರ ಸಂಘ-ಟ-ನೆ-ಗ-ಳ ಸಂದೇ-ಶ ಬಂದ ನಂತ-ರ ಸುಮಾ-ರು ಎರ-ಡು ಗಂಟೆ ತಡ-ವಾ-ಗಿ ಕೆಲ-ಸ ಪುನಾ-ರಂ-ಭ-ಗೊ-ಂ-ಡಿ-ತೆಂ-ದು ಅಧಿ-ಕಾ-ರಿ-ಗ-ಳು ತಿಳಿ-ಸಿ-ದ್ದಾ-ರೆ.

ಹುಬ್ಬಳ್ಳಿ ವರದಿ : ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳಲ್ಲಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲೂ ಸೋಮವಾರ ಅಂಚೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಧಾರವಾಡದ ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ( ಯು.ಎನ್‌.ಐ, ಇನ್‌ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+