ಸಂಘಟನೆಗಳಲ್ಲಿ ಒಡಕು : ಮುಷ್ಕರ ಕೈಬಿಡಲು ಎರಡು ಒಕ್ಕೂಟಗಳ ನಿರ್ಧಾರ
ನವದೆಹಲಿ : ವೇತನ ಪರಿಷ್ಕರಣೆಗೆ ಸಂಬಂಧಿಸಿ ಮುಷ್ಕರ ಹೂಡಿರುವ ಅಂಚೆ ನೌಕರರ ಸಂಘಟನೆಗಳಲ್ಲಿ ನ ಒಡಕು ಬಹಿರಂಗವಾಗಿದ್ದು, ಎರಡು ಸಂಘಟನೆಗಳು ಮುಷ್ಕರ ನಿಲ್ಲಿಸಲು ಭಾನುವಾರ ರಾತ್ರಿ ನಿರ್ಧರಿಸಿವೆ. ಇದರಿಂದಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದ ಅಂಚೆ ಸೇವೆ ಸೋಮವಾರದಿಂದ ಸ್ವಲ್ಪ ಮಟ್ಟಿಗೆ ಶುರುವಾಗುವ ನಿರೀಕ್ಷೆಯಿದೆ.
ಕೇಂದ್ರ ಸಂಪರ್ಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಅಂಚೆ ನೌಕರರ ಸಂಘಟನೆಗಳ ನಡುವೆ ಭಾನುವಾರ ನಡೆದ ಮಾತುಕತೆಯ ಸಂದರ್ಭದಲ್ಲಿ ಏರ್ಪಟ್ಟಿರುವ ಒಪ್ಪಂದದ ಹಿನ್ನೆಲೆಯಲ್ಲಿ ನ್ಯಾಷನಲ್ ಪೋಸ್ಟಲ್ ಆರ್ಗನೈಸೇಷನ್ ಮತ್ತು ಭಾರತೀಯ ಪೋಸ್ಟಲ್ ಯೂನಿಯನ್‌ಗಳು ಮುಷ್ಕರವನ್ನು ಅಂತ್ಯಗೊಳಿಸಲು ನಿರ್ಧರಿಸಿವೆ ಎಂದು ಎರಡೂ ಸಂಘಟನೆಗಳ ಕಾರ್ಯದರ್ಶಿಗಳು ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೌಕರರ ಬೇಡಿಕೆಗಳಲ್ಲಿ , ಪಿಂಚಣಿ ಬದಲು ಸಾಮಾಜಿಕ ಭದ್ರತಾ ಉಪಯೋಗಿ ಯೋಜನೆಯನ್ನು ಕಾರ್ಯಗತ ಗೊಳಿಸಲು ಮತ್ತು ಅಂಚೆ ಲೆಕ್ಕ ಪತ್ರ ಮತ್ತು ಮೇಲ್ ಮೋಟಾರು ಸೇವಾ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಡರ್ ಪರಿಷ್ಕರಣೆಗೆ ಸರಕಾರ ಒಪ್ಪಿಕೊಂಡಿದ್ದು, ಬೋನಸ್ ಮತ್ತು ವೇತನ ಪರಿಷ್ಕರಣೆ ಕುರಿತು ಪರಿಶೀಲಿಸುವುದಾಗಿ ಸಂಪರ್ಕ ಸಚಿವರು ಹೇಳಿದ್ದಾರೆ.
ಈ ನಡುವೆ ಸಿಪಿಎಂಗೆ ಸೇರಿದೆ ಎನ್‌ಎಫ್‌ಪಿಇ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದೆ ಎನ್‌ಎಫ್‌ಪಿಇಯ ಕಾರ್ಯದರ್ಶಿ ಆರ್. ಎಲ್. ಭಟ್ಟಾಚಾರ್ಯ ಹೇಳಿದ್ದಾರೆ. ಕಾರ್ಮಿಕ ಚಳುವಳಿಯಲ್ಲಿ ರಾಜಕೀಯ ಬೇರೆಸುವ ಮೂಲಕ ದ್ರೋಹ ಬಗೆಯಲಾಗಿದೆ ಎಂದು ಅವರು ದೂರಿದರು. ಎನ್‌ಎಫ್‌ಪಿಇ ಸೋಮವಾರದಂದು ಸಭೆ ಸೇರಲಿದ್ದು ತನ್ನ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಎರಡು ಸಂಘಟನೆಗಳು ಮುಷ್ಕರ ಕೈ ಬಿಟ್ಟಿದ್ದರೂ ಸುಮಾರು 70 ಶೇಕಡಾ ಮಂದಿ ಎನ್‌ಎಫ್‌ಪಿಇ ಸಂಘಟನೆಗೆ ಸೇರಿರುವುದರಿಂದ ಸದ್ಯದಲ್ಲಿಯೇ ಅಂಚೆ ಸೇವೆ ಮಾಮೂಲು ಸ್ಥಿತಿಗೆ ಬರಬಹುದು ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications