ಚಳಿಗೆ ಸೆಡ್ಡು ಹೊಡೆದ ಹೆಂಗಳೆಯರು
ನೆನ್ನೆ ಸಂಜೆಯವರೆಗೂ ಚಳಿ.. ತಾ ಕಂಬಳಿ ಎಂದು ಮುಸುಕು ಎಳೆಯುತ್ತಿದ್ದ ಹೆಣ್ಣು , ಚಳಿ.. ನಿನ್ನಾಟ ನಡೆಯಾಲ್ಲ ನಂ ಬಳಿ ಎಂದು ಶನಿವಾರ ಮುಂಜಾವು ಚಳಿಯನ್ನು ಲೆಕ್ಕಕ್ಕಿಡಲಿಲ್ಲ . ಮನೆ ಮಕ್ಕಳೆಲ್ಲ ದುಪ್ಪಟಿಯಲ್ಲಿ ಮೈ ಹಿಡಿಯಾಗಿಸಿ ಮುದುಡಿಕೊಂಡಿದ್ದರೆ ಮನೆಯಾಕೆ ನಸುಕಿಗೇ ಮಿಂದು ಪೂಜಾಕಾರ್ಯದಲ್ಲಿ ಮಗ್ನ. ದೇಗುಲಗಳ ತುಂಬಾ ಹೆಂಗಳೆಯರ ಹಿಂಡು.
ಚಳಿಗಾಲದ ಮುಂಜಾವಿನ ಸೊಗಸೇ ಬೇರೆ. ದಪ್ಪ ಹೊದ್ದಿಕೆಯಾಳಗೆ ಮರೆಸಿಕೊಳ್ಳುವ ದೇಹಕ್ಕೆ ಬೆಳಗಾಗುವುದೂ ಬೇಡ, ಏಳುವುದೂ ಬೇಡ . ಆದರೆ, ಪೂಜೆ ಪುನಸ್ಕಾರದ ಎದುರು ಯಾವ ಚಳಿ ನಿಂತೀತು. ಧನುರ್ಮಾಸಕ್ಕೆ ಶನಿವಾರದಿಂದ ಚಾಲನೆ ದೊರೆತಿದೆ. ಹಿಂದೂ ನಂಬಿಕೆಗಳ ಪ್ರಕಾರ, ಧನುರ್ಮಾಸ ಕಾಲದ ಮುಂಜಾವಿನ ಪೂಜೆ ದೇವರ ಕರೆಯುವ ಅಮೃತ ಗಳಿಗೆ. ಆ ಅಪರೂಪದ ಮುಹೂರ್ತದ ಸಂದರ್ಭದಲ್ಲಿ ಮನೆ ಮಂದಿಗೆಲ್ಲ ಒಳ್ಳಿತಾಗಲಿ ಎಂದು ಸದಾ ಹಾರೈಸುವ ಹೆಣ್ಣು ಯಾವ ಚಳಿ ತನ್ನ ಆಟ ಕಟ್ಟಲು ಅವಕಾಶ ಮಾಡಿಕೊಟ್ಟಾಳು. ಒಟ್ಟಿನಲ್ಲಿ ಹಳ್ಳಿ- ಪಟ್ಟಣ ಬೇಧವಿಲ್ಲದೆ ಬಹುತೇಕ ಹೆಂಗಳೆಯರು ಚಳಿಗೆ ಸೆಡ್ಡು ಹೊಡೆದು ನಿಂತಿದ್ದಾರೆ.
ಧನುರ್ಮಾಸ ಹೊಸ್ತಿಲ ದಾಟುವ ಹೊತ್ತಿನಲ್ಲಿ ಒಣಹವೆ ರಾಜ್ಯದ್ಯಾಂತ ಮುಂದುವರಿದಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಉಷ್ಣಾಂಶದಲ್ಲಿ ಏರಿಕೆಯಾಗುವ ನಿರೀಕ್ಷೆಗಳಿಲ್ಲ . ಬೆಂಗಳೂರಿನಲ್ಲಿ ಭಾನುವಾರದ ರಜೆಗೆ ಅನುಕೂಲವಾಗುವಂತೆ ಶುಭ್ರಆಕಾಶವಿರುತ್ತದೆ. ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications