ಪ್ರಭಾಕರ್ ಫ್ಲಾಟ್‌ಗೆ ನುಗ್ಗಲು 7 ಮಂದಿ ಯತ್ನ, ಗಾರ್ಡ್ ಮೇಲೆ ಹಲ್ಲೆ
ನವದೆಹಲಿ : ಆಜೀವ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರ ದಕ್ಷಿಣ ದೆಹಲಿಯಲ್ಲಿರುವ ಫ್ಲಾಟ್‌ಗೆ ಶನಿವಾರ ಬೆಳಗಿನ ಜಾವ 7 ಮಂದಿ ನುಗ್ಗಲೆತ್ನಿಸಿದ್ದು, ಗೇಟಿನ ಬಳಿಯಿದ್ದ ಭದ್ರತಾ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಮನೋಜ್ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಘಟನೆ ಕುರಿತು ಮಾಹಿತಿ ಹೆಕ್ಕಲು ಕೆಲ ಪೊಲೀಸ್ ಪೇದೆಗಳನ್ನು ಕಳುಹಿಸಿದ್ದೇವೆ. ಈಗಾಗಲೇ ಪ್ರಭಾಕರ್ ರಕ್ಷಣೆಗೆ ನಿಯೋಜಿಸಲಾಗಿರುವ ಖಾಸಗಿ ಭದ್ರತಾ ಪೇದೆಗಳಿಂದಲೂ ಸಾಕಷ್ಟು ವಿಷಯ ಸಂಗ್ರಹಿಸಲಿದ್ದೇವೆ ಎಂದು ಕಲ್ಕಾಜಿ ಪೊಲೀಸ್ ಠಾಣೆಯ ಪೊಲೀಸ್ ತಿಳಿಸಿದ್ದಾರೆ.
ಶನಿವಾರ ಬೆಳಗಿನ ಜಾವ ಸುಮಾರು ಎರಡೂಕಾಲು ಗಂಟೆ. 7 ಜನ ನನ್ನನ್ನು ಸುತ್ತುವರಿದರು. ಪ್ರಭಾಕರ್ ಫ್ಲಾಟ್ ನಂಬರ್ ಕೇಳಿದರು. ನಾನು ಹೇಳಲಿಲ್ಲ. ಏನೇನೋ ಬೆದರಿಕೆ ಹಾಕಿದರು. ಯಾವುದಕ್ಕೂ ಜಗ್ಗದ್ದಕ್ಕೆ ನನ್ನನ್ನು ಥಳಿಸಿದರು ಎನ್ನುತ್ತಾರೆ ಭದ್ರತಾ ವ್ಯಕ್ತಿ ಕಾಂಶಿ ರಾಮ್.
ಸದ್ಯಕ್ಕೆ ಸರ್ಕಾರ ನನಗೆ ಪೊಲೀಸ್ ಭದ್ರತೆ ಕೊಟ್ಟಿದೆ. ಇದನ್ನು ನನ್ನ ಕುಟುಂಬದವರಿಗೂ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೆಹಲಿ ಪೊಲೀಸ್ ಕಮಿಷನರ್‌ಗೆ ಕೋರಿಕೆ ಪತ್ರ ಸಲ್ಲಿಸಿದ್ದೇನೆ. ಇದೇನೂ ಮೊದಲಲ್ಲ. 3 ವರ್ಷಗಳ ಹಿಂದೆ ಮ್ಯಾಚ್‌ಫಿಕ್ಸಿಂಗ್ ಬಗ್ಗೆ ಸೊಲ್ಲೆತ್ತಿದಾಗಿನಿಂದಲೂ ನನಗೆ ಆಗಾಗ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. 1997ರಲ್ಲಿ ಒಮ್ಮೆಯಂತೂ ನನ್ನ ಮೇಲೆ ಬಂದೂಕಿನ ಗುರಿಯೇ ಇತ್ತು. ಈಗ ನನ್ನ ಹೆಂಡತಿಗೆ ಬೆದರಿಕೆ ಕರೆಗಳು ಬರತೊಡಗಿವೆ. ಇವೆಲ್ಲಾ ನನ್ನ ಬಾಯಿ ಮುಚ್ಚಿಸುವ ಮಾರ್ಗಗಳಷ್ಟೆ ಎಂದು ಪ್ರಭಾಕರ್ ಹೇಳಿದ್ದಾರೆ.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications