Get Updates
Get notified of breaking news, exclusive insights, and must-see stories!

ಮೊದಲ ಇನಿಂಗ್ಸ್‌ : ವಿಂಡೀಸ್‌- 391, ಆಸ್ಟ್ರೇಲಿಯಾ-180/3

ಅಡಿಲೇಡ್‌ : ವಿಂಡೀಸ್‌ ವಿರುದ್ಧ ಇಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೇ ದಿನದ ಕೊನೆಗೆ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು . ವಿಂಡೀಸ್‌ನ ಮೊದಲ ಇನಿಂಗ್ಸ್‌ ಮೊತ್ತವನ್ನು ಸರಿಗಟ್ಟಲು ಕೈಲಿರುವ 7 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಇನ್ನೂ 211 ರನ್‌ ಗಳಿಸಬೇಕಾಗಿದೆ.

ಇದಕ್ಕೂ ಮುನ್ನ ಮೊದಲ ದಿನದ ಕೊನೆಗೆ 274 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ತಂಡ, ಶನಿವಾರ ತನ್ನ ಆಟ ಮುಂದುವರೆಸಿ 391 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಶುಕ್ರವಾರ ಸೆಂಚುರಿ ಬಾರಿಸಿ ಅಜೇಯರಾಗಿದ್ದ ಬ್ರಿಯಾನ್‌ ಲಾರಾ ಇಂದಿನ ಆಟದಲ್ಲಿ ವೈಯಕ್ತಿಕ ಮೊತ್ತ 180 ರನ್‌ಗಳಾಗಿದ್ದಾಗ ಔಟಾದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದವರ ನಾಲ್ಕನೇ ಅತ್ಯುತ್ತಮ ಮೊತ್ತ . ಉಳಿದಂತೆ ವಿಂಡೀಸ್‌ನ ಕೊನೆಯ ವಿಕೆಟ್‌ಗಳು ಕೇವಲ 37 ರನ್‌ ಅಂತರದಲ್ಲಿ ಉರುಳಿದವು. ಆಸ್ಟೇಲಿಯಾ ಪರ ಆಫ್‌ ಸ್ಪಿನ್ನರ್‌ ಮಿಲ್ಲರ್‌ ಹಾಗೂ ವೇಗದ ಬೌಲರ್‌ ಗಿಲೆಸ್ಪಿ ತಲಾ 5 ವಿಕೆಟ್‌ ಪಡೆದರು. ಸತತ ಎರಡು ಎಸೆತಗಳಲ್ಲಿ ವಿಂಡೀಸ್‌ನ ಕೊನೆಯ 2 ವಿಕೆಟ್‌ಗಳನ್ನು ಕಿತ್ತಿರುವ ಮಿಲ್ಲರ್‌, 2ನೇ ಇನ್ನಿಂಗ್ಸ್‌ನ ತಮ್ಮ ಮೊದಲ ಎಸೆತದಲ್ಲೇನಾದರೂ ವಿಕೆಟ್‌ ಕಿತ್ತಲ್ಲಿ ಹ್ಯಾಟ್ರಿಕ್‌ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಇನಿಂಗ್ಸ್‌ ಪ್ರಾರಂಭಿಸಿದ ಮೈಕೆಲ್‌ ಸ್ಲೇಟರ್‌ ಹಾಗೂ ಮ್ಯಾಥ್ಯೂ ಹೇಡನ್‌ ಮೊದಲ ವಿಕೆಟ್‌ ಜೊತೆಯಾಟಕ್ಕೆ 156 ರನ್‌ ಗಳಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಸ್ಲೇಟರ್‌ 83 ರನ್‌ ಗಳಿಸಿ ಸ್ಯಾಮ್ಯುಯಲ್ಸ್‌ಗೆ ಬಲಿಯಾದರೆ, ಹೇಡನ್‌ 58 ರನ್‌ ಗಳಿಸಿ ರನ್ನೌಟಾದರು. ಜಸ್ಟಿನ್‌ ಲ್ಯಾಂಗರ್‌ 6 ರನ್‌ ಗಳಿಸಿ ಸ್ಯಾಮ್ಯುಯಲ್ಸ್‌ಗೆ ಎರಡನೆ ಬುತ್ತಿಯಾದರು. ದಿನದ ಕೊನೆಗೆ 10 ರನ್‌ ಗಳಿಸಿದ ಮಾರ್ಕ್‌ ವಾ ಹಾಗೂ 2 ರನ್‌ ಗಳಿಸಿರುವ ರಾತ್ರಿ ಕಾವಲುಗಾರ ಗಿಲೆಸ್ಪಿ ಕ್ರೀಸ್‌ನಲ್ಲಿದ್ದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+