ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಪೂರ್ವ ನಿಯೋಜಿತ ಕೆಲಸವನ್ನು ಕೈಗೆತ್ತಿಕೊಳ್ಳಲು ಹೇಳಿ ಮಾಡಿಸಿದ ದಿನ. ಮಾಡಿದ ಕೆಲಸಕ್ಕೆ ಪ್ರತಿಫಲವೂ ಸಿಗುವ ಸಾಧ್ಯತೆ ಇದೆ.ವೃಷಭ : ಯಾರಿಗೆ ಯಾರುಂಟು ಎಂದು ಗೊಣಗಬೇಕಾದ ಕಾಲ ಹೋಯಿತು. ಹೊಸ ದಾರಿಯಲ್ಲಿ ನಡೆಯಲು ಗುರಿ ಸರಿಯಾದ ದಿಕ್ಕಿನಲ್ಲಿರಲಿ. ಆಲ್ ದಿ ಬೆಸ್ಟ್.
ಮಿಥುನ : ಆತ್ಮ ಸಾಕ್ಷಿಯೆಂದರೆ ಏನು ಎಂದು ಕೇಳಿಕೊಳ್ಳುವ ಗೊಂದಲದಲ್ಲಿ ನೀವಿದ್ದೀರಿ, ಹಾಗಂತ ಗೊಂದಲಗೊಳ್ಳಬೇಕಾದ ಅಗತ್ಯವಿಲ್ಲ. ಎಡವುವ ಕಲ್ಲಿಗೆ ನಮಸ್ಕರಿಸುವುದನ್ನು ಕಲಿತುಕೊಳ್ಳಿ.
ಕಟಕ : ಇನ್ನು ಯಾಕ ಬರಲಿಲ್ಲವ್ವ ಅಂತ ಕಾಯಬೇಕಾದ ಸ್ಥಿತಿ ಈಗಿಲ್ಲ. ನಿರೀಕ್ಷಿತ ಸುದ್ದಿಗಳು ಬೇಗ ತಲುಪಲಿವೆ. ಹಾಯಾಗಿರಿ. ಸಂಜೆಯ ಆಹ್ಲಾದತೆ ನಿಮ್ಮ ಮನವನ್ನು ಸೂರೆಗೊಳ್ಳಲಿದೆ.
ಸಿಂಹ :ಯಾಕೋ ಲೆಕ್ಕಾಚಾರ ತಪ್ಪುತ್ತಿದೆ ಎನಿಸುತ್ತಿದೆಯೇ? ಅಂದುಕೊಂಡ ಹಾಗೆ ಆಗಬೇಕೆಂದು ಯೋಚಿಸಿದರೆ ಮಾತ್ರ ಈ ರೀತಿಯ ಗೊಂದಲ ಉಂಟಾಗಲು ಸಾಧ್ಯ ತಲೆ ಕೆಡಿಸಿಕೊಳ್ಳಬೇಡಿ.
ಕನ್ಯಾ :ಎಲ್ಲಕ್ಕೂ ಕಾಲ ಕೂಡಿ ಬರಬೇಕೆಂಬ ನಿಮ್ಮ ಹಳೆಯ ನಿಲುವಿಗೆ ಇವತ್ತು ಸಮಾಧಾನಕರ ಉತ್ತರ ಸಿಗಲಿದೆ. ತಾಳ್ಮೆ ಬಹಳ ಮುಖ್ಯ. ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ.
ತುಲಾ : ಆಶ್ಚರ್ಯಕರ ಸುದ್ದಿ ಕಾದಿದೆ. ಹೊಸ ಕನಸಿನ ಸರದಾರರು ನೀವಾಗುತ್ತೀರಿ. ಹೆಚ್ಚು ನಿರೀಕ್ಷೆ ಬೇಡ ನಿರಾಶೆಯಾದೀತು. ದುಗುಡ ಕಳೆಯಲಿದೆ.
ವೃಶ್ಚಿಕ : ಇಷ್ಟಪಡುವುದು ಯಾವಾಗಲೂ ಸಿಗಬೇಕೆಂಬ ನಿಯಮವೆನೂ ಇಲ್ಲವಲ್ಲ. ಜಗತ್ತೆಲ್ಲಾ ಹಾಗೆಯೇ ನಮಗಿಂತ ಕೆಳಗಿನವರನ್ನು ನೋಡುವುದನ್ನು ಬಿಟ್ಟು ಮೇಲಿನವರನ್ನು ನೋಡಿ ಗೊಂದಲಗೊಳ್ಳುತ್ತದೆ.
ಧನಸ್ಸು : ನೀವು ಯಾವುದಕ್ಕೆ ಹೊರತು ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ. ಕೆಲಸದಲ್ಲಿ ಕಿರಿಕಿರಿ ವ್ಯವದಾನದಿಂದ ವರ್ತಿಸಿ. ಜಯ ನಿಮ್ಮದು.
ಮಕರ : ನಿಮ್ಮ ಮಹಾತ್ವಾಕಾಂಕ್ಷೆಗಳೇ ಹಾಗೆ. ಮಾನಸಿಕವಾಗಿ ತುಂಬಾ ದುರ್ಬಲರಾದ ನಿಮಗೆ ಯಾವುದನ್ನೂ ತಡೆದುಕೊಳ್ಳುವ ಶಕ್ತಿ ಇಲ್ಲ. ಇದು ನಿಮ್ಮ ದೌರ್ಬಲ್ಯವಾಗಬಾರದಲ್ಲವೇ?
ಕುಂಭ : ವಟಗುಟ್ಟುವುದನ್ನು ಮೊದಲು ನಿಲ್ಲಿಸಿ. ಇದೇ ನಿಮ್ಮ ನೆಮ್ಮದಿಗೆ ಪದೇ ಪದೇ ಅಡ್ಡಬರುವ ಹಿತಶತ್ರು. ಜಗತ್ತು ಹಾಳಾಗುವುದಿದ್ದರೆ ನೀವು ತಡೆಯಲು ಯಾರು?
ಮೀನ : ನಿಂದಿಸುವವರು ಊರಿಗೆ ಹಂದಿಗಳಿದ್ದಂತೆ ಎಂಬ ನಿಮ್ಮ ಧೋರಣೆ ಮುಂದುವರಿಯಲಿ. ನಿಜಕ್ಕೂ ನಿಮ್ಮ ಮುಂದೆ ಮತ್ತೊಮ್ಮೆ ಹೊಸ ಸವಾಲುಗಳು ಬಂದು ನಿಂತಿವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications