ತಾಯ್ನಾಡಿನ ಋಣ ತೀರಿಸಿದೆ - ಶತಕ ವೀರ ಬ್ರಿಯಾನ್ ಲಾರಾ
ಅಡಿಲೇಡ್ : ಅಂತೂ ಬ್ರಿಯಾನ್ ಲಾರಾ ತಮ್ಮ ವೈಫಲ್ಯದ ಸುಳಿಯಿಂದ ಹೊರ ಬಂದಿದ್ದಾರೆ. ಅವರದ್ದು ಫೀನಿಕ್ಸ್ ಹುಟ್ಟು . ಮೊದಲೆರಡು ಟೆಸ್ಟ್ಗಳಲ್ಲಿ ಮೆಕ್ಗ್ರಾತ್ ವೇಗಕ್ಕೆ ದಯನೀಯ ತುತ್ತಾಗಿದ್ದ ಲಾರಾ ಸೇಡು ತೀರಿಸಿಕೊಂಡಿದ್ದಾರೆ. ಅವರ ಅಜೇಯ 136 ರನ್ಗಳಿಂದಾಗಿಯೇ ವಿಂಡೀಸ್ ತಂಡ ಶುಕ್ರವಾರ ಪ್ರಾರಂಭವಾದ ಮೂರನೇ ಟೆಸ್ಟ್ ನ ಮೊದಲನೇ ದಿನದ ಕೊನೆಗೆ 4 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಲು ಶಕ್ತವಾಯಿತು. ಇದು ಪ್ರಸಕ್ತ ಟೂರ್ನಿಯಲ್ಲಿ ವಿಂಡೀಸ್ನ ಅಧಿಕ ಮೊತ್ತ .
ನಾನು ತಾಯ್ನಾಡಿನ ಋಣ ತೀರಿಸಿದೆ. ದಿನದ ಕೊನೆಗೆ ಯಶಸ್ಸನ್ನು ಮಾತುಗಳಲ್ಲಿ ಹಂಚಿಕೊಂಡ ಲಾರಾ ವರಸೆಯಿದು. ನಾವು ಅತೀವ ಒತ್ತಡದಲ್ಲಿದ್ದೆವು. ಆದರೆ, ಅದನ್ನು ದಾಟುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಅವರ 136 ರನ್ಗಳಲ್ಲಿ 21 ಬೌಂಡರಿಗಳು ಹಾಗೂ 1 ಭರ್ಜರಿ ಸಿಕ್ಸರ್ ಇತ್ತು . ಅವರ ಬ್ಯಾಟಿಂಗ್ ಭರಾಟೆಯೆದುರು ಮೆಕ್ಗ್ರಾತ್ ಮಂಕಾದರು. ಈ ಮೊದಲ ನಾಲ್ಕು ಇನಿಂಗ್ಸ್ಗಳಲ್ಲಿ ಎರಡು ಶೂನ್ಯ ಸೇರಿದಂತೆ 21 ರನ್ಗಳನ್ನು ಲಾರಾ ಗಳಿಸಿದ್ದರು. ಕಳೆದ ವಾರ ತಾನೇ ಅವರು ಆಸ್ಟ್ರೇಲಿಯಾ ಎ ತಂಡದ ವಿರುದ್ಧ ದ್ವಿಶತಕ ಗಳಿಸಿದ್ದರು.
ಲಾರಾ ಅವರಿಗೆ ತಂಡದ ನಾಯಕ ಜಿಮ್ಮಿ ಆ್ಯಡಂಸ್ ಉತ್ತಮ ಬೆಂಬಲ ನೀಡಿದರು. ಅವರು 49 ರನ್ ಗಳಿಸಿ ಔಟಾದರು. ಉಳಿದಂತೆ ಕ್ಯಾಂಬೆಲ್ 18, ಗಂಗಾ 23 ಹಾಗೂ ಹಿಂಡ್ಸ್ 27 ರನ್ ಗಳಿಸಿದರು. ಬಿದ್ದ ನಾಲ್ಕೂ ವಿಕೆಟ್ಗಳನ್ನು ಗಿಲೆಸ್ಪಿ ಗಿಟ್ಟಿಸಿದರು.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications