ಕುದುರೆಮುಖ ಅದಿರು ಕಂಪನಿಗೆ ಐಎಸ್ಓ 14001 ಪ್ರಮಾಣ ಪತ್ರ
ಬೆಂಗಳೂರು : ಬಾಗಿಲು ಹಾಕೋ ಪರಿಸ್ಥಿತಿ ಬಂದೊದಗಿ, ಈಗ ಒಂದು ವರ್ಷದ ಗುತ್ತಿಗೆ ವಿಸ್ತರಣೆಯ ಕೃತಕ ಆಮ್ಲಜನಕದಿಂದ ಉಸಿರಾಡುತ್ತಿರುವ ಸಾರ್ವಜನಿಕ ವಲಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಓಸಿಎಲ್) ಗೆ ಐಎಸ್ಓ 14001 ಪ್ರಮಾಣ ಪತ್ರ ದೊರೆತಿದೆ. ಪರಿಸರ ತಜ್ಞರು ಕಂಪನಿ ಬಗ್ಗೆ ಚಕಾರ ಎತ್ತುತ್ತಿದ್ದರೂ ಪರಿಸರ ನಿರ್ವಹಣಾ ವ್ಯವಸ್ಥೆಯೇ ಈ ಪ್ರಮಾಣ ಪತ್ರ ನೀಡಿರುವುದು ವಿಚಿತ್ರವೋ, ವಿಶೇಷವೋ ತಿಳಿಯುತ್ತಿಲ್ಲ.
ಪರಿಸರ ಸಂರಕ್ಷಣೆಗೆ ಒತ್ತು ಕೊಟ್ಟು, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಉತ್ಪಾದನಾ ವ್ಯವಸ್ಥೆ ಯಲ್ಲಿ ಸುಧಾರಣೆ ಮೊದಲಾದ ವಿಷಯಗಳಿಗೆ ಕಂಪನಿ ಉತ್ತಮ ರೀತಿಯಲ್ಲಿ ಗಮನ ವಹಿಸಿದ್ದಕ್ಕೇ ಈ ಪ್ರಮಾಣ ಪತ್ರ ಸಂದಿದೆ. ನೆದರ್ಲ್ಯಾಂಡ್ಸ್ನ ಆರ್ವಿಎ ಈ ಪ್ರಮಾಣ ಪತ್ರವನ್ನು ಪ್ರಕಟಿಸಿದೆ ಎಂದು ಅಲ್ಲಿನ ಪ್ರಶಸ್ತಿ ಆಯ್ಕೆ ಸಮಿತಿಯ ಡೆಟ್ ನಾರ್ಸ್ಕೆ ವೆರಿಟಾಸ್ ತಿಳಿಸಿದ್ದಾರೆ.
ಅಂದ ಹಾಗೆ ಪರಿಸರ ಸಮಿತಿ ಕಂಪನಿಗೆ ಒಲಿಯುತ್ತಿರುವುದು ಇದೇ ಮೊದಲಲ್ಲ. 1999- 2000ನೇ ಸಾಲಿನ ಪರಿಸರ ಪ್ರಶಸ್ತಿಯೂ ಇದೇ ಕಂಪನಿಗೆ ಲಭಿಸಿತ್ತು.
(ಇನ್ಫೋ ವಾರ್ತೆ/ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications