Get Updates
Get notified of breaking news, exclusive insights, and must-see stories!

ಎಟಿಪಿ ವಿಶ್ವ ಡಬಲ್ಸ್‌ : ಪೇಸ್‌- ಭೂಪತಿ ಜೋಡಿ ಸೆಮಿಫೈನಲ್ಸ್‌ಗೆ

ಬೆಂಗಳೂರು : ಕಬ್ಬನ್‌ ಉದ್ಯಾನವನದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಟಿಪಿ ವಿಶ್ವ ಡಬಲ್ಸ್‌ ಟೆನಿಸ್‌ ಟೂರ್ನಿಯ ಗುರುವಾರದ ಪಂದ್ಯ ಗೆಲ್ಲುವ ಮೂಲಕ ಭಾರತದ ಲಿಯಾಂಡರ್‌ ಪೇಸ್‌- ಮಹೇಶ್‌ ಭೂಪತಿ ಜೋಡಿ ಸೆಮಿಫೈನಲ್ಸ್‌ ಪ್ರವೇಶಿಸಿದೆ.

ವಿಶ್ವ 5ನೇ ಶ್ರೇಯಾಂಕಿತ ಜೋಡಿ ಅಮೆರಿಕದ ಡಾನ್‌ ಜಾನ್ಸನ್‌ ಮತ್ತು ದಕ್ಷಿಣ ಆಫ್ರಿಕದ ಜೊಹಾನ್‌ ಲ್ಯಾಂಡ್ಸ್‌ಬರ್ಗ್‌ ವಿರುದ್ಧ 8ನೇ ಶ್ರೇಯಾಂಕದ ಭಾರತದ ಜೋಡಿ 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದಿತು. ಸುಲಭದ ತುತ್ತಾದ ಮೊದಲ ಸೆಟ್‌ ಗೆಲ್ಲಲು ಭಾರತದ ಜೋಡಿ ತೆಗೆದುಕೊಂಡದ್ದು ಕೇವಲ 35 ನಿಮಿಷ. 2ನೇ ಸೆಟ್‌ ಕೊಂಚ ಪೈಪೋಟಿಯಿಂದ ಕೂಡಿತ್ತು. 1 ಗಂಟೆ 13 ನಿಮಿಷಗಳ ಆಟದ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಮೇಲುಗೈ ಸಾಧಿಸಿತು.

ಶುಕ್ರವಾರ ನಡೆಯಲಿರುವ ಅಂತಿಮ ಲೀಗ್‌ನಲ್ಲಿ ಮೂರನೇ ಶ್ರೇಯಾಂಕದ ಜೋಡಿ ಅಮೆರಿಕದ ಅಲೆಕ್ಸ್‌ ಓ ಬ್ರಿಯಾನ್‌- ಜರೇಡ್‌ ಪಾಲ್ಮರ್‌ ವಿರುದ್ಧ ಭಾರತದ ಜೋಡಿ ಸೆಣೆಸಲಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+