ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಹೊಸ ಆರ್ಥಿಕ ಸಂಬಂಧಗಳು ಕಾಲಿಗೆ ತೊಡರುವ ಬಳ್ಳಿಗಳಾಗುತ್ತವೆ. ಆಯ್ದುಕೊಳ್ಳುವಲ್ಲಿ ಜಾಣತನ ತೋರಿಸಿ. ಈ ದಿನ ಗುರು ಕರುಣೆ ಪೂರ್ಣವಾಗಿ ನಿಮಗಿದೆ.ವೃಷಭ : ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಹಿನ್ನಡೆಯಾಗುವ ಸಾಧ್ಯತೆಯಿದೆ. ಅಚ್ಚರಿಗಳೇ ಎದುರಾಗುವ ಇಂದು ಅನಪೇಕ್ಷಿತ ಪ್ರಯಾಣ ಯೋಗವೂ ಉಂಟು.
ಮಿಥುನ : ಪ್ರಯಾಣದ ಆಯಾಸ ಕಡಿಮೆಯಾಗುವ ಮುನ್ನವೇ ಮತ್ತೊಂದು ಪ್ರಯಾಣದ ಬಗೆಗಿನ ನಿಮ್ಮ ಯೋಚನೆ ಈಡೇರುವುದು ಕಷ್ಟ . ಆಫೀಸಿನಲ್ಲಿ ಒತ್ತಡದ ದಿನ.
ಕಟಕ : ಸುಖಾಸುಮ್ಮನೆ ಬೇಸರಿಸಿಕೊಂಡರೆ ನಿಮ್ಮನ್ನು ಓಲೈಸುವಷ್ಟು ತಾಳ್ಮೆ ಯಾರಿಗೂ ಇಲ್ಲ . ಹೊಂದಿಕೊಂಡು ಹೋದರೆ ಸ್ವರ್ಗ ಸುಖ ನೆನಪಿಡಿ.
ಸಿಂಹ :ಭೂಮಿ ಕಾಣಿ ಕೊಳ್ಳುವ ಅಮೃತ ಗಳಿಗೆ ನಿಮಗಿಂದು ಕಾದಿದೆ. ನೀವು ನೆಟ್ಟ ಸಸಿಯೆಲ್ಲಾ ಹೂ ಬಿಟ್ಟು ಹಬ್ಬುವ ದಿನ, ಅದೃಷ್ಟವಂತರು.
ಕನ್ಯಾ :ಕೋರ್ಟ್ ವ್ಯವಹಾರದಲ್ಲಿ ಸ್ವಲ್ಪ ಅಡಚಣೆ ಎದುರಾಗಬಹುದು. ಅಷ್ಟಕ್ಕೆ ಹಿಂಜರಿದು ಹೋರಾಟ ಕೈ ಬಿಡಬೇಡಿ. ಸತತ ಪ್ರಯತ್ನದಿಂದ ದೀರ್ಘ ಕಾಲದ ಹಾದಿಯಲ್ಲಿ ಗುರಿ ಮುಟ್ಟುವುದು ಖಂಡಿತ.
ತುಲಾ : ಬಂಧುಗಳೊಂದಿಗೆ ಬೆರೆಯುವ ದಿನ. ನಿಮ್ಮ ಪ್ರಗತಿ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರೂ, ಕಾಣದ ಮುಖದ ಬಗ್ಗೆ ಎಚ್ಚರಿಕೆ ವಹಿಸಿ.
ವೃಶ್ಚಿಕ : ಸಹೋದರನಿಗೆ ಅನಾರೋಗ್ಯ. ನಿಮ್ಮ ಸಮಸ್ಯೆಗಳು ತಾತ್ಕಾಲಿಕವಾದವು. ಇಷ್ಟದೈವ ಹಾಗೂ ಕುಲದೇವರನ್ನು ಪ್ರಾರ್ಥಿಸಿ.
ಧನಸ್ಸು : ಷೇರು ಕೊಳ್ಳಬೇಕೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೀರಾ. ಇಂದೇ ಕೊಂಡು ಬಿಡಿ. ನಿಮ್ಮ ಯಶಸ್ಸಿನ ಗಳಿಗೆಗಳು ಮುಂದುವರಿದಿವೆ.
ಮಕರ : ಅನಗತ್ಯ ವಿವಾದ ಸೃಷ್ಟಿಯಾದೀತೆಂದು ಚರ್ಚೆಗೆ ಬೆನ್ನು ಹಾಕುತ್ತಿದ್ದೀರಿ. ಆದರೂ, ಗೆಲುವು ನಿಮ್ಮ ಬೆನ್ನಟ್ಟಿದೆ. ಇಂದು ಸಂಧಾನಕಾರನಾಗುವ ಅವಕಾಶ ಬಂದರೆ ಅಧಿಕಾರವನ್ನು ಚಲಾಯಿಸಿಬಿಡಿ .
ಕುಂಭ : ನಿಮ್ಮ ಯೋಚನೆ ಹಾಗೂ ಕಲ್ಪನೆ ಭೂಮಿಗೆ ಹತ್ತಿರದಲ್ಲೇ ಇರುವುದರಿಂದ ಸಹವರ್ತಿಗಳ ಮಾತಿಗೆ ಕಿವಿಕೊಡಬೇಡಿ. ಥರಗುಟ್ಟಿಸುವ ಚಳಿ, ಆರೋಗ್ಯದ ಬಗ್ಗೆ ಜಾಗರೂಕತೆ ಅಗತ್ಯ.
ಮೀನ : ಹೊಸ ಸವಾಲಿಗೆ ತೆರೆದುಕೊಳ್ಳಲು ಸಿದ್ಧರಾಗಿದ್ದೀರಿ. ಅಲ್ಲಿನ ಯಶಸ್ಸು ನೀವು ಅದೃಷ್ಟವಂತರು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications