ಒಂದೇ ಸೂರಿನಡಿ ಬೂಟು ಬಟ್ಟೆ , ಇದು ಪುರುಷರ ಲೋಕ!
ಬೆಂಗಳೂರು : ಎಲ್ಲಾ ಷಾಪಿಂಗ್ ಹೌಸ್ಗಳಲ್ಲೂ ಮಹಿಳೆಯರ ಅಧಿಕ್ಯವನ್ನೇ ಕಂಡು ಬೇಸತ್ತವರಿಗೆ ಈ ಸುದ್ದಿ ವಿಶೇಷವಾದದ್ದು. ಪುರುಷರಿಗೆ ಮಾತ್ರ ಸೀಮಿತವಾದ, ವಿಶೇಷ ಅನ್ನಬಹುದಾದ ಷಾಪಿಂಗ್ ಹೌಸ್ ಕೆಂಪರರ್ ಇದೀಗ ನಗರದಲ್ಲಿ ಕದ ತೆರೆದಿದೆ.
ವಿಮಾನನಿಲ್ದಾಣ ರಸ್ತೆಯಲ್ಲಿರುವ ರೆಡ್ಫೋರ್ಟ್ನ ಎರಡನೇ ಮಳಿಗೆಯಲ್ಲಿ ಕೆಂಪರರ್ ಬುಧವಾರದಿಂದ ಕಾರ್ಯಪ್ರವೃತ್ತವಾಗಿದೆ. ಸುಮಾರು 50 ಸಾವಿರ ಚದರ ಅಡಿ ವ್ಯಾಪ್ತಿಯ ಅಂಗಳದಲ್ಲಿ ಪುರುಷರಿಗೆ ಬೇಕಾದ ಅಂಗಿ, ಷರಾಯಿ, ಕೊರಳಪಟ್ಟಿಯಿಂದ ಹಿಡಿದು ಬೂಟು, ಕ್ಷೌರದ ಸಾಬೂನು, ಸುಗಂಧದ ಸೀಸೆವರೆಗೆ ಎಲ್ಲವೂ ಲಭ್ಯ. ಈ ವಿನೂತನ ಮಾದರಿ ಅಂಗಡಿಯ ಪಾಲುದಾರ ರವಿ ವಿ. ಮೇಲ್ವಾನಿ ಅವರು ಹೇಳುವಂತೆ, ಇಷ್ಟೊಂದು ದೊಡ್ಡ ಚಿಲ್ಲರೆ ಮಾರಾಟ ಮಳಿಗೆ ದೇಶದಲ್ಲಿ ಮತ್ತೊಂದಿಲ್ಲ .
ಪುರುಷರು ಬಳಸುವ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿ ತರುವುದು ಕೆಂಪರರ್ನ ಗುರಿ. ಆದರೆ, ನಾವು ಯಾವುದೇ ಕಾರಣಕ್ಕೂ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಅನ್ನುತ್ತಾರೆ ಮೇಲ್ವಾನಿ. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮಳಿಗೆಯಲ್ಲಿ ಕ್ಯಾಂಟಿನ್ ಹಾಗೂ ಇ-ಮೇಲ್, ಫ್ಯಾಕ್ಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications