Get Updates
Get notified of breaking news, exclusive insights, and must-see stories!

ನಿರ್ಲಕ್ಷ್ಯದಿಂದ ರೋಗಿಯ ಸಾವಿಗೆ ಕಾರಣರಾದ ವೈದ್ಯರಿಗೆ ಶಿಕ್ಷೆ

ಶಿವಮೊಗ್ಗ : - ಆಪರೇಷನ್‌ ಯಶಸ್ವಿ.. ಆದರೆ ರೋಗಿ ಸತ್ತ ಎಂಬ ಹಳೆಯ ಜನಜನಿತ ಮಾತು ನಿಮಗೂ ಗೊತ್ತು. ಶಸ್ತ್ರ ಚಿಕಿತ್ಸೆ ನಡೆಸುವಾಗ ಧಿವ್ಯ ನಿರ್ಲಕ್ಷ್ಯ ತೋರಿ ರೋಗಿಯಾಬ್ಬರ ಸಾವಿಗೆ ಕಾರಣರಾದ ವೈದ್ಯರಿಗೆ ಶಿವಮೊಗ್ಗದ ಜಿಲ್ಲಾ ಮುಖ್ಯ ಸತ್ರ ನ್ಯಾಯಾಲಯ 6 ತಿಂಗಳ ಶಿಕ್ಷೆ ಹಾಗೂ ಎರಡು ಸಾವಿರ ರುಪಾಯಿ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ಹೊಸಗೌಡರ್‌ ಬುಧವಾರ ಈ ತೀರ್ಪು ನೀಡಿದ್ದಾರೆ. ನಗರದ ಸವಳಂಗ ರಸ್ತೆಯಲ್ಲಿರುವ ದತ್ತಾ ನರ್ಸಿಂಗ್‌ ಹೊಂನ ತಜ್ಞ ವೈದ್ಯರಾದ ಡಾ. ಆರ್‌.ಡಿ. ಪ್ರಭು ಅವರು ತಮ್ಮ ವೃತ್ತಿಯಲ್ಲಿ ತೋರಿದ ನಿರ್ಲಕ್ಷ್ಯಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ.

1998ರ ಫೆಬ್ರುವರಿಯಲ್ಲಿ ಪಿತ್ತಕೋಶದ ಚಿಕಿತ್ಸೆಗಾಗಿ ರಮೇಶ್‌ ಶೆಣೈ ಎಂಬ ರೋಗಿ ಡಾ. ಆರ್‌.ಡಿ. ಪ್ರಭು ಅವರ ಬಳಿ ಚಿಕಿತ್ಸೆ ಪಡೆಯಲು ದತ್ತಾ ನರ್ಸಿಂಗ್‌ ಹೋಂಗೆ ದಾಖಲಾಗಿದ್ದರು. ಫೆ. 6ರಂದು ವೈದ್ಯ ಪ್ರಭು ರೋಗಿಯ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ರೋಗಿ ರಮೇಶ್‌ ಸತತ ವಾಂತಿ ಹಾಗೂ ಜ್ವರದಿಂದ ಬಳಲುತ್ತಿದ್ದುದರಿಂದ ಅನುಮಾನಗೊಂಡ ರೋಗಿಯ ಮನೆಯವರು ರಮೇಶ್‌ರನ್ನು ಮಣಿಪಾಲ್‌ ಆಸ್ಪತ್ರೆಗೆ ಸೇರಿಸಿದ್ದರು.

ಅಲ್ಲಿ ಪುನಾ ಶಸ್ತ್ರ ಚಿಕಿತ್ಸೆ ನಡೆಸಿದಾಗ ರೋಗಿಯ ಹೊಟ್ಟೆಯಲ್ಲಿ ಬ್ಯಾಂಡೇಜ್‌ ಬಟ್ಟೆಯ ಕಟ್ಟು ಇದ್ದದ್ದು ಪತ್ತೆಯಾಯಿತು. ಬ್ಯಾಂಡೇಜ್‌ ಬಟ್ಟೆ ಹೊಟ್ಟೆಯಲ್ಲಿ ಸೇರಿದ್ದರಿಂದ ರೋಗಿಯ ದೇಹಸ್ಥಿತಿ ಗಂಭೀರವಾಗಿ ಹೋಗಿತ್ತು. ಮರು ಶಸ್ತ್ರಚಿಕಿತ್ಸೆಯ ನಂತರವೂ ರೋಗಿ ಫೆಬ್ರುವರಿ 26ರಂದು ಸಾವನ್ನಪ್ಪಿದರು.

ಮೃತರ ಪತ್ನಿ ನಿರುಪಮಾ ಶೆಣೈ ಅವರು ಈ ಬಗ್ಗೆ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿ. ತಮ್ಮ ಪತಿಯ ಸಾವಿಗೆ ಮೊದಲು ಶಸ್ತ್ರಚಿಕಿತ್ಸೆ ನಡೆಸಿದ ದತ್ತಾ ನರ್ಸಿಂಗ್‌ ಹೋಂ ವೈದ್ಯರೇ ಕಾರಣ ಎಂದು ಆರೋಪಿಸಿದ್ದರು. ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಎರಡನೇ ಬಾರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಂದ ಸಮರ್ಪಕ ಮಾಹಿತಿ ಸಂಗ್ರಹಿಸಿ, ಆರೋಪಿ ವೈದ್ಯರಿಗೆ ಎರಡು ಸಾವಿರ ರುಪಾಯಿ ದಂಡ ಹಾಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+