ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಪುವಿನಲ್ಲಿ ಸಹಸ್ರ ಚಂಡಿಕಾಯಾಗ
ಕಾಪು : ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾಯಾಗ ಮಹೋತ್ಸವವು ಮಂಗಳವಾರದಂದು ಆರಂಭವಾಗಿದೆ.
ಈ ಸಂದರ್ಭದಲ್ಲಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರನ್ನು ಕಾಪು ಬಂಗ್ಲೆ ಮೈದಾನದಿಂದ ಪೂರ್ಣ ಕುಂಭ ಸ್ವಾಗತ ನೀಡಿ, ಪಲ್ಲಕಿಯಲ್ಲಿ ಕೂಡಿಸಿ, ಮೆರವಣಿಗೆಯಲ್ಲಿ ಕರೆತರಲಾಯಿತು.
ಚಂಡಿಕಾಯಾಗಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಹೊರೆ ಕಾಣಿಕೆಗಳನ್ನು ಲಾರಿಗಳಲ್ಲಿ , ಮೆರವಣಿಗೆಗಳಲ್ಲಿ ತಂದು ದೇವಸ್ಥಾನಕ್ಕೆ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಡೊಳ್ಳು ಕುಣಿತ, ಸ್ಕೌಟ್ಸ್ ಮತ್ತು ಗೈಡ್ಸ್ ದಳದ ವಿದ್ಯಾರ್ಥಿಗಳಿಂದ ಪಥ ಸಂಚಲನವನ್ನು ಆಯೋಜಿಸಲಾಗಿತ್ತು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]