ವಿಶ್ವ ಎಟಿಪಿ ಡಬಲ್ಸ್ : ಪೇಸ್- ಭೂಪತಿ ಜಯಾರಂಭ
ಬೆಂಗಳೂರು : ಕೆಲ ಕಾಲದ ಮುನಿಸಿನಿಂದ ಹೊರ ಬಂದು ಮತ್ತೆ ಒಗ್ಗೂಡಿ ಆಡುತ್ತಿರುವ ಲಿಯಾಂಡರ್ ಪೇಸ್- ಭೂಪತಿ ಜೋಡಿ ಬುಧವಾರ ಶುರುವಾದ ಗೋಲ್ಡ್‌ಫ್ಲೇಕ್ ವಿಶ್ವ ಎಟಿಪಿ ಡಬಲ್ಸ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಹಾಲೆಂಡ್‌ನ ಹಾರ್‌ಹುಯಿಸ್ ಮತ್ತು ಆಸ್ಟ್ರೇಲಿಯಾದ ಸ್ಯಾಂಡನ್ ಸ್ಟೋನ್ ವಿರುದ್ಧ 7-5, 6-4 ಸೆಟ್ಟುಗಳಲ್ಲಿ ಪೇಸ್- ಭೂಪತಿ ಜೋಡಿ ಟೂರ್ನಿಯ ತನ್ನ ಮೊದಲ ಜಯ ದಾಖಲಿಸಿತು. ಕ್ಲಿಷ್ಟವಾಗಿದ್ದ ಈ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಭಾರತದ ಯಶಸ್ವಿ ಜೋಡಿ ಕೆಲವು ಪ್ರಮಾದಗಳನ್ನು ಎಸಗಿದರೂ, ಅವನ್ನು ಬೇಗ ತಿದ್ದಿಕೊಂಡು ಜಯ ಸಾಧಿಸಿತು. ಕೊರೆವ ಚಳಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲ್ಲಲು 1 ತಾಸು 25 ನಿಮಿಷ ತೆಗೆದುಕೊಂಡಿತು.
ಕಬ್ಬನ್ ಪಾರ್ಕ್‌ನಲ್ಲಿ ನವ ವಧುವಿನಂತೆ ಅಲಂಕೃತವಾಗಿರುವ ಕೆಎಸ್‌ಎಲ್‌ಟಿಎ ಅಂಕಣದಲ್ಲಿ ನೆರೆದಿದ್ದ ನಗರದ ಹಾಗೂ ದೇಶ- ವಿದೇಶಗಳ ಟೆನಿಸ್ ಅಭಿಮಾನಿಗಳಿಗೆ ರಸದೌತಣ. ಭಾರತದ ಜೋಡಿ ಗೆದ್ದ ಪಂದ್ಯಕ್ಕೆ ಮುನ್ನ ನಡೆದ ಇನ್ನೊಂದು ಪಂದ್ಯದಲ್ಲಿ 4ನೇ ಶ್ರೇಯಾಂಕದ ಆಸ್ಟ್ರೇಲಿಯಾ ಜೋಡಿ ಜೋಷ್ ಈಗಲ್- ಆ್ಯಂಡ್ರು ಫ್ಲಾರೆಂಟ್, 6ನೇ ಶ್ರೇಯಾಂಕದ ಬ್ರೆಜಿಲ್‌ನ ಜೈಮಿ ಆನಿನ್ಸ್- ಅರ್ಜೆಂಟಿನಾದ ಡೇನಿಯಲ್ ಅರ್ಸಾನಿಕ್ ವಿರುದ್ಧ 6-1, 3-6, 6-4ರಲ್ಲಿ ಗೆದ್ದಿತು.
ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಡಾನ್ ಜಾನ್ಸನ್ ಹಾಗೂ ದಕ್ಷಿಣ ಆಫ್ರಿಕದ ಪಿಯಟ್ ನಾರ್ವಲ್ ಜೋಡಿಯು ಅಮೆರಿಕದ ಅಲೆಕ್ಸ್ ಓ ಬ್ರಿಯಾನ್ ಹಾಗೂ ಜೇರ್ಡ್ ಪಾಮರ್ ಜೋಡಿಯನ್ನು 7-5, 7-6(9-7) ರಲ್ಲಿ ಸೋಲಿಸಿತು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications