ಅಯ್ಯಪ್ಪ ದರ್ಶನಕ್ಕೆ ಶಬರಿಮಲೆಗೆ ಹೋಗುವ ಭಕ್ತರಲ್ಲಿ ಕನ್ನಡಿಗರೇ ಹೆಚ್ಚು
ಶಬರಿಮಲೆ : ಶಬರಿಗಿರಿಯಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಭಕ್ತರ ಸಂಖ್ಯೆಯ ಗಣತಿ ನಡೆದಿರುವ ವಿಷಯ ನಿಮಗೂ ಗೊತ್ತು. ಈ ಗಣತಿ ಇನ್ನೊಂದು ಹೊಸ ಅಂಶವನ್ನು ಹೊರಹಾಕಿದೆ. ಈ ವರ್ಷ ಶಬರಿಗಿರಿಗೆ ಅಯ್ಯಪ್ಪನ ದರ್ಶನಕ್ಕೆ ಬರುತ್ತಿರುವ ಭಕ್ತರಲ್ಲಿ ಕರ್ನಾಟಕದವರೇ ಹೆಚ್ಚಂತೆ.
ಅರಣ್ಯ ಇಲಾಖೆಯ ಕಚೇರಿಯ ಎದುರು ಮತ್ತು ಪಾಂಡಿತ್ತಾವಳ ರಸ್ತೆಯಲ್ಲಿ ಭಕ್ತ ಗಣತಿ ಮಾಡುತ್ತಿರುವ ಮಂದಿಯ ಲೆಕ್ಕಾಚಾರದ ರೀತ್ಯ ಈ ವರ್ಷ ಗಿರಿಗೆ ಬಂದಿರುವವರಲ್ಲಿ ಕನ್ನಡಿಗರದೇ ಸಿಂಹಪಾಲು. ಇದನ್ನು ಕರ್ನಾಟಕದ ನೊಂದಣಿ ಸಂಖ್ಯೆ ಹೊತ್ತ ವಾಹನಗಳು ಹಾಗೂ ಕನ್ನಡ ಮಾತನಾಡುತ್ತಾ ಅರಣ್ಯ ಇಲಾಖೆಯ ಕಚೇರಿ ಮುಂದೆ ಸಾಗಿರುವ ಭಕ್ತರು ಸಾಬೀತು ಪಡಿಸಿದ್ದಾರಂತೆ.
ಡಿಸೆಂಬರ್ 6ನೇ ತಾರೀಖಿನವರೆಗೆ ಶಬರಿಗಿರಿಗೆ 11 ಲಕ್ಷ ಭಕ್ತರು ಬಂದಿದ್ದರು, ಆ ಪೈಕಿ 9 ಲಕ್ಷ ಪುರುಷರು, 1.5 ಲಕ್ಷ ಮಕ್ಕಳು ಹಾಗೂ 50 ಸಾವಿರ ಮಹಿಳೆಯರು ಎಂದು ಲೆಕ್ಕ ಕೊಟ್ಟಿರುವ ಸಮೀಕ್ಷೆ ಈ 11 ಲಕ್ಷದಲ್ಲಿ ಎಷ್ಟು ಲಕ್ಷ ಕನ್ನಡಿಗರು ಗಿರಿಗೆ ಬಂದಿದ್ದಾರೆ ಎಂಬ ವಿವರ ನೀಡಿಲ್ಲ.
ಭೂಕಂಪ : ಈ ಮಧ್ಯೆ ಮಂಗಳವಾರ ಶಬರಿಮಲೆ ಸೇರಿದಂತೆ ಕೇರಳದ ಹಾಗೂ ತಮಿಳು ನಾಡಿನ ಕೆಲವು ಭಾಗಗಳಲ್ಲಿ ಭೂಕಂಪನವಾಗಿದೆ. ಭೂಕಂಪದಿಂದ ಶಬರಿಗಿರಿಯ ಎರಡು ಯಾತ್ರಾರ್ಥಿ ಕೇಂದ್ರದ ಕಟ್ಟಡಗಳು ಬಿರುಕು ಬಿಟ್ಟಿವೆ. ಆದರೆ, ಯಾವುದೇ ಭಕ್ತರಿಗೂ ಅಪಾಯ ಸಂಭವಿಸಿಲ್ಲ. ಯಾತ್ರಿ ನಿವಾಸದ 2 ಮತ್ತು 3ರಲ್ಲಿ ಬಿರುಕು ಕಂಡಿದ್ದು, ನಾಲ್ಕು ಮಾಳಿಗೆಯ ಗೋಡೆಗಳು ಬಿರುಕು ಬಿಟ್ಟಿವೆ.
ಪ್ರಸಾದದಲ್ಲೂ ದಾಖಲೆ : ಬೀಡಿ ತುಂಡು, ಇಲಿ ಬಾಲ ಇತ್ತು ಎಂಬ ವಿವಾದಗಳ ನಡುವೆಯೂ ಶಬರಿಮಲೆಯಲ್ಲಿ ಆರವಣ ಪ್ರಸಾದ ಮಾರಾಟ ಈ ವರ್ಷ ದಾಖಲೆ ಸೃಷ್ಟಿಸಿದೆ. ಪ್ರಸಾದದಿಂದ ಈವರೆಗೆ ಒಟ್ಟು 4.77 ಕೋಟಿ ರುಪಾಯಿ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದಾಖಲೆಯ ವಹಿವಾಟು. ಈಗ ಆರವಣ ಪ್ರಸಾದ ತಯಾರಿಕೆಯಲ್ಲಿ ಶುಚಿತ್ವವನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.
ಆರವಣ ಪ್ರಸಾದದ ಪೊಟ್ಟಣಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕವನ್ನೂ ನಮೂದಿಸಲಾಗುತ್ತಿದೆ. ಅಂದು ತಯಾರಿಸಿದ ಪ್ರಸಾದವನ್ನು ಅಂದೇ ಮಾರಾಟ ಮಾಡಲಾಗುತ್ತಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications