ಕರ್ನಾಟಕದಲ್ಲಿ ಇಂಟರ್‌ನೆಟ್ ನಾಗಾಲೋಟಕ್ಕೆ ನೂರೆಂಟು ವಿಘ್ನ
(ಕನ್ನಡ ಇನ್‌ಫೊ ವಿಶೇಷ )
ಬೆಂಗಳೂರು :ಇಂಟರ್‌ನೆಟ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂವಹನ ಸುಗುಮವಾಗಿ ನಡೆಯಲು ಅಗತ್ಯವಾದ ಆಪ್ಟಿಕ್ ಫೈಬರ್ ಕೇಬಲ್ (ಓಎಫ್‌ಸಿ) ಜೋಡಣೆ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆಯಷ್ಟೆ. ಹೈಗ್ರೌಂಡ್ಸ್, ಜಯನಗರ, ಜೆ.ಪಿ. ನಗರ, ಕೋರಮಂಗಲ, ಬಿ.ಟಿ.ಎಂ. ಬಡಾವಣೆ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಇವತ್ತಿನವರೆಗೆ ಸುಮಾರು 60 ಕಿ.ಮೀಟರ್‌ಗಳ ಓಎಫ್‌ಸಿ ಜೋಡಣೆ ಕಾರ್ಯ ಮುಗಿದಿದೆ.
ಆದರೆ, ರಾಜ್ಯದ ಮುಖ್ಯಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರದ ಸಮಿತಿ ಬೆಂಗಳೂರಿನಲ್ಲಿ ಒಟ್ಟು 420 ಕಿ.ಮೀಟರ್ ಓಎಫ್‌ಸಿ ಜೋಡಣೆ ಕಾರ್ಯಕ್ಕೆ ಅನುಮತಿ ನೀಡಿದೆ. ಸುಮಾರು 220 ಕಿ.ಮೀಟರ್ ಓಎಫ್‌ಸಿ ಅಳವಡಿಸಲು ಬಿಪಿಎಲ್ ಕನ್‌ಸೋರಿಟಮ್‌ಗೂ ಹಾಗೂ ಉಳಿದ 200 ಕಿ.ಮೀ. ಉದ್ದದ ಓಎಫ್‌ಸಿ ಜೋಡಣೆಗೆ ಮೆ ಗಾಬೈಟ್ ಸಂಸ್ಥೆಗೂ ಅನುಮತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೂರು : ಈ ಮಧ್ಯೆ ನಗರದಲ್ಲಿ ಅಳವಡಿಸುತ್ತಿರುವ ಓಎಫ್‌ಸಿಗಾಗಿ ರಸ್ತೆಯಂಚಿನಲ್ಲಿ ತೋಡಲಾಗಿರುವ ಗುಂಡಿಗಳನ್ನು ಮುಚ್ಚುವಲ್ಲಿ ಆಗುತ್ತಿರುವ ವಿಳಂಬದಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಬೆಂಗಳೂರಿನ ನಾಗರಿಕರು ಮಹಾನಗರ ಪಾಲಿಕೆಗೆ ದೂರುಗಳನ್ನು ಸಲ್ಲಿಸುತ್ತಿದ್ದು, ಈಗ ಹಾಲಿ ತೋಡಲಾಗಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವ ತನಕ ಮುಂದಿನ ಹಂತದ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದಿರಲು ನಗರ ಪಾಲಿಕೆ ನಿರ್ಧರಿಸಿದೆ.
ಸದ್ಯ ಬೆಂಗಳೂರು ನಗರ ಪಾಲಿಕೆಯು ಕೇವಲ ಓಎಫ್‌ಸಿ ಜೋಡಣೆಗೆ ತೋಡಿರುವ ಹಳ್ಳಗಳ ಮುಚ್ಚಿದ ಬಗ್ಗೆಯಷ್ಟೇ ಪರಿಶೀಲನೆ ನಡೆಸುತ್ತಿದೆ. ಇದಕ್ಕಿಂತ ಹೆಚ್ಚಿನ ಜವಾಬ್ದಾರಿ ಪಾಲಿಕೆಗೆ ಇಲ್ಲ ಎಂಬುದು ನಗರ ಪಾಲಿಕೆಯ ಉನ್ನತಾಧಿಕಾರಿಗಳ ಹೇಳಿಕೆ.
ಒಡೆದ ಕೊಳವೆಗಳು : ಈ ಓಎಫ್‌ಸಿ ಅಳವಡಿಕೆ ಕಾರ್ಯದಲ್ಲಿ ನಗರದ ಕೆಲವು ಬಡಾವಣೆಗಳಲ್ಲಿ ನೀರಿನ ಕೊಳವೆಗಳು ಹಾಗೂ ಒಳಚರಂಡಿಯ ಕೊಳವೆಗಳನ್ನು ಒಡೆದು ಹಾಕಿರುವ ಬಗ್ಗೆಯೂ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಓಎಫ್‌ಸಿ ಜೋಡಣೆಗೆ ಬಾಯ್ತೆರೆದಿರುವ ಗುಂಡಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿ, ಕಾಬಲ್ ಸ್ಟೋನ್‌ಗಳನ್ನು ಹಾಕಲಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ನಂತರವೇ ಮುಂದಿನ ಕಾಮಗಾರಿಗೆ ಅನುಮತಿ ನೀಡಲು ಆಯುಕ್ತರು ಆದೇಶಿಸಿದ್ದಾರೆ. ಇದಕ್ಕಾಗಿಯೇ ಇರುವ ಪಾಲಿಕೆಯ ವಿಭಾಗದ ಎಂಜಿನಿಯರ್‌ಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಕಾಮಗಾರಿ ನಡೆದಿದ್ದರೆ ಮುಂದಿನ ಹಂತದ ಕಾಮಗಾರಿಗೆ ಅನುಮತಿ ನೀಡಲಾಗುವುದು ಎಂದು ಪಾಲಿಕೆಯ ಉನ್ನತ ಮೂಲಗಳು ಕನ್ನಡ.ಇಂಡಿಯಇನ್‌ಫೊ.ಕಾಂ ಗೆ ತಿಳಿಸಿದರು.
ವಾರಕ್ಕೊಮ್ಮೆ ಕಾಮಗಾರಿಗೆ ಅನುಮತಿ ನೀಡುವ ಕಾರ್ಯದಲ್ಲಿ ಪಾಲಿಕೆ ತೊಡಗಿದೆ. ಮಂಗಳವಾರ ರಾಜ್ಯ ಸರಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಬುಧವಾರ ಮುಂದಿನ ಹಂತದ ಕಾಮಗಾರಿಗೆ ಅನುಮತಿ ನೀಡಲು ಚರ್ಚೆ ಮುಂದುವರಿದಿದೆ ಎಂದು ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ, ಓಎಫ್‌ಸಿ ಜೋಡಣೆಗೆ ಅನುಮತಿ ನೀಡಿರುವ ಉನ್ನತಾಧಿಕಾರದ ಸಮಿತಿಯಲ್ಲಿ ಪಾಲಿಕೆಯ ಪ್ರತಿನಿಧಿಯೇ ಇಲ್ಲ. ಪಾಲಿಕೆಯ ಆಯುಕ್ತರಾಗಲೀ ಅಥವಾ ಇನ್ಯಾವುದೇ ಅಧಿಕಾರಿ ಈ ಸಮಿತಿಯಲ್ಲಿ ಇಲ್ಲ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications