ಮಾರುತಿ 800 ಗುಣಮಟ್ಟದಲ್ಲಿ ಶೇ. 28.75 ರಷ್ಟು ಪ್ರಗತಿ
ನವದೆಹಲಿ : ಇದು ಮಾರುತಿ ಕಾರುಗಳಿಗೆ ಸಂಬಂಧಿಸಿದಂತೆ ಹೊಸ ಸುದ್ದಿ. ಬೆಲೆ ಏರಿಕೆ ಇಳಿಕೆಗೆ ಸಂಬಂಧಿಸಿದ್ದಲ್ಲ ವಾದ್ದರಿಂದ ನೀವು ಸಮಾಧಾನ ವದನರಾಗಿ ಸುದ್ದಿ ಓದಬಹುದು.
ಸಮೂಹದ ಕಾರು ಎಂದೇ ಹೆಸರಾದ ಮಾರುತಿ 800 ತನ್ನ ಗುಣಮಟ್ಟದಲ್ಲಿ ಗಣನೀಯ ಪ್ರಗತಿ ಸಾಧಿಸಿದೆಯಂತೆ. ಗ್ರಾಹಕ ಸರ್ವೆಯಲ್ಲಿ ಅಮೆರಿಕೆಯಲ್ಲಿ ಎತ್ತಿದ ಕೈ ಎನ್ನಿಸಿದ ಜೆಡಿ ಪವರ್ ನಡೆಸಿದ ಮೂಲಭೂತ ಗುಣಮಟ್ಟ ಅಧ್ಯಯನದಲ್ಲಿ ಮಾರುತಿ 800 ಕಾರಿನ ಗುಣಮಟ್ಟ ಕಳೆದ ವರ್ಷಕ್ಕಿಂತ ಪ್ರತಿಶತ 28.75 ರಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿದು ಬಂದಿದೆ.
ಕಾರಿನ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿರುವುದು ಗಮನಾರ್ಹ. 1998 ರಲ್ಲಿ ಸರಾಸರಿ 100 ಕಾರುಗಳಲ್ಲಿ 413 ಸಮಸ್ಯೆಗಳು ಕಂಡುಬಂದರೆ, ಈ ಸಂಖ್ಯೆ 99 ರಲ್ಲಿ 313ಕ್ಕೆ ಕುಸಿಯಿತು. ಪ್ರಸಕ್ತ ವರ್ಷ ಸಮಸ್ಯೆಗಳ ಸಂಖ್ಯೆ 223 ಕ್ಕೆ ಕುಸಿದಿರುವುದು ಕಾರಿನ ಗುಣಮಟ್ಟವನ್ನು ಸೂಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
1983 ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಮಾರುತಿ 800, ಮಾರುತಿ ಸಮೂಹದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಕಾರು. ಅದರ ಜನಪ್ರಿಯತೆಯಲ್ಲಿ ಬೆಲೆಯ ಪಾತ್ರ ಪ್ರಮುಖವಾಗಿದೆ. ಇದೊಂದೇ ಮಾಡೆಲ್ ಭಾರತೀಯ ಕಾರು ಮಾರುಕಟ್ಟೆಯ ಶೇ.30 ರಷ್ಟನ್ನು ಆಕ್ರಮಿಸಿರುವುದು ಇದರ ಜನಪ್ರಿಯತೆಯ ದ್ಯೋತಕವಾಗಿದೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications