ಹೂ, ಎಲೆಗಳ ಮೇಲೆ ಮುತ್ತು ಎಣಿಸಿದಿರಾ?
ಬೆಂಗಳೂರು : ಬೆಂಗಳೂರಲ್ಲಿ ಕನಿಷ್ಠ ತಾಪಮಾನ 14ಕ್ಕೆ ಇಳಿದಿದ್ರೆ, ಗುಲ್ಬರ್ಗಾದಲ್ಲಿ 10.8 ಡಿಗ್ರಿ ಆಗಿದೆ. ಶಾಲು ಹೊದಿಯಲು, ಸನ್ಮಾನ ಸಮಾರಂಭದಲ್ಲಿ ಶಾಲು ಹೊದಿಸಲು ಇದಕ್ಕಿಂತಲೂ ಸೂಕ್ತ ಕಾಲ ಇನ್ನೊಂದಿದೆಯೇ?
ಬೆಳಗ್ಗೆ ಬೆಡ್‌ಕಾಫಿಗೆ ಹಾಲು ಒದಗಿಸುವ ಹಾಲಪ್ಪ, ಪೇಪರ್ ಹಾಕುವ ಹುಡುಗ ಇಬ್ಬರೂ ಕೆಲವು ದಿನದಿಂದ ಬರ್ತಾ ಇರೋದು ಎಂದಿಗಿಂತ ತಡವಾಗೆ. ಪಾಪ ಅವರು ತಾನೆ ಏನು ಮಾಡ್ತಾರೆ ಹೇಳಿ. ಕೊರೆವ ಚಳಿ ಹಾಸಿಗಿಯಿಂದ ಏಳದಂತೆ ಮುದುರಿ ಮಲಗುವಂತೆ ಮಾಡಿದೆ.
9 ಗಂಟೆಗೆ ಆಫೀಸಿದ್ಯಲ್ಲ ಅಂತ ಅಟ್‌ಲೀಸ್ಟ್ 8ಕ್ಕಾದ್ರೂ ಎದ್ದು, ಷೇವ್ ಮಾಡಿ, ಬೂಟು, ಟೈ ಕಟ್ಟಿ , ಸ್ಕೂಟರ್ ಸ್ಟಾರ್ಟ್ ಮಾಡಿ ಬೀದಿಗಿಳಿದ್ರೆ, ಕಾಣದ ಸೂರ್ಯ, ಬೀಸುವ ಗಾಳಿ, ಸುರಿವ ಹಿಮ ಮತ್ತೆ ಮನೆಗೆ ಹೋಗಿ ಮುಸುಕು ಹಾಕಿ ಮಲಗು ಅಂತ ಅಪ್ಪಣೆ ಕೊಡಿಸ್ತಿರತ್ತೆ. ಆದ್ರೆ ವಿಧಿ ಇಲ್ಲವಲ್ಲ ಆಫೀಸ್‌ಗೆ ಹೋಗ್ಲೇ ಬೇಕು. 4 ಗಂಟೆಗೆ ಎದ್ದು ಪೇಪರ್ ಹಾಕುವ ಹುಡುಗನ್ನ, 6ಗಂಟೆಗೇ ಫ್ಯಾಕ್ಟರಿಗೋ ಹೋಗುವ ಪಕ್ಕದ ಮನೆಯವರನ್ನ ನೋಡಿ ನಮ್ದೇ ಪರವಾಗಿಲ್ಲ ಅಂತ ಸಮಾಧಾನ ಪಟ್ಟುಕೊಂಡು ಬೇರೆ ವಾಹನಗಳ ಹೊಗೆ ಕುಡೀತ ಹಳ್ಳ ಕೊಳ್ಳದ ಟಾರು ರಸ್ತೆಯಲ್ಲಿ ಸಾಗೋದೇ ಬದುಕಾಗಿದೆ.
ಇಂದು ಆದದ್ದೂ ಅದೇ, ಚಳಿಗೆ ಕೈಯೆಲ್ಲಾ ಕೊರೀತಿತ್ತು, ಮರಗಟ್ಟಿದಂತೆ ಆಗ್ತಿತ್ತು. ಸೂರ್ಯನೂ ರೆಸ್ಟ್ ತಗೊಂಡು ವಾತಾವರಣ ಬಿಸಿ ಮಾಡಿದ್ದು, ಬಹುತೇಕ 11 ಗಂಟೆ ಹೊತ್ಗೆ.
ಅಂದ ಹಾಗೆ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಣಹವೆ ಇತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಕನಿಷ್ಠ ಉಷ್ಣಾಂಶ ಇಳಿದಿತ್ತು. ಉತ್ತರ ಒಳನಾಡು ಹಾಗೂ ಕರಾವಳೀಲಿ ಅಲ್ಪ ಬದಲಾವಣೆ ಕಂಡು ಬಂತು. ರಾಜ್ಯದ ಕನಿಷ್ಠ ತಾಪಮಾನ ಗುಲ್ಬರ್ಗಾದಲ್ಲಿ 10.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮುನ್ಸೂಚನೆ ರೀತ್ಯ ರಾಜ್ಯದಲ್ಲಿ ಒಣಹವೆ ಇರತ್ತೆ. ಬೆಂಗಳೂರು ಹಾಗೂ ಸುತ್ತ ಮುತ್ತ ನಿರ್ಮಲ ಆಕಾಶ ಇದ್ದು, ಮುಂಜಾನೆ ಮಂಜು ಅಥವಾ ಇಬ್ಬನಿ ಸುರಿಯತ್ತೆ. ಅರಳಿದ ಹೂಗಳ ಮೇಲೆ, ಗಿಡದ ಎಲೆಗಳ ಮೇಲೆ ಸೂರ್ಯ ಹುಟ್ಟುವ ಮುನ್ನ ಮುತ್ತನ್ನು ಎಣಿಸಲು ಇದೇ ಸರಿಯಾದ ಸಮಯ. ಹ್ಹಾ ಬೆಂಗಳೂರಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿಗೆ ಇಳಿಯೋ ಸೂಚನೆ ಇದೆ ಎಂದು ಹವಾಮಾನ ವೀಕ್ಷಣಾಲಯದ ವರದಿ ಹೇಳಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications