ಕಳ್ಳ ಎಂದಿದ್ದರೂ ಕಳ್ಳನೇ.. ವೀರಪ್ಪನ್ ಬಗ್ಗೆ ರಾಜ್ ಅಭಿಪ್ರಾಯ
ಕನ್ನಡಿ ನೋಡ್ದೆ : ಅದೆಲ್ಲ... ಇದೇನು ಕನಸೋ- ನನಸೋ ಗೊತ್ತಿಲ್ಲ ಬನ್ನಾರಿಯಿಂದ ಎಸ್ಟೇಟ್‌ಗೆ ಕರಕೊಂಡು ಬಂದ್ರು. ಅಲ್ಲಿ ಮೊದಲ ಬಾರಿಗೆ ಮೂರು ತಿಂಗಳಾದ ಮೇಲೆ ಕನ್ನಡಿ ನೋಡ್ದೆ. ಬಾತ್ ರೂಮಲ್ಲಿ ಕನ್ನಡಿ ನೋಡಿದಾಗ ನನ್ನ ಹಿಂದೆ ಯಾರಾದ್ರೂ ಇದಾರಾ ಅಂತ ತಿರುಗಿ ನೋಡ್ದೆ. ನಿಮ್ಮ ರಾಜಕುಮಾರನ ಬಣ್ಣ ಹಾಗಾಗಿತ್ತು. ಕಳ್ಳ.. ಆ ಮನುಷ್ಯ ಕಡೇ ವರ್ಗೆ ಚೆನ್ನಾಗಿ ನೋಡಿಕೊಂಡ. ನಾಗಪ್ಪ ನಮಗಿಂತ ಮುಂಚೆ ನಾಡಿಗೆ ಓಡಿ ಬಂದದ್ದು ಒಂದು ದುಸ್ವಪ್ನ. ಇದೂ ಒಂತರಾ ಕನಸೇ.
ಆತ ಈಕಡೆ ಬಂದಾಗ ನಮ್ಮ ಸ್ಥಿತಿ ಬಿಗಡಾಯಿಸ್ತು. ನಾವು ಉಳಿತೀವೋ ಇಲ್ವೋ ಅನ್ನಿಸ್ತಿತ್ತು. ವೀರಪ್ಪ ನಮ್ಮ ಹುಡುಗ್ರಿಗೆ ಅಭಯ ಕೊಟ್ಟ. ಅವನ ಸಿಬ್ಬಂದಿ ಎಲ್ಲೋ ಹೋಗಿದ್ರು, ಕೈಕಾಲು ಕಟ್ಟಿ ಹಾಕಬೇಕು ಅಂತಿದ್ರು, ಕೈ ಕಟ್ಟಿದ್ರು. ನಮ್ಮ ಹುಡುಗ್ರಿಗೆ ನಾನು ಹೇಳ್ದೆ ನನ್ನ ಪ್ರಾಣಕೊಟ್ಟಾದ್ರು ನಿಮ್ಮ ಉಳಿಸ್ತೀನಿ. ಮಂತ್ರಾಲಯದ ರಾಯರಿದ್ದಾರೆ. ಅವರು ಆಶ್ಚರ್ಯವಾಗಿ ಪಾರು ಮಾಡ್ತಾರೆ ಅಂತ. ಅದು ಹಾಗೇ ಆಯ್ತು.
ನಕ್ಕೀರನ್ ಗೋಪಾಲ್ ಬಂದ್ರು ಹೋದ್ರು: ನಕ್ಕೀರನ್ ಗೋಪಾಲ್ 4-5 ಬಾರಿ ಬಿಡಿಸಲು ಬಂದ್ರು. ಅವರ ಕೈಲಿ ಆಗಲಿಲ್ಲ. ಆಗ್ಲಿಲ್ಲ ಅನ್ನಬಾರ್ದು. ಅವರು ಬಂದಾಗ ಆಸೆ ಆಗ್ತಿತ್ತು. ನಾಗಪ್ಪ ಓಡಿ ಬಂದಾಗ ಅವರು ಅಲ್ಲೇ ಇದ್ರು. ಅವರೂ ಜಾಗ ಖಾಲಿ ಮಾಡಿದ್ರು. ಒಂದೆರಡು ದಿನ ಆದ್ಮೇಲೆ ಹೊಂದಿಕೆ ಆಯ್ತು. ಕೊನೆ ದಿನ ಏನಾಯ್ತು ಅಂದ್ರೆ ನೆಡುಮಾರನ್ ಒಂದು ಸಂಘದ ಮುಖಂಡರು, ಅವರನ್ನು ಬರಲು ಸಲಹೆ ಕೊಟ್ಟದ್ದೂ, ನಾವು ಕಾಡುಗಳ್ಳ, ದಂತ ಚೋರ ಅಂತೀವಲ್ಲ ಆ ವೀರಪ್ಪನ್‌ನೇ. ಅವನು ಹೇಳಿದಹಾಗೆ ಕ್ಯಾಸೆಟ್ ಕಳಿಸಿದ್ವಿ. ಅವರು ಬಂದ್ರು. ನನಗೆ ಗುರು ರಾಘೕಂದ್ರರಾಯರೇ ನೆಡುಮಾರನ್ ರೂಪದಲ್ಲಿ ಬಂದಹಾಗಾಯ್ತು. ಇದೇನಪ್ಪ ಹೀಗೆ ಹೊಗಳ್ತಾನೆ ಅನ್ನ ಬೇಡಿ. ಅವರೊಂದಿಗೆ ಮಾತನಾಡಿದ್ರೆ, ಅವರ ಜತೆ ಇದ್ರೆ ಅದು ಗೊತ್ತಾಗತ್ತೆ. ಅವರು ಒಂದು ತರ ಯತಿ ಇದ್ದಹಾಗೆ.
1-2 ದಿನ ಇದ್ದರು. ಗೋವಿಂದರಾಜನ್ನ ಕಳಿಸೋ ಕಾಲ ಅದಾಗಿತ್ತು. ನಮ್ಮವರಿಗೆ ಧೈರ್ಯ ಬರತ್ತೆ ಅಂತ ಆ ಕೆಲ್ಸ ಮಾಡಿಸ್ದೆ. ಮುಂದಿನ ಸಾರಿ ಬಂದಾಗ ನಿಮ್ಮನ್ನ ಕರೆದುಕೊಂಡು ಹೋಗ್ತೀನಿ ಅಂದ್ರು ಹಾಗೇ ಮಾಡಿದ್ರು.
ಟಾಡಾ ಕೈದಿಗಳ ವಿಷಯ ಬಂದಾಗ ಸರಕಾರ ಪೂರ್ಣ ಕೆಲಸ ಮುಗಿಸಿದ್ರು. 10-12 ದಿನದಲ್ಲಿ ನಾವು ಬರಬೇಕಿತ್ತು. ಆದ್ರೆ ಸುಪ್ರೀಂ ಕೋರ್ಟ್‌ಗೆ ಹೋಗಿ ಅದೇನೂ ನಡೀಲಿಲ್ಲ ಅನ್ನೋ ಹಾಗಾಯ್ತು.
ನೊಂದು ಬೆಂದ ಅಭಿಮಾನಿಗಳು : ಇಲ್ಲಿ ಅಭಿಮಾನಿಗಳು ಬೇಕಾದಷ್ಟು ದುಃಖ ಪಟ್ಟಿದ್ದಾರೆ. ನೊಂದು ಬೆಂದಿದ್ದಾರೆ. ಪೂಜೆ ಮಾಡಿದ್ದಾರೆ. ನಾನು ಇದನ್ನ ಕೊನೆ ಉಸಿರು ಇರೋವರೆಗೂ ಮರೆಯಲ್ಲ. ಇದೆಲ್ಲಾ ಕೇಳಿ ನನ್ನ ವಂಶ ಪುನೀತವಾಯ್ತು ಅಂದುಕೊಂಡೆ. ಇದು ಕನಸೆ ಅನ್ಸತ್ತೆ.
ಶಿವರಾಂ ಮಾತಾಡ್ತಾ ನಮ್ಮಿಂದ ತಪ್ಪಾಗಿದ್ರೆ ಕ್ಷಮಿಸಿ ಅಂದ್ರು. ನಂದೇ ತಪ್ಪು. ನಿಮ್ಮನ್ನೆಲ್ಲಾ ಬಿಟ್ಟು ನಾನು ಹೋಗಿದ್ದೆ. ಆದ್ರೂ ಕಾಡಿಗೆ ಹೋಗಿದ್ರಿಂದ ಒಳ್ಳೆ ಕೆಲಸ ಆಯ್ತು. ನಮಗೇ ತಿಳಿವಳಿಕೆ ಇರೋದು. ನಾವೇ ದೊಡ್ಡೋರು ಅಂದ್ಕೊಂಡಿದ್ವಿ. ನನ್ನ ನಾನು ಅವಲೋಕನ ಮಾಡಿಕೊಳ್ಳಲು ಅವಕಾಶ ಆಯ್ತು. ವೀರಪ್ಪನ್‌ನಿಂದ ಈ ಅವಕಾಶ - ಅನುಕೂಲ ಆಯ್ತು.
ಕಳ್ಳ ಎಂದಿದ್ರೂ ಕಳ್ಳನೇ : ಏನಾದ್ರು ಕಳ್ಳ ಕಳ್ಳನೇ... ಆದ್ರೂ ಅವನ ಬಗ್ಗೆ ಅನುಕಂಪ ಇದೆ. ಅಲ್ಲೇನೋ ಗಲಾಟೆ ಆಗ್ತಾ ಇದೆ. ಅಭಿಮಾನಿಗಳು ಶಾಂತಿಯಿಂದ ಇರಬೇಕು. (ಶಿವರಾಂ ಹಾಡು ಹೇಳಬೇಕು ಅಂತಿದ್ದಾರೆ ಅಂದ್ರು ) ಇದಾದ ಮೇಲೆ ಮನರಂಜನೆ ಇದೆ. ನಿಮ್ಮ ರಾಜ್‌ಕುಮಾರನೂ ಹಾಡಿ ಕುಣೀತಾನೆ. ಆಶೀರ್ವಾದ ಮಾಡಿ. ಇನ್ನೂ ಕೆಲವು ಕಾಲ ಕಲಾವಿದನಾಗಿ ಸೇವೆ ಮಾಡೋ ಶಕ್ತಿ ಆ ರಾಜರಾಜೇಶ್ವರಿ ಕೊಡಲಿ.
ಕಲಾವಿದರೆಲ್ಲ ಒಂದೇ ಜಾತಿ : ಕಲಾವಿದರೆಲ್ಲ ಒಂದೇ ಜಾತಿ. ಅವರಲ್ಲಿ ಜಾತಿ ಭೇದ ಇಲ್ಲ. ನಿಮ್ಮ ಅಭಿಮಾನ ಇರಲಿ. ಈ ಅವಕಾಶ ಮಾಡಿಕೊಟ್ಟ ವಾಣಿಜ್ಯ ಮಂಡಳಿಗೆ, ಚಂದ್ರಶೇಖರ್ ಅವರಿಗೆ, ಎಸ್.ಎಂ. ಕೃಷ್ಣ ಅವರಿಗೆ, ಖರ್ಗೆ ಅವರಿಗೆ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ, ವಿಷ್ಣುವರ್ಧನ್ ಸೋದರನಿಗೆ, ಅಂದಹಾಗೆ ನನ್ನ ಆಕಡೆ ಈ ಕಡೆ ವಿಷ್ಣುವರ್ಧನ್, ಅಂಬರೀಶ್ ಬಂದು ಹಿಡುಕೊಂಡಾಗ ನಾನು ಅವರಿಬ್ಬರಿಗೆ ಮುತ್ತ ಕೊಟ್ಟಾಗ ಆದ ಆನಂದ ಅಷ್ಟಿಷ್ಟಲ್ಲ. ಅದಕ್ಕೆ ನಾನು ಹೇಳಿದ್ದು ಕಲಾವಿದರಲ್ಲಿ ಜಾತಿ ಇಲ್ಲ. ಎಲ್ಲ ಜಾತಿ ಸೇರಿದವರೇ ಕಲಾವಿದರು ಅಂತ.
ನಾನು ಬಿಡುಗಡೆ ಆದ ದಿನ ಹೆಲಿಕಾಪ್ಟರ್ ನಿಂತಿತ್ತು. ತೆಮಿಳು ಜನ ಅಲ್ಲಿ ಸೇರಿದ್ರು ನನ್ನ ಹರುಕು ಮುರುಕು ತಮಿಳಿನಲ್ಲೇ ನಾನು ಮಾತನಾಡಿದೆ. ಅವರೆಲ್ಲಾ ಚಪ್ಪಾಳೆ ತಟ್ಟಿದ್ರು, ಕೈ ಬೀಸಿ ಬೀಳ್ಕೊಟ್ಟರು. ನಾವೆಲ್ಲ ಈ ಭಾರತದ ಮಕ್ಕಳೇ. ಖುರಾನ್ ಹಿಡಿದ ಜನ ಅದೇ ಮುಸಲ್ಮಾನ ಬಾಂಧವರು ಇದ್ರು ಅವರೂ ನನ್ನ ಬಿಡುಗಡೆಗೆ ಪೂಜೆ ಮಾಡಿದ್ದರರು. ಇದಕ್ಕೇ ನಾನು ಹೇಳಿದ್ದು. ಕಲಾವಿದರಿಗೆ ಜಾತಿ ಸೋಂಕು ಇಲ್ಲ ಅಂತ.
ಇಷ್ಟು ಮಾತಾಡಕ್ಕೆ ಅವಕಾಶ ಕೊಟ್ಟ ಎಲ್ಲರಿಗೂ ನಮಸ್ಕಾರ. ನನ್ನ ಎಲ್ಲ ಅಭಿಮಾನಿ ದೇವರುಗಳಿಗೆ ನಮಸ್ಕಾರ ಹೇಳಿ ನನ್ನ ತೊದಲು ನುಡಿಗಳನ್ನ ಮುಗಿಸ್ತೇನೆ. ನಿಮ್ಮ ಆಶೀರ್ವಾದ ಈ ರಾಜಕುಮಾರನ ತಲೆ ಮೇಲಿರಲಿ ಎಂದು ಕನ್ನಡ ಬಾವುಟ ಬೀಸಿ ಕೈ ಜೋಡಿಸಿದಾಗ. ಕಿವಿಗಡಚಿಕ್ಕುವ ಕರತಾಡನ. ರಾಜ್‌ಕುಮಾರ್‌ಗೆ ಜೈ ಎಂಬ ಘೋಷಣೆ.
ರಾಜ್ ನೃತ್ಯ : ಇದಾದ ನಂತರ ರಾಜ್‌ಕುಮಾರ್ ಚಿ. ಉದಯಶಂಕರ್ ರಚಿಸಿದ ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು...., ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ( ಎಸ್. ಜಾನಕಿಯವರ ಜತೆ) ನಗುನಗುತಾ ನೀ ಬರುವೆ, ನಗುವಿನಲಿ..... ಗೀತೆಗಳನ್ನು ಹಾಡಿ ಕುಣಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications