Get Updates
Get notified of breaking news, exclusive insights, and must-see stories!

ಕಳ್ಳ ಎಂದಿದ್ದರೂ ಕಳ್ಳನೇ.. ವೀರಪ್ಪನ್‌ ಬಗ್ಗೆ ರಾಜ್‌ ಅಭಿಪ್ರಾಯ

ಬೆಂಗಳೂರು : 108 ದಿನಗಳ ವನವಾಸದ ಬಳಿಕ ಸುರಕ್ಷಿತವಾಗಿ ನಾಡಿಗೆ ಮರಳಿದ ಮೇರು ನಟ ರಾಜ್‌ಕುಮಾರ್‌ ಪ್ರಥಮ ಬಾರಿಗೆ ಅಭಿಮಾನಗಳ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದಾಗ, ಜಯಕಾರ - ಕರತಾಡನ. ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅದ್ಭುತ ಲೋಕವೇ ಸೃಷ್ಟಿಯಾಗಿತ್ತು. ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ತೆಕ್ಕೆಯಲ್ಲಿ ಕ್ರೇನ್‌ನಲ್ಲಿ ಕೈಮುಗಿದು ನಿಂತ ರಾಜ್‌ ಮುಗಿಲಿನೆತ್ತರಕ್ಕೆ ಏರಿದಾಗ ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರವೂ ಮುಗಿಲು ಮುಟ್ಟಿತು.

ಗಣ್ಯರೆಲ್ಲರೂ ವೇದಿಕೆಗೆ ಬಂದ ಬಳಿಕ, ಸನ್ಮಾನ ಸಮಾರಂಭದ ತರುವಾಯ ರಾಜ್‌ಕುಮಾರ್‌ ತಮ್ಮ ಎಂದಿನ ಶೈಲಿಯಲ್ಲೇ ಮಾತಿಗಾರಂಭಿಸಿದರು. ರಾಜ್‌ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ:

ರಾಜ್‌ಕುಮಾರ್‌ : (ಕೈ ಮುಗಿಯುತ್ತಾ) ಮಾನ್ಯ ಮುಖ್ಯಮಂತ್ರಿಗಳಾದ ಆತ್ಮೀಯ ಕೃಷ್ಣ ಅವರೇ, ಗೃಹ ಸಚಿವರಾದ ನಮ್ಮ ಮೆಚ್ಚಿನ ಮಲ್ಲಿಕಾರ್ಜುನ ಖರ್ಗೆ ಅವರೇ, ಚಂದ್ರಶೇಖರ್‌ ಅವರೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೆ.ಸಿ.ಎನ್‌. ಚಂದ್ರು ಅವರೇ ಹಾಗೂ ನನ್ನ ಆತ್ಮೀಯ ಸಹೋದರ ಕಲಾವಿದರೆ, ಎಲ್ಲಕ್ಕಿಂತ ಮಿಗಿಲಾಗಿ ನನ್ನ ಅಭಿಮಾನಿ ದೇವರುಗಳೇ (ಮಾತೇ ಕೇಳದಂತೆ ಕರತಾಡನ, ಜಯಕಾರ, ಸಿಳ್ಳೆ) ಹಾಗೂ ಪತ್ರಿಕಾ ಪ್ರತಿನಿಧಿಗಳೇ...

(ಭಾವೋದ್ವೇಗಕ್ಕೆ ಒಳಗಾಗಿದ್ದ ರಾಜ್‌ ಕೊರೆಯುವ ಚಳಿಯಲ್ಲೂ ಬೆವರಿದರು) ನನಗೆ ಗಂಟಲು ಒಣಗ್ತಿದೆ. ಹೃದಯ ತುಂಬಿ ಬರ್ತಾ ಇದೆ. ಹೇಗೆ ಯಾವ ರೀತಿ ನನ್ನ ಮನಸ್ಸಿನ ಭಾವನೆಗಳನ್ನ , ನನ್ನ ಅಭಿಮಾನಿ ದೇವರುಗಳೊಂದಿಗೆ ಹಂಚಿಕೊಳ್ಳೋಣ ಅಂತ ಯೋಚ್ನೇ ಮಾಡ್ತಾ ಇದ್ದೀನಿ. ನಿಜ ಹೇಳ್ಬೇಕು ಅಂದ್ರೆ ಜೀವ ಸಹಿತ ಬಂದು ನಿಮ್ಮನ್ನ ಕಾಣ್ತೀನಿ ಅಂತ ಅಂದ್ಕೊಂಡೇ ಇರಲಿಲ್ಲ. ನಾನು ದೇವರಲ್ಲಿ ಅರಿಕೆ ಮಾಡಿಕೊಳ್ತಾ ಇದ್ದೇ. ನಿಮ್ಮಲ್ಲರ ಅಭಿಮಾನ ನನಗೆ ಅನುಗ್ರಹಿಸಿದ್ದಾನೆ. ನನಗೆ ತೃಪ್ತಿ ಆಗಿದೆ. ಇದೇನಪ್ಪಾ ಆ ಮೂರು ತಿಂಗಳು ನಾನು ಹೇಗೆ ಕಳೆದೆ ಅಂತ ಯೋಚ್ನೇ ಮಾಡ್ದಾಗ, ಆ ಹಗಲು ರಾತ್ರಿ ಹೇಗೆ ಕಳೆದೆನೋ, ಅದ್ಯಾಕೆ ಬೆಳಗಾಗತ್ತೋ ಅಂತ ಯೋಚಿಸ್ದಾಗ ದುಸ್ತರವಾಗತ್ತೆ. ನಾನು ಕಾಡಲ್ಲಿ ಒಂದೂವರೆ ತಿಂಗಳು ಮಾತ್ರ ನಿದ್ದೇ ಮಾಡಿರಬಹುದು. ಬಾಕಿ ನಿದ್ದೆಗೆ ಅವಕಾಶನೇ ಇರಲಿಲ್ಲ. ಈ ತರ ಸಮಾರಂಭ ವೀರಪ್ಪನ್‌ನಿಂದ ಆಯ್ತು ಅಂತ ಹೇಳ್ಕಳಕ್ಕೆ ಹೆಮ್ಮೆ ಆಗತ್ತೆ. ಯಾವ ಮನುಷ್ಯ ನನ್ನ ಕಾಡಿಗೆ ಕರಕೊಂಡು ಹೋದ್ನೋ ಅವನೇ ನಾಡಿಗೆ ತಂದು ಬಿಟ್ಟ ಅಂತ ಹೇಳಕ್ಕೆ ಹೆಮ್ಮೆ ಆಗತ್ತೆ.

ರಾಜ್‌ ಉದ್ಭವ ಮೂರ್ತಿ ಅಲ್ಲ: ಎಸ್‌.ಎಂ. ಕೃಷ್ಣ ಅವರು ತಮ್ಮ ಎಲ್ಲ ಕೆಲಸ ಬಿಟ್ಟು ನನ್ನ ಬಿಡುಗಡೆಗೆ ಶ್ರಮಿಸಿದ್ದಾರೆ. ನನಗನ್ಸತ್ತೆ ನಾನು ಎಲ್ಲರಿಗೂ ಶ್ರಮಕೊಟ್ಟೆನೇನೋ ಅಂತ. ನಾನು ನಿಮಗೆಲ್ಲಾ ನೋವು ಕೊಟ್ಟೆ. ಅಭಿಮಾನಿ ದೇವರುಗಳು ನನ್ನ ಕ್ಷಮಿಸಬೇಕು. ಅಭಿಮಾನಿಗಳೆಲ್ಲ ನಾನು ಸುರಕ್ಷಿತವಾಗಿ ಬರಲಿ ಅಂತ ದೇವರ ಪೂಜೆ, ಹೋಮ, ಹವನ, ಉರುಳು ಸೇವೆ ಮಾಡಿದ್ರು ಅಂತ ನನ್ನ ಪತ್ನಿಯವರಾದ ಪಾರ್ವತಿ ಹೇಳ್ತಿದ್ರು.. ನಾನು ಅವರಿಗೆ ಹೇಗೆ ಕೃತಜ್ಞತೆ ಹೇಳ್ಲಿ. ನಿಮ್ಮ ರಾಜಕುಮಾರ ಏನೂ ಉದ್ಭವ ಮೂರ್ತಿ ಅಲ್ಲ. ರಾಜ್‌ಕುಮಾರ ಕನ್ನಡಿಗರ ಸ್ವತ್ತು. ಕನ್ನಡಿಗರ ಮಗ, ರಾಜಕುಮಾರ ನಿಮ್ಮವನು. ನಾನೆ ನಿಮ್ಮವನಾದ ಮೇಲೆ ನನ್ನ ತಲೆ ಮೇಲೆ ಭಾರ ಇರಲ್ಲ. ಕಾಡಲ್ಲಿ ಇದ್ದಾಗ್ಲೂ ಕೂಡ ನಾನು ಹಾಗೆ ಅಂದ್ಕೋತಿದ್ದೆ.

ಕರ್ನಾಟಕಕ್ಕೆ ಬಂದು ಈ ಜನಸ್ತೋಮ ನೋಡಿ, ಈ ಮಹಾಪೂರ ನೋಡಿ, ಈ ಅಭಿಮಾನಿ ದೇವರುಗಳ ಸಾಗರ ನೋಡಿ ಸಂದರ್ಶನ ಮಾಡ್ತೀನಿ ಅಂತ ಕನಸು ಮನಸಲ್ಲೂ ಅಂದ್ಕೊಂಡಿರಲಿಲ್ಲ. ಇದು ಘನ ಸರಕಾರ ಮಾಡಿರೋ ಸಹಾಯ. ರಾಜ್‌ಕುಮಾರ್‌ನ ತಂದು ಅಭಿಮಾನಿಗಳಿಗೆ ಒಪ್ಪಿಸಿದಾರಲ್ಲ ಅದನ್ನ ಕನಸು ಮನಸಲ್ಲೂ ಮರೆಯಾಲ್ಲ.

ಕಾಡಲ್ಲಿ ಇದ್ದಾಗ ಯೋಚ್ನೆ ಬರ್ತಿತ್ತು. ಪಾರ್ಟ್‌ ಮಾಡ್ತಾ ಇಲ್ಲ. ಹಾಡಿ ಕುಣಿತಿಲ್ಲ ಅನ್ನೋ ಯೋಚ್ನೆ ಅಲ್ಲ. ಈ ಹರ್ಷೋದ್ಗಾರ, ಈ ಜನರ ನೆನಪು ಸದಾ ಉಳಿಯತ್ತಲ್ಲಾ, ರಾಜ್‌ಕುಮಾರ್‌ನ ಅವರು ಮರೆಯಲ್ಲಾ ಅಲ್ವ ಅನ್ನೋ ನಂಬಿಕೆ ಇತ್ತು.

1

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+