ತಮ್ಮದೇ ಮೇಣದ ಪ್ರತಿಮೆ ಅನಾವರಣ ಸಮಾರಂಭಕ್ಕೆ ಅಮಿತಾಬ್
ಮುಂಬೈ : ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಲಂಡನ್ನ ಮೇಡಂ ಥೌಸಾಡ್ಸ್ ಮೇಣದ ಪ್ರತಿಮೆಗಳ ಸಂಗ್ರಹಾಲಯದಲ್ಲಿ ಡಿಸೆಂಬರ್ 20ರಂದು ಭಾರತೀಯ ಚಿತ್ರರಂಗದ ಹೆಸರಾಂತ ತಾರೆ ಅಮಿತಾಬ್ ಬಚ್ಚನ್ ಅವರ ಪ್ರತಿಮೆ ಅನಾವರಣಗೊಳ್ಳಲಿದೆ.
ಪ್ರತಿವರ್ಷ ಜಗತ್ತಿನ ಪ್ರಮುಖ ವ್ಯಕ್ತಿಗಳ ಕೆಲವು ಪ್ರತಿಮೆಗಳನ್ನು ಅನಾವರಣಗೊಳಿಸುವ ಪರಿಪಾಠವಿಟ್ಟುಕೊಂಡಿರುವ ಮೇಡಂ ಥೌಸಾಡ್ಸ್ ಮ್ಯೂಸಿಯಂನಲ್ಲಿ , ಭಾರತದಿಂದ ಬಚ್ಚನ್ ಅವರ ಪ್ರತಿಮೆ ಈ ಭಾರಿ ಅನಾವರಣಗೊಳ್ಳಲಿದ್ದು, ಈ ಸಮಾರಂಭದಲ್ಲಿ ಸ್ವತಃ ಬಚ್ಚನ್ ಭಾಗವಹಿಸಲಿದ್ದಾರೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ ಮೊದಲ ಭಾರತೀಯ ಚಲನಚಿತ್ರ ಕಲಾವಿದರಾಗಿರುವ ಅಮಿತಾಬ್ ಬಚ್ಚನ್, ತಮ್ಮ ಲಂಡನ್ ಅಭಿಮಾನಿಗಳಿಗೆ ದರ್ಶನ ನೀಡಲು ಹೆಚ್ಚುವರಿಯಾಗಿ 30 ನಿಮಿಷಗಳ ಕಾಲ ತಂಗಲು ಒಪ್ಪಿಕೊಂಡಿದ್ದಾರೆ.
ಸ್ಟಾರ್ಪ್ಲಸ್ನ ಜನಪ್ರಿಯ ಕೌನ್ ಬನೇಗಾ ಕ್ರೋರ್ಪತಿ ಕಾರ್ಯಕ್ರಮದ ಮೂಲಕ ದೂರದರ್ಶಗಳ ವೀಕ್ಷಕರ ರೇಟಿಂಗ್ ಪದ್ದತಿಗೆ ಹೊಸ ಭಾಷ್ಯ ಬರೆದ ಬಚ್ಚನ್ ಅವರ ಮೇಣದ ಪ್ರತಿಮೆ ಅನಾವರಣಗೊಳಿಸಲು ಮ್ಯೂಸಿಯಂನ ಆಡಳಿತ ಮಂಡಳಿ ಇತ್ತೀಚೆಗೆ ತೀರ್ಮಾನಿಸಿತ್ತು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications