ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಗಂಗೂಲಿ ದಿನ, ನಿರಾಯಾಸ ಗೆಲುವಿನಿಂದ ಭಾರತಕ್ಕೆ ಸರಣಿ

By Staff
|
Google Oneindia Kannada News

ಕಾನ್ಪುರ : ಗಂಗೂಲಿ ಅಜೇಯ 71. ಸಚಿನ್‌ 62. ಭಾರತಕ್ಕೆ 25 ಓವರ್‌ಗಳಲ್ಲೇ 9 ವಿಕೆಟ್‌ ಜಯ. ಆ ಮೂಲಕ ಸರಣಿಯ ಗೆಲುವು.

ಹತ್ತು ಓವರ್‌ಗಳಲ್ಲಿ 36 ರನ್ನಿತ್ತು 5 ಹುದ್ದರಿಗಳಿಸಿದ್ದ ಗಂಗೂಲಿ, ಬ್ಯಾಟಿಂಗ್‌ನಲ್ಲೂ ಮಿಂಚಿದರು. 11 ಬೌಂಡರಿ ಮತ್ತು 1 ಸಿಕ್ಸರ್‌ ಇದ್ದ ಅವರ 71 ರನ್ನುಗಳು ಜಿಂಬಾಬ್ವೆ ವಿರುದ್ಧದ ನಾಲ್ಕನೇ ಒಂದು ದಿನದ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಭಾರೀ ಜಯ ತಂದಿತ್ತಿತು. ಗೆಲ್ಲಲು ಇನ್ನು 9 ರನ್‌ ಬೇಕಿದ್ದಾಗ ಸಚಿನ್‌, ಫ್ರೆಂಡ್‌ಗೆ ಎಲ್‌ಬಿಡಬ್ಲ್ಯು ಔಟಾದರು. 86 ಎಸೆತಗಳನ್ನೆದುರಿಸಿದ ಸಚಿನ್‌ 9 ಬೌಂಡರಿಗಳಿದ್ದ 62 ರನ್‌ ಗಳಿಸಿದರು.

ಭಾರತಕ್ಕೆ 166 ರನ್‌ಗಳ ಸವಾಲೇ ಅಲ್ಲದಂಥ ಮೊತ್ತದ ಗುರಿ ಒಡ್ಡಿದ ಜಿಂಬಾಬ್ವೆ ತಂಡದ ಬೌಲರ್‌ಗಳ ಪೈಕಿ ಬಿ.ಸ್ಟ್ರಾಂಗ್‌(10 ಓವರ್‌ಗಳಲ್ಲಿ ವಿಕೆಟ್‌ ಇಲ್ಲದ 29 ರನ್‌) ಅವರನ್ನು ಬಿಟ್ಟರೆ ಉಳಿದ ಯಾರ ಕೈಯಲ್ಲೂ ಸಚಿನ್‌- ಗಂಗೂಲಿ ಹೊಡೆತಗಳಿಗೆ ಉತ್ತರ ಕೊಡಲಾಗಲಿಲ್ಲ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ಕ್ಯಾಂಪ್‌ಬೆಲ್‌ ಮತ್ತು ಮೆಡೋಂಡ ಅವರ ಉತ್ತಮ ಮೊದಲ ವಿಕೆಟ್‌ ಜೊತೆಯಾಟ (61) ದ ನಂತರ 46.4 ಓವರ್‌ಗಳಲ್ಲಿ 165 ರನ್‌ಗಳಿಗೇ ಕುಸಿಯಿತು. ಭಾರತದ ಪರ ಗಂಗೂಲಿ 5, ಅಗರ್ಕರ್‌ 4 ವಿಕೆಟ್‌ ಕಿತ್ತರು.

ಜಿಂಬಾಬ್ವೆಯ ಯಾವ ಆಟಗಾರನೂ ಗಳಿಸದಷ್ಟು ರನ್‌ಗಳನ್ನು (32) ಆ ತಂಡ ಭಾರತಕ್ಕೆ ಇತರೆ ರನ್‌ಗಳ ರೂಪದಲ್ಲೇ ನೀಡಿದ್ದು ಸೋಮವಾರದ ಆಟದ ವೈಶಿಷ್ಟ್ಯ. ಬೌಲಿಂಗ್‌- ಬ್ಯಾಟಿಂಗ್‌ ಎರಡರಲ್ಲೂ ಮಿಂಚಿದ ನಾಯಕ ಸೌರವ್‌ ಗಂಗೂಲಿ ಪಂದ್ಯ ಪುರುಷೋತ್ತಮರಾದರು.

(ಇನ್ಫೋ ವಾರ್ತೆ)

ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X