4ನೇ ಒನ್‌ಡೇ : ಸರಣಿಯಲ್ಲೇ ಜಿಂಬಾಬ್ವೆಯ ಅತಿ ಕಡಿಮೆ ಸ್ಕೋರು
ಕಾನ್ಪುರ : ಇದು ಕ್ರಿಕೆಟ್ಟು ಸ್ವಾಮಿ, ಇಲ್ಲಿ ಏನು ಬೇಕಾದ್ರೂ ಆಗುತ್ತೆ ಅನ್ನೋ ಮಾತನ್ನು ಅಕ್ಷರಶಃ ನಿಜವಾಗಿಸಿದ್ದು ಗಂಗೂಲಿ ಬೌಲಿಂಗ್. ಫ್ಲಾವರ್ ಸಹೋದರರು ಹಾಗೂ ಕಾರ್ಲೈಲ್‌ರಂಥ ಫಾರ್ಮ್‌ನಲ್ಲಿರುವ ಜಿಂಬಾಬ್ವೆ ಆಟಗಾರರೇ ಗಂಗೂಲಿ ಚೆಂಡಿನ ಗತಿ- ದಿಕ್ಕು ಗುರ್ತಿಸುವಲ್ಲಿ ಸಂಪೂರ್ಣ ವಿಫಲರಾದರು. , 5 ವಿಕೆಟ್ ಕಬಳಿಸಿದ ಗಂಗೂಲಿ ಹಾಗೂ 4 ವಿಕೆಟ್ ಕಿತ್ತ ಅಜಿತ್ ಅಗರ್ಕರ್ ಜಿಂಬಾಬ್ವೆಯನ್ನು ಕೇವಲ 165 ರನ್‌ಗಳಿಗೆ ಕಟ್ಟಿ ಹಾಕಿದರು. ಭಾರತ- ಜಿಂಬಾಬ್ವೆ ಪೆಪ್ಸಿ ಕಪ್ ಕ್ರಿಕೆಟ್ ಸರಣಿಯ 4ನೇ ಒಂದು ದಿನದ ಪಂದ್ಯದ ಮೊದಲಾರ್ಧದ ಸಾರಾಂಶವಿದು.
ಈ ಟೂರ್ನಿಯಲ್ಲಿ ಮೊದಲ ಅವಕಾಶ ಗಿಟ್ಟಿಸಿದ ಮೆಡೋಂಡ ಜೊತೆಯಲ್ಲಿ ನಾಯಕ ಅಲಿಯಾಸ್ಟರ್ ಕ್ಯಾಂಪ್‌ಬೆಲ್ 16.4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 61 ರನ್ ಕಲೆ ಹಾಕಿದರು. ನಂತರ ಬಂದವರಾರೂ ನೆಲ ಕಚ್ಚಿ ಆಡಲಿಲ್ಲ. ಹಿಂದಿನ ಪಂದ್ಯ ಉಳಿಸಿಕೊಟ್ಟಿದ್ದ ಫ್ಲಾವರ್ ಸಹೋದರರು ಸೇರಿದಂತೆ ಎಲ್ಲರೂ ಅಗ್ಗವಾಗಿ ಔಟಾದರು. ಪರಿಣಾಮ ಸರಣಿಯಲ್ಲಿ ಮೊದಲ ಬಾರಿಗೆ ಜಿಂಬಾಬ್ವೆ 200ರ ಗಡಿ ದಾಟಲಿಲ್ಲ.45.4 ಓವ-ರು-ಗ-ಳ-ಲ್ಲೇ 165 ರನ್-ಗ-ಳಿ-ಗೆ ಕುಸಿ-ಯಿ-ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಜಿಂಬಾಬ್ವೆ ನಿರ್ಧರಿಸಿದ್ದು ಸರಿಯಾದರೂ, ಬ್ಯಾಟಿಂಗ್ ಪಿಚ್‌ನಲ್ಲೂ ಅನಿರೀಕ್ಷಿತವಾಗಿ ವಿಫಲವಾಯಿತು.
ಕ್ಯಾಂಪ್‌ಬೆಲ್ ಹಾಗೂ ಮೆಡೋಂಡ (ತಲಾ 32 ರನ್) , ಕಾರ್ಲೈಲ್ (20) ಬಿಟ್ಟರೆ ಉಳಿದವರ್ಯಾರೂ 20ರ ಗಡಿ ದಾಟಲಿಲ್ಲ. ತಂಡದ ಥರ್ಡ್ ಹೈಯಸ್ಟ್ ಇತರೆ ರನ್, 21.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications