ಮಾಹಿತಿ ಸಿಂಧು : 3 ಲಕ್ಷ ಹಳ್ಳಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ
ಬೆಂಗಳೂರು : ಹಳ್ಳಿಹೈದರಿಗೆ ಮಾಹಿತಿ ತಂತ್ರಜ್ಞಾನ ತಲುಪಿಸಲು ಇದೋ ಸರ್ಕಾರದ ಇನ್ನೊಂದು ಯೋಜನೆ- ‘ಮಾಹಿತಿ ಸಿಂಧು’. ಬರುವ ವರ್ಷದಿಂದ 3 ಲಕ್ಷ ಗ್ರಾಮಾಂತರ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಕಂಪ್ಯೂಟರ್ ಶಿಕ್ಷಣ ದೊರೆಯಲಿದೆ.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಸೋಮವಾರ ಸುದ್ದಿಗಾರರಿಗೆ ಈ ಹೊಸ ಯೋಜನೆಯ ಪರಿಚಯ ಮಾಡಿಕೊಟ್ಟರು. ಆಯ್ದ 1000 ಶಾಲೆಗಳಲ್ಲಿ 204.33 ಕೋಟಿ ರುಪಾಯಿ ವೆಚ್ಚದಲ್ಲಿ ಯೋಜನೆಯನ್ನು ಮೊದಲು ಜಾರಿಗೆ ತಂದು, ಇಡೀ ಯೋಜನೆಯಡಿಯಲ್ಲಿ 2600 ಸರ್ಕಾರಿ ಶಾಲೆಗಳನ್ನು ತರುವ ಉದ್ದೇಶವಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಭಾರಿ ಉಪಯೋಗವಾಗಲಿದ್ದು, ಬೋಧನೆ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಮಾಧ್ಯಮಗಳಲ್ಲಿರುತ್ತದೆ ಎಂದರು.
ಆಯಲಾಗುವ ಶಾಲೆಗಳ ಪೈಕಿ 700 ಶಾಲೆಗಳ ಕಂಪ್ಯೂಟರ್ ಶಿಕ್ಷಣದ ಉಸ್ತುವಾರಿಯನ್ನು ಎನ್‌ಐಐಟಿ, 200 ಶಾಲೆಗಳನ್ನು ಆ್ಯಪ್‌ಟೆಕ್ ಹಾಗೂ 50ನ್ನು ಎಜುಕಾಂಪ್ ಡೇಟಮ್ಯಾಟಿಕ್ಸ್ ಪ್ರೆೃ. ಲಿಮಿಟೆಡ್‌ಗೆ ವಹಿಸಲಾಗಿದೆ. ಟೆಂಡರ್‌ಗಳನ್ನು ಕರೆದು ಸಂಸ್ಥೆಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಕಂಪ್ಯೂಟರ್‌ಗಳು ಮತ್ತು ಅದರ ಪೂರಕ ಉಪಕರಣಗಳು, ಮೋಡಮ್, ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರ್, ನೆಟ್‌ವರ್ಕಿಂಗ್, ಮೇಜು- ಕುರ್ಚಿ ಮುಂತಾದ ಅಗತ್ಯ ಪೀಠೋಪಕರಣಗಳು, ಸಂವಹನಾ ವ್ಯವಸ್ಥೆ ಇವೆಲ್ಲವನ್ನೂ ಸಂಸ್ಥೆಗಳೇ ಪೂರೈಸಬೇಕು. ಸೋರಿಕೆ ಇಲ್ಲದ, ಧೂಳು ಒಳನುಗ್ಗದಂಥ ಸುಸಜ್ಜಿತ ಕೊಠಡಿಗಳನ್ನು ಮಾತ್ರ ಸರ್ಕಾರ ಒದಗಿಸಿ ಕೊಡುತ್ತದೆ ಎದು ವಿಶ್ವನಾಥ್ ವಿವರಿಸಿದರು.
ಯೋಜನೆಗೆ ಒಟ್ಟು 11,300 ಕಂಪ್ಯೂಟರ್‌ಗಳು ಬೇಕಾಗುತ್ತವೆ. ಗಣಿತ, ವಿಜ್ಞಾನ, ಸಮಾಜ ಪರಿಚಯ ಮತ್ತು ಇಂಗ್ಲಿಷ್ ವಿಷಯಗಳಲ್ಲಿನ ಕಂಪ್ಯೂಟರ್ ಸಂಬಂಧಿತ ಪಠ್ಯವನ್ನೂ ಸಂಸ್ಥೆಗಳೇ ಬೋಧಿಸಲಿವೆ. ಆಯ್ಕೆ ಮಾಡಲಾಗುವ ಎಲ್ಲಾ ಶಾಲೆಗಳಿಗೂ ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗುವುದು. ಪ್ರತಿಯಾಬ್ಬ ವಿದ್ಯಾರ್ಥಿ ಇ-ಮೇಲ್ ಅಕೌಂಟ್ ತೆರೆದು, ಸಂವಹನೆ ಮಾಡಬೇಕು. ಕಂಪ್ಯೂಟರ್ ಕೊಠಡಿಗಳು ಸಿದ್ಧವಾದ 15 ಅಥವಾ 45 ದಿನಗಳೊಳಗೆ ಕೋರ್ಸನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಎನ್‌ಐಐಟಿ ಕೈಗೆತ್ತಿಕೊಳ್ಳುತ್ತಿರುವ ಶಾಲೆಗೆ ಸಂಬಂಧಿಸಿದ ಏಕೈಕ ಯೋಜನೆ ಇದಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ 371 ಶಾಲೆಗಳಲ್ಲಿ ಸಂಸ್ತೆ ಇಂಥ ಶಿಕ್ಷಣವನ್ನು ಯಶಸ್ವಿಯಾಗಿ ಬೋಧಿಸಿದೆ. ನಮ್ಮ ಸಂಸ್ಥೆಗೆ ಇದೊಂದು ಒಳ್ಳೆ ಅವಕಾಶ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದ ಎನ್‌ಐಐಟಿ ಅಧ್ಯಕ್ಷ ಸುಧಾ ರಾಜು ಹೇಳಿದರು.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications