Get Updates
Get notified of breaking news, exclusive insights, and must-see stories!

ಜನಗಣತಿಯಲ್ಲಿ ವೀರಶೈವರೆಂದೇ ದಾಖಲಿಸಲು ಮಠಾಧೀಶರ ಕರೆ

ಬೆಂಗಳೂರು : ವೀರಶೈವ ಜನಾಂಗದ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಜನಗಣತಿಯಲ್ಲಿ ವೀರಶೈವ - ಲಿಂಗಾಯಿತ ಎಂದೇ ಬರೆಸುವಂತೆ ತಮ್ಮ ಸಮುದಾಯಕ್ಕೆ ರಾಜ್ಯದ ವಿವಿಧ ಮಠಾಧೀಶರು ಹಾಗೂ ರಾಜಕೀಯ ಮುಖಂಡರು ಶನಿವಾರ ಬೆಂಗಳೂರಿನಲ್ಲಿ ಕರೆ ನೀಡಿದ್ದಾರೆ.

ಜನಗಣತಿಯ ಪಟ್ಟಿಯಲ್ಲಿ ವೀರಶೈವ - ಲಿಂಗಾಯತ ಎಂದು ಬರೆಸುವಂತೆ ಜನಜಾಗೃತಿ ಮೂಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಡೆಸುತ್ತಿರುವ ಜನಜಾಗೃತಿ ವಾಹಿನಿ ಜಾಥಾ ಶುಕ್ರವಾರ ಬೆಂಗಳೂರಿಗೆ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಮಲ್ಲೇಶ್ವರ ಆಟದ ಮೈದಾನದಲ್ಲಿ ಬೃಹತ್‌ ಸಮಾವೇಶವೂ ಜರುಗಿತು.

ಈ ಸಮಾವೇಶದಲ್ಲಿ ಸಿದ್ದಗಂಗಾ ಮಠಾಧೀಶರಾದ ಡಾ. ಶ್ರೀ ಶಿವಕುಮಾರ ಸ್ವಾಮಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮಿ, ಮುಮ್ಮಡಿ ಮಹಾಲಿಂಗ ಸ್ವಾಮಿ, ರಾಜಾಪುರ ಮಠದ ಶ್ರೀ ರೇಣುಕಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ದಗಂಗಾ ಮಠಾಧೀಶರಾದ ಶಿವಕುಮಾರ ಸ್ವಾಮಿಗಳು, ವೀರಶೈವ ಸಮಾಜದಲ್ಲಿ ಒಳಪಂಗಡಗಳು ಹುಟ್ಟಿಕೊಳ್ಳುತ್ತಿವೆ. ಈ ಬೆಳವಣಿಗೆಯಿಂದ ಒಡಕೂ ಉಂಟಾಗುತ್ತಿದೆ. ಈ ಬಗ್ಗೆ ತಮ್ಮ ಸಮಾಜದವರು ಜಾಗೃತರಾಗಬೇಕು ಎಂದೂ ಹೇಳಿದರು. ಜನಗಣತಿಯಲ್ಲಿ ವೀರಶೈವ - ಲಿಂಗಾಯತ ಎಂದು ಬರೆಯಿಸಿ ಎಂಬ ಫಲಕವನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ಶಾಸಕ ಚಂದ್ರಕಾಂತ ಬೆಲ್ಲದ್‌, ವಿಶ್ವನಾಥ ರೆಡ್ಡಿ ಮುದ್ನಾಳ್‌, ಶಾಸಕ ರವಿಕಾಂತ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಎಂ.ವಿ. ರಾಜಶೇಖರನ್‌, ಪ್ರಮೀಳಾ ನೇಸರ್ಗಿ, ಬಿ.ಎಸ್‌. ಪರಮಶಿವಯ್ಯ, ಎಚ್‌.ವಿ. ನಾಗೇಂದ್ರಪ್ಪ ಮೊದಲಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಚಿ.ಮೂ ಧರಣಿ : ಈ ಮಧ್ಯೆ ಸಮಾವೇಶವನ್ನು ಪ್ರತಿಭಟಿಸಿ ಹಾಗೂ ವೀರಶೈವರು ಹಿಂದೂಗಳಲ್ಲ ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ಹೇಳಿಕೆ ಖಂಡಿಸಿ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ. ಚಿದಾನಂದ ಮೂರ್ತಿ ಶನಿವಾರ ಬೆಂಗಳೂರಿನ ಬಸವೇಶ್ವರ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹವನ್ನೂ ನಡೆಸಿದರು.

ವಿಶಿಷ್ಟ ಧಾರ್ಮಿಕ ಪದ್ಧತಿ ಹೊಂದಿರುವ ತಮ್ಮದು ಪ್ರತ್ಯೇಕ ಧರ್ಮ ಎಂದು ಹೇಳಿಕೆ ನೀಡಿ ಮಹಾ ಸಭಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದೂ ಅವರು ಆರೋಪಿಸಿದರು.

ಬಹಿಷ್ಕಾರ : ಮಹಾ ಸಭಾದ ನಿರ್ಧಾರದ ವಿರುದ್ಧ ಧರಣಿ ನಡೆಸಿದ ಚಿದಾನಂದ ಮೂರ್ತಿ ಅವರಿಗೆ ವೀರಶೈವ ಮಹಾಸಭಾ ಬಹಿಷ್ಕಾರ ಹಾಕಿದೆ. ಬಹಿಷ್ಕಾರ ಹಾಕಿರುವ ವಿಷಯವನ್ನು ಮಹಾಸಭಾದ ಉಪಾಧ್ಯಕ್ಷರು ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+