Get Updates
Get notified of breaking news, exclusive insights, and must-see stories!

14ರಿಂದ ಮಂಡ್ಯದಲ್ಲಿ ರಾಜ್ಯ ಮಟ್ಟದ ಕಿರಿಯರ ಈಜು ಸ್ಪರ್ಧೆ

ಮಂಡ್ಯ : ಇಲ್ಲಿನ ಜನತಾ ಶಿಕ್ಷಣ ಟ್ರಸ್ಟ್‌ ಹಾಗೂ ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಆಶ್ರಯದಲ್ಲಿ ಡಿಸೆಂಬರ್‌ 14ರಿಂದ 16ರವರೆಗೆ ರಾಜ್ಯ ಮಟ್ಟದ ಕಿರಿಯರ ಶಾರ್ಟ್‌ ಕೋರ್ಸ್‌ ಈಜು ಸ್ಪರ್ಧೆ ನಡೆಯಲಿದೆ. ಪಿ.ಇ.ಟಿ. ಈಜು ಕೇಂದ್ರದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ ಎಂದು ಪಿ.ಇ.ಟಿ. ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಸಚ್ಚಿದಾನಂದ ತಿಳಿಸಿದ್ದಾರೆ.

ಪ್ರಪ್ರಥಮ ಬಾರಿಗೆ ಈ ಸ್ಪರ್ಧೆ ಇಲ್ಲಿ ನಡೆಯುತ್ತಿದ್ದು, ವ್ಯವಸ್ಥಿತವಾಗಿ ಹಾಗೂ ಆಕರ್ಷಕವಾಗಿ ಸ್ಪರ್ಧೆಯನ್ನು ನಡೆಸಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದೂ ಅವರು ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ಹತ್ತರಿಂದ ಹದಿನೇಳು ವರ್ಷದೊಳಗಿನ ಸುಮಾರು 300ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸುತ್ತಿದ್ದಾರೆ ಎಂದರು.

ಗುರುವಾರ ಬೆಳಗ್ಗೆ 9.30ಕ್ಕೆ ಸ್ಪರ್ಧೆಯನ್ನು ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಕೆ.ವಿ.ಆರ್‌. ಠಾಕೂರ್‌ ಉದ್ಘಾಟಿಸುತ್ತಿದ್ದು, ಪಿ.ಇ.ಟಿ. ಅಧ್ಯಕ್ಷರೂ ಹಾಗೂ ಶಾಸಕರೂ ಆದ ಎಚ್‌.ಡಿ. ಚೌಡಯ್ಯ ಅಧ್ಯಕ್ಷತೆ ವಹಿಸುವರು ಎಂದರು.

16ರಂದು ಸಮಾರೋಪ ನಡೆಯಲಿದ್ದು, ಕ್ರೀಡಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷರಾದ ಬಿ. ಶಿವಕುಮಾರ್‌ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇದೆ ಎಂದು ಸಚ್ಚಿದಾನಂದ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+