Get Updates
Get notified of breaking news, exclusive insights, and must-see stories!

ಕ್ಷಮೆಗೆ ಪಾತ್ರರಾದ ನವಾಜ್‌ ಷರೀಫ್‌, ಸೌದಿಗೆ ಗಡಿಪಾರು

ಇಸ್ಲಾಮಾಬಾದ್‌ : ಸರಕಾರದಿಂದ ಕ್ಷಮೆ ದೊರಕಿದ ತರುವಾಯ ಗಡಿಪಾರಿಗೆ ಒಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಭಾನುವಾರ ಬೆಳಗ್ಗೆ ತಮ್ಮ ದೇಶವನ್ನು ತೊರೆದು ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಇಲ್ಲಿನ ಮಿಲಿಟರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಷರೀಫ್‌ ತಮ್ಮ ಪತ್ನಿ ಹಾಗೂ ಇತರ 18 ಮಂದಿ ಕುಟುಂಬದ ಸದಸ್ಯರ ಜತೆಗೂಡಿದರು. 14 ತಿಂಗಳ ಹಿಂದೆ ಮಿಲಿಟರಿ ಆಡಳಿತಗಾರ ಜನರಲ್‌ ಮುಷಾರಫ್‌ ಅವರಿಂದ ಪದಚ್ಯುತರಾಗಿದ್ದ ಷರೀಫ್‌ ಆನಂತರ ಶನಿವಾರ ಸೌದಿ ಅರೇಬಿಯಾದಿಂದ ಇಲ್ಲಿಗೆ ಆಗಮಿಸಿದ್ದ ವಿಮಾನದಲ್ಲಿ ರಾಷ್ಟ್ರವನ್ನು ತೊರೆದು ಹೊರಟರು.

ಷರೀಫರ ಜತೆಗೆ ಅವರ ತಂದೆ ಮಿಯಾನ್‌ ಮೊಹಮ್ಮದ್‌ ಷರೀಫ್‌, ತಾಯಿ, ಹೆಂಡತಿ ಕುಲ್ಸೂಮ್‌, ಸೋದರರಾದ ಷಹಾಬಾಜ್‌ ಮತ್ತು ಅಬ್ಬಾಸ್‌, ಮಗ ಹುಸೇನ್‌, ಮಗಳು ಮರಿಯಮ್‌, ಅಸ್ಮಾ, ಅಳಿಯ ಸಫ್ದರ್‌, ಸೊಸೆ ಸಾಹಿರಾ ಮತ್ತು ಇತರ ಕುಟುಂಬ ವರ್ಗದವರೊಂದಿಗೆ ತೆರಳಿದ್ದಾರೆ.

ಷರೀಫ್‌ ಅವರು ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯ ಆರೋಪಕ್ಕಾಗಿ ಸೆರೆವಾಸ ಅನುಭವಿಸುತ್ತಿದ್ದರು. ಅವರಿಗೆ ಜೀವಾವಧಿ ಶಿಕ್ಷೆಯೂ ಆಗಿತ್ತು. (ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+