ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ನಿಮ್ಮ ಮನಸ್ಸನ್ನು ಬೇಕೆಂದಾಗ ನೀವು ಬದಲಾಯಿಸಬಲ್ಲಿರಿ ಹಾಗೆಂದು ಹೋದಲ್ಲಿಗೆ ಮನಸ್ಸು ಹರಿಬಿಡಬೇಡಿ. ಆರ್ಥಿಕ ವಿಷಯದಲ್ಲಿ ನಿಮಗೆ ಜಯವಿದೆ. ನಂಬಿದವರೇ ಕೈಕೊಟ್ಟಾರು ಸ್ವಲ್ಪ ಜಾಗರೂಕರಾಗಿರಿವೃಷಭ : ನೀವು ಕಣ್ಣಾರೆ ಕಂಡಿದ್ದೂ ಸುಳ್ಳಾದೀತು. ನಿಧಾನಿಸಿ ಯೋಚಿಸಿದರೆ ನಿಜ ತಿಳಿಯುತ್ತದೆ. ಕೋಪದಿಂದ ಕೊಯ್ದ ಮೂಗು ಮತ್ತೆ ಬರುವುದಿಲ್ಲ. ಸಮಾಧಾನವೇ ಪ್ರಧಾನ. ತಾಳ್ಮೆಕೆಟ್ಟರೆ ಕೇಡು.
ಮಿಥುನ : ನಿಮ್ಮ ಬದುಕಿನಲ್ಲಿ ಹೊಸ ಸಂಬಂಧ ಸೃಷ್ಟಿಯಾಗಲಿದೆ. ನಿಮ್ಮ ಒಂದೆರಡು ತಪ್ಪು ನಿರ್ಧಾರಗಳಿಂದ ಪಶ್ಚಾತ್ತಾಪ ಪಡಬೇಕಾದೀತು. ನಿರ್ಧಾರಕ್ಕೆ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ಮಾಡಿ.
ಕಟಕ : ಲಾಭದಾಯಕ ಮಜಲಿನ ಮೆಟ್ಟಿಲು ಏರುತ್ತಲಿದ್ದೀರಿ. ಜಯಿಸಿ ಬಿಟ್ಟೆ. ನನಗೆ ಇನ್ನಾರು ಸಾಟಿ ಎನ್ನದಿರಿ. ಮರಕ್ಕಿಂತ ಮರ ದೊಡ್ಡದಿರುತ್ತದೆ. ಸೃಷ್ಟಿಯ ಮುಂದೆ ನೀವು ಅತ್ಯಂತ ಕುಬ್ಜರು. ಇತರರ ಭವಿಷ್ಯದ ಬಗ್ಗೆ ಚಿಂತೆ ಬೇಡ. ನಿಮ್ಮ ಬಗ್ಗೆ ಯೋಚಿಸಿ.
ಸಿಂಹ : ಹೊರಗೆ ಮಂಜು ಸುರಿಯುತ್ತಿದೆ. ನಿಮ್ಮ ಮನಸ್ಸೂ ಮಂಜಿನಿಂದ ಮುಸುಕಿದಂತಾಗಿದೆ. ಬಿಸಿಲು ಬಿದ್ದು, ಮಂಜು ಕರಗಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ನೀವು ಹೆಚ್ಚು ಗೊಂದಲಕ್ಕೆ ಒಳಗಾಗದೇ ಸಹನೆಯಿಂದಿರಿ.
ಕನ್ಯಾ : ನೀವು ತೊಂದರೆಗೆ ಸಿಲುಕಿದ್ದೀರಿ. ಅದಕ್ಕೆ ನಿಮ್ಮ ಸುತ್ತಲಿನವರೇ ಕಾರಣ ಎಂಬುದು ನಿಮ್ಮ ಭಾವನೆ. ಸತ್ಯವೇ ಬೇರೆ. ನೀವೂ ಅದಕ್ಕೆ ಕಾರಣರು. ನಂಬಿಕೆ ದ್ರೋಹ ಮಾಡುವವರ ಬಗ್ಗೆ ಹುಷಾರಾಗಿದ್ದರೆ, ಜಯ ನಿಮ್ಮದೆ.
ತುಲಾ : ಎಲ್ಲವೂ ಇದೆ. ಎಲ್ಲವೂ ಇಲ್ಲ. ಈ ಸೃಷ್ಟಿಯೇ ಹಾಗೆ, ಹಲ್ಲಿದ್ದವರಿಗೆ ಕಡಲೆ ಸಿಗುವುದಿಲ್ಲ. ಕಡಲೆ ಇರುವವರ ಬಳಿ ಹಲ್ಲಿಲ್ಲ. ಅನವಶ್ಯಕ ಒತ್ತಡ ಬೇಡ. ಧನಲಾಭ ಇದೆ. ಪ್ರಯಾಣದಿಂದ ಸೌಭಾಗ್ಯ ದೊರಕಲಿದೆ.
ವೃಶ್ಚಿಕ : ಸಂಗಾತಿಯ ಆಗಮನದಿಂದ ಸಂತಸ ಇದೆ. ಊಟದ ಬಗ್ಗೆ ಎಚ್ಚರಿಕೆ ಇಲ್ಲದಿದ್ದರೆ, ರೋಗ ನಿಮ್ಮನ್ನು ಬಿಡದು. ನೀವು ರಹಸ್ಯ ಕಾಪಾಡಿಕೊಂಡಷ್ಟೂ ನಿಮಗೇ ಒಳಿತು. ಗುಟ್ಟು ಬಿಟ್ಟುಕೊಟ್ಟರೆ ನೀವೇ ಅಪಾಯಕ್ಕೆ ಆಹ್ವಾನ ಕೊಟ್ಟಂತೆ
ಧನಸ್ಸು : ಬಾಣದ ಮೊನಚು ಬಲು ಹರಿತ. ನಿಮ್ಮ ಮನಸ್ಸೂ ಇಂದು ಹಾಗೇ ಇದೆ. ಆದರೆ ನಾಲಿಗೆಗೆ ಕಡಿವಾಣ ಹಾಕಿ, ನೀವು ಮಾಮೂಲಿನ ಬದುಕಿಗೆ ಮರಳಲು ಇಂದು ಸೊಗಸಾದ ಅವಕಾಶ ಇದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳದಿರಿ.
ಮಕರ : ಇಂದು ವಿಶ್ರಾಂತಿ ನಿಮಗೆ ತೀರಾ ಅಗತ್ಯ. ಹಲವು ವಿಷಯಗಳು ನಿಮ್ಮ ತಲೆ ತಿನ್ನುತ್ತಿವೆ. ಆಯ್ಕೆಯ ಗೊಂದಲವೂ ಮನಸ್ಸಿನಲ್ಲಿದೆ. ನೀವೀಗಾಗಲೇ ಬದಲಾವಣೆಯ ಹಾದಿಯಲ್ಲಿ ಸಾಕಷ್ಟು ಸಾಧಿಸಿದ್ದೀರಿ. ಮನಸ್ಸು - ಪರಿಸ್ಥಿತಿ ತಿಳಿಯಾಗುತ್ತದೆ.
ಕುಂಭ : ನಿಮಗೆ ಗೊತ್ತಿಲ್ಲದಿರುವುದೇ ಇಲ್ಲ. ಇದು ನಿಮ್ಮ ಮನದಂತರಾಳದ ಧ್ವನಿ. ಮುಂದೇನು ಎಂಬ ಗೊಂದಲವೂ ಇದೆ. ಏಕಾಂಗಿ ಹೋರಾಟದಲ್ಲಿ ನಿಮಗೇ ಜಯ. ಮುಂದಿನ ಹೆಜ್ಜೆಗಳ ಬಗ್ಗೆ ಚಿಂತನೆ ಅತ್ಯಗತ್ಯ. ಷೇರು ವ್ಯವಹಾರದಿಂದ ಲಾಭ ಮಾಡುತ್ತೀರಿ.
ಮೀನ : ವೃತ್ತಿಗೆ ಸಂಬಂಧಿಸಿದ ಮಹಾತ್ವಾಕಾಂಕ್ಷೆಗಳ ಜೊತೆ ಗುದ್ದಾಡಲೇ ಬೇಕು. ಭಾವನಾತ್ಮಕ ಮತ್ತು ಪ್ರಣಯೋತ್ತೇಜಕ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿದೆ. ಭಾವನಾತ್ಮಕ ಸಂಬಂಧಗಳಿಗೆ ಬೆಲೆ ನೀಡಿ. ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications