ಭಾತರದಲ್ಲಿ ಸ್ಥಿರಗೊಂಡ ನೇರ ಮಾರುಕಟ್ಟೆ ವ್ಯವಸ್ಥೆ- ಸಮೀಕ್ಷಾ ವರದಿ ಫಲಿತಾಂಶ
* ಇಮ್ರಾನ್ ಖುರೇಶಿ
ಬೆಂಗಳೂರು : ಮಧ್ಯವರ್ತಿಗಳ ಹಾವಳಿಯಿಲ್ಲದ ನೇರ ಮಾರುಕಟ್ಟೆ ವ್ಯವಸ್ಥೆ ಭಾರತದಲ್ಲಿ ಸ್ಥಿರಗೊಂಡಿದೆಯೇ ? ಸಮೀಕ್ಷಾ ವರದಿಯಾಂದು ಹೌದೆನ್ನುತ್ತದೆಯಿತ್ತೀಚಿನ ವರದಿಯ ಪ್ರಕಾರ ನೇರ ಮಾರುಕಟ್ಟೆಯ ವಹಿವಾಟು ಈಗ ಶೇಕಡಾ 38.5ರಷ್ಟು ಹೆಚ್ಚಾಗಿದೆ. ಒಟ್ಟು ಬಂಡವಾಳ ವಹಿವಾಟು ಎರಡು ಸಾವಿರ ಮಿಲಿಯನ್‌ಗಳಿಗೇರಿದೆ. ಇದು ಕಂಪನಿಗಳಿಗೆ ಸಂತಸದ ಸುದ್ದಿ. ಹಾಗೆಯೇ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮೂಲಕ ಹಣಕಾಸು ಸ್ವಾತಂತ್ರವನ್ನು ಹೆಚ್ಚಿಸಿರುವುದರಿಂದ ಇದರಲ್ಲಿ ತೊಡಗಿಕೊಂಡಿರುವ ಜನರಿಗೆ ಇದು ಇನ್ನೂ ಒಳ್ಳೆಯ ಸುದ್ದಿ ಎಂದು ಭಾರತದ ನೇರ ಮಾರುಕಟ್ಟೆ ಸಂಘಟನೆ (ಐಡಿಎಸ್‌ಎ) ಹೇಳಿದೆ.
ಉದ್ಯೋಗ ಸೃಷ್ಟಿ ಕೂಡಾ ಗಣನೀಯವಾಗಿ ಹೆಚ್ಚಾಗಿದೆ. ಈ ರಂಗದಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡಿರುವವರ ಸಂಖ್ಯೆ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಗೃಹಿಣಿಯರಂತೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಉತ್ತಮ ನೌಕರಿಯಲ್ಲಿರುವ ತಮ್ಮ ಗಂಡಂದಿರುಗಳಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾರೆ. ಇದಕ್ಕಿಂತ ಸ್ವಾರಸ್ಯಕರ ಸುದ್ದಿ ಎಂದರೆ ಅನೇಕ ಗಂಡಂದಿರು ತಮ್ಮ ನೌಕರಿ ತ್ಯಜಿಸಿ ಹೆಂಡತಿಯರೊಂದಿಗೆ ಕೈಜೋಡಿಸಿರುವುದು.
ಈ ರಂಗದಲ್ಲಿನ ಉದ್ಯೋಗ ಸೃಷ್ಟಿ 1.1 ಮಿಲಿಯನ್ ದಾಟುವ ಸಾಧ್ಯತೆಯೂ ಇದ್ದು, ಅವಕಾಶಗಳೂ ಕೂಡಾ ಹೆಚ್ಚಿವೆ ಎಂದು ಐಡಿಎಸ್‌ಎನ ಉಪಾಧ್ಯಕ್ಷ ಮತ್ತು ಆಮ್‌ವೇ ಇಂಡಿಯಾ ಎಂಟರ್‌ಪ್ರೆೃಸಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ವಿಲಿಯಮ್ ಎಸ್. ಪಿಂಕಿನಿ ಅಭಿಪ್ರಾಯಪಟ್ಟಿದ್ದಾರೆ.
ಸೌಂದರ್ಯವರ್ಧಕಗಳ ಭರಾಟೆ : ಗೃಹಬಳಕೆ, ವ್ಯಕ್ತಿಗತವಾಗಿ ಬಳಸುವ ವಸ್ತುಗಳಿಂದಾ ಹಿಡಿದು ಪುಸ್ತಕಗಳು, ಮಲ್ಟಿಮೀಡಿಯಾ ಹಾಗೂ ಅಡುಗೆ ಸಾಮಾನುಗಳು ವಹಿವಾಟು ಹೆಚ್ಚಾಗುತ್ತಲೇ ಇದ್ದು ಇತ್ತೀಚಿನ ದಿನಗಳಲ್ಲಿ ಶೇಕಡಾ 50ರಷ್ಟು ಹೆಚ್ಚಿದೆ. ಐಡಿಎಸ್‌ಎ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಡಯೆಟರಿ ಸಪ್ಲಿಮೆಂಟ್‌ಗಳಲ್ಲಿ ಒಂದಾದ ಹರ್ಬಲ್ ಲೈಫ್‌ನ ಮಾರಾಟ ಪ್ರಮಾಣ ಶೇಕಡಾ 100ರಷ್ಟು ಹೆಚ್ಚಾಗಿದೆ. ಇನ್ನೊಂದು ಗಮನಾರ್ಹ ಬೆಳವಣಿಗೆಯಲ್ಲಿ ಬೆಲೆ ಬಾಳುವ ಅನೇಕ ಸೌಂದರ್ಯ ವರ್ಧಕಗಳು, ಬೆಳೆದಿರುವ ನಗರಗಳಿಗಿಂತ ಬೆಳೆಯುತ್ತಿರುವ ನಗರಗಳಲ್ಲಿ ಹೆಚ್ಚಾಗಿ ಖರ್ಚಾಗುತ್ತಿವೆ.
ಸಗಟು ಮಾರಕಟ್ಟೆಗಿಂತ ಮುಂದು : ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಿಕರಿಯಾಗುವ ಮಾಲುಗಳ ಗುಣಮಟ್ಟದ ಬಗ್ಗೆ ಕನಿಷ್ಠ ಗ್ಯಾರಂಟಿ ಅತ್ಯಗತ್ಯ ಎಂಬುದನ್ನು ಎಲ್ಲ ಕಂಪನಿಗಳೂ ಅರಿಯತೊಡಗಿವೆ. ಹಾಗಾಗಿ ಭಾರತದಲ್ಲಿ ನೇರ ಮಾರುಕಟ್ಟೆಗೆ ಇನ್ನೂ ವ್ಯಾಪಕ ಅವಕಾಶಗಳಿವೆ. ಎಲ್ಲ ಅವಕಾಶಗಳನ್ನು ಬಳಸಿಕೊಂಡರೆ ಸಗಟು ಮಾರಟಕ್ಕಿಂತ ಹೆಚ್ಚಿನ ವಹಿವಾಟನ್ನು ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಡೆಯಬಹುದು ಎಂದು ಐಡಿಎಸ್‌ಎನ ಸಹಸಂಸ್ಥಾಪಕ ಹಾಗೂ ಎಲ್‌ಬಿ ಪಬ್ಲಿಷರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮೀನಾರಾಯಣ ಹೇಳುತ್ತಾರೆ.
ನೇರ ಮಾರುಕಟ್ಟೆ ವ್ಯಸ್ಥೆಯಲ್ಲಿ ಮಾರಾಟವಾಗುವ ವಸ್ತುಗಳ ಗುಣಮಟ್ಟದ ಬಗೆಗೆ ಕಾನೂನು ಜಾರಿಯಾಗುವವರೆಗೆ ಸ್ವಯಂ ನೀತಿ ಸಂಹಿತೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಸ್ತುಗಳು ಕೆಲಸ ಮಾಡದಿದ್ದರೆ ಹಣ ವಾಪಸ್ ನೀಡುವ ಭರವಸೆ ನೀಡಲಾಗುತ್ತಿದೆ. ನೇರ ಮಾರಾಟ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಕೆಲವು ಕಂಪನಿಗಳು ಸ್ವಯಂನೀತಿ ಸಂಹಿತೆಗಾಗಿ ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿವೆ ಎಂದು ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications