Get Updates
Get notified of breaking news, exclusive insights, and must-see stories!

ತಿರುಪತಿ, ಕೊಲ್ಲಾಪುರಕ್ಕೆ ಕೆಎಸ್ಸಾರ್ಟಿಸಿ ಹೈಟೆಕ್‌ ಬಸ್‌ಸಂಚಾರ ಆರಂಭ

ಬೆಂಗಳೂರು : ಬೆಂಗಳೂರಿನಿಂದ ತಿರುಪತಿ ಹಾಗೂ ಕೊಲ್ಲಾಪುರ ನಡುವೆ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಪಿ -5000 ಮಾದರಿಯ ಅಲ್ಟ್ರಾ ಡಿಲಕ್ಸ್‌ ಬಸ್‌ಗಳ ಸಂಚಾರ ಆರಂಭವಾಗಿದೆ.

ದೂರ ಪ್ರಯಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ವಿಶೇಷ ವ್ಯವಸ್ಥೆಗಳಿರುವ ಈ ಬಸ್‌ಗಳಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಹಾಗೂ ಕಾಲು ಚಾಚಲು ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಕೊಲ್ಲಾಪುರಕ್ಕೆ ಹೊರಡುವ ಈ ಬಸ್‌ ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರ ತಲುಪಲಿದೆ.

ಬೆಂಗಳೂರಿನಿಂದ ರಾತ್ರಿ 8-15ಕ್ಕೆ ಹೊರಡುವ ಬಸ್‌ ಕೊಲ್ಲಾಪುರವನ್ನು ಬೆಳಗ್ಗೆ 9-15ಕ್ಕೆ ತಲುಪುತ್ತದೆ. ಮತ್ತೆ ಕೊಲ್ಲಾಪುರದಿಂದ ಮಧ್ಯಾಹ್ನ 3-45ಕ್ಕೆ ಬಿಡುವ ಬಸ್‌ ಬೆಂಗಳೂರಿಗೆ ಬೆಳಗ್ಗೆ 5-15ಕ್ಕೆ ತಲುಪಲಿದೆ. ಪ್ರಯಾಣ ದರ 326 ರುಪಾಯಿಗಳು.

ಬೆಂಗಳೂರು ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ಬಸ್‌ ಕೋಲಾರ, ಮುಳಬಾಗಲು ಹಾಗೂ ಚಿತ್ತೂರು ಮಾರ್ಗವಾಗಿ ತಿರುಪತಿ ತಿಮ್ಮಪ್ಪನ ಊರಿಗೆ ಸಾಗುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 7-30ಕ್ಕೆ ಹೊರಡುವ ಬಸ್‌ ಮಧ್ಯಾಹ್ನ 12.45ಕ್ಕೆ ತಿರುಪತಿ ತಲುಪಿದರೆ, ಬೆಳಗ್ಗೆ 10 ಗಂಟೆಗೆ ಬೆಂಗಳೂರು ಬಿಡುವ ಬಸ್‌ ಮಧ್ಯಾಹ್ನ 3-15ಕ್ಕೆ ತಿರುಪತಿ ತಲುಪಲಿದೆ.

ಅಂತೆಯೇ ಮಧ್ಯಾಹ್ನ 12ಕ್ಕೆ ತಿರುಪತಿಯಿಂದ ಹೊರಡುವ ಬಸ್‌ ಸಂಜೆ 5ಕ್ಕೂ ಹಾಗೂ ಸಂಜೆ 5 ಗಂಟೆಗೆ ಹೊರಡುವ ಬಸ್‌ ರಾತ್ರಿ 10-15ಕ್ಕೂ ಬೆಂಗಳೂರಿಗೆ ಮರಳಲಿದೆ. ಪ್ರಯಾಣ ದರ 133 ರುಪಾಯಿಗಳು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+