ಕಲ್ಲಡ್ಕ ಬೊಂಡ ಮೇಳದಲ್ಲಿ 10,000 ಎಳನೀರು ಮಾರಾಟ ದಾಖಲೆ
ಮಂಗಳೂರು : ಬೆಂಗಳೂರಿನ ಕಿಡ್ಸ್ ಕೆಂಪ್ ಮುಂದೆ ಜೋಕರ್, ಕರಡಿ, ಕೋತಿ ಇತ್ಯಾದಿ.... ವೇಷ ತೊಟ್ಟ ಮಂದಿ ಮಕ್ಕಳನ್ನು ಆಕರ್ಷಿಸುವುದನ್ನು ನೀವು ಕಂಡಿದ್ದೀರಿ. ಆದರೆ ಇದೇ ವೇಷಧಾರಿಗಳು ಕಲ್ಲಡ್ಕದ ಬೊಂಡ ಮೇಳದಲ್ಲಿ ಎಳನೀರು ಹಿಡಿದು ನಿಂತ ದೃಶ್ಯ ನೋಡುಗರಿಗೆ ವಿಶೇಷವಾಗಿ ತೋರಿತು.
ಕ್ರಿಕೆಟ್ ಬ್ಯಾಟ್ ತಿನ್ನಿಸುವ ಪೆಪ್ಸಿ ಕೋಲಾ ಜಾಹೀರಾತುಗಳ ಭರಾಟೆಯಲ್ಲಿ ಸ್ವದೇಶೀ ತಾಜಾ ಎಳನೀರಿಗೆ ಮಾರುಕಟ್ಟೆಯೇ ಕುಸಿದಿರುವ ಹಿನ್ನೆಲೆಯಲ್ಲಿ, ಕೋಲಾ, ಪೆಪ್ಸಿಗಳಿಗೆ ಸವಾಲೊಡ್ಡುವ ಈ ಬೊಂಡ ಮೇಳ ಶನಿವಾರ ಇಲ್ಲಿ ಆರಂಭವಾಯಿತು. ಬಂಟ್ವಾಳ ತಾಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಈ ವಿನೂತನ ಮೇಳದಲ್ಲಿ 20ಕ್ಕೂ ಹೆಚ್ಚು ಪೆಂಡಾಲ್‌ಗಳಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಎಳನೀರುಗಳ ಮಾರಾಟ ಆಗಿದ್ದು ಮತ್ತೊಂದು ದಾಖಲೆ.
ತೆಂಗಿನ ದರ ಕುಸಿದು ಕಂಗಾಲಾಗಿರುವ ರೈತರ ಪರವಾಗಿ ಅಖಿಲ ಭಾರತ ತೆಂಗು ಬೆಳೆಗಾರರ ಸಂಘ ಈ ಬೊಂಡ ಮೇಳ ಏರ್ಪಡಿಸಿತ್ತು. ಅಂದ ಹಾಗೆ ದಕ್ಷಿಣ ಕನ್ನಡದ ಮಂದಿ ಎಳನೀರಿಗೆ ಬೊಂಡ ಎಂದೇ ಕರೆಯುವುದು. ತೆಂಗು ಬೆಳೆಗಾರರು ಟ್ಯಾಕ್ಟರ್, ಲಾರಿಗಳಲ್ಲಿ ಹೊತ್ತು ತಂದ ಎಳನೀರನ್ನು ಹೆದ್ದಾರಿ 48ರಲ್ಲಿ ರಾಶಿ ಹಾಕಲಾಯಿತು. ಆನಂತರ ಎಳನೀರನ್ನು ಕೌಂಟರ್‌ಗಳಿಗೆ ತಂದು ಕೇವಲ 5 ರುಪಾಯಿಗೆ ಮಾರಾಟ ಮಾಡಲಾಯಿತು.
ಇದಕ್ಕೂ ಮುನ್ನ ಮೇಳವನ್ನು ಪೇಜಾವರ ಮಠದ ಕಿರಿಯ ಸ್ವಾಮೀಜಿಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕಲ್ಪವೃಕ್ಷದಿಂದ ದೊರಕುವ ಅಮೃತ ಸಮಾನವಾದ ಎಳನೀರನ್ನು ಕುಡಿಯಲು ಯುವಜನರಿಗೆ ಅವರು ಕರೆ ನೀಡಿದರು. ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಬಾಟಲಿ ಪಾನೀಯಗಳನ್ನು ತ್ಯಜಿಸುವಂತೆ ಅವರು ಮನವಿ ಮಾಡಿದರು.
ಸಂತೆಯಲ್ಲೂ ಬೊಂಡ ಮೇಳ : ಪುತ್ತೂರು ಶಾಸಕ ಡಿ.ವಿ. ಸದಾನಂದ ಗೌಡ ಅವರು ಬೊಂಡ ಕೆತ್ತುವ ಮೂಲಕ ಮಾರಟಕ್ಕೆ ನಾಂದಿ ಹಾಡಿದರು. ಪ್ರಪ್ರಥಮ ಬಾರಿಗೆ ನಡೆದ ಮೇಳಕ್ಕೆ ಅಭೂತಪೂರ್ವ ಮನ್ನಣೆ ದೊರಕಿದ್ದು, ವಾರದ ಸಂತೆಯ ದಿನವೂ ಬೊಂಡ ಮೇಳ ನಡೆಸಲು ಸಂಘ ತೀರ್ಮಾನಿಸಿದೆ ಎಂದು ಜಗಜ್ಜೀವನದಾಸ ಶೆಟ್ಟಿ ಹೇಳಿದರು.
ಈ ಬೊಂಡ ಮೇಳದೊಂದಿಗೆ ಹೊಸ ಕ್ರಾಂತಿ ಆರಂಭವಾಗಿದೆ. ಈ ಮೇಳ ಬಾಟಲಿ ಪಾನೀಯಗಳ ಜಾಹೀರಾತಿಗೆ ಸಮರ್ಥವಾಗಿ ಸವಾಲೊಡ್ಡಿದೆ ಎಂದು ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಶ ತೊಳ್ಪಾಡಿ ಅಭಿಪ್ರಾಯಪಟ್ಟರು. ಬೆಳೆಗಾರರೇ ನೇರವಾಗಿ ಮಾರುಕಟ್ಟೆಗೆ ಬಂದು ತಮ್ಮ ಎಳನೀರನ್ನು 5 ರುಪಾಯಿಗೆ ಮಾರುವ ಮೂಲಕ ಹೊಸ ದಾರಿ ಕಂಡುಕೊಂಡಿದ್ದಾರೆ ಎಂದರು.
ಮೇಳದಲ್ಲಿ ಬಾಲಕೃಷ್ಣ ಭಟ್, ಡಾ. ವಿ.ಎಸ್. ಆಚಾರ್ಯ, ರಾಜೇಂದ್ರ ಕುಮಾರ್, ಸವಣೂರು ಸೀತಾರಾಮ ರೈ, ರುಕ್ಮಯ್ಯ ಪೂಜಾರಿ, ಡಾ. ಪ್ರಭಾಕರ ಭಟ್, ಕ್ಯಾಂಪ್ಕೋ ಅಧ್ಯಕ್ಷ ರಂಗಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications