Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೆ ಜೀವನ ಅನ್ನುವ ಮಾತು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ . ನೆಮ್ಮದಿಯ ನಾಳೆಗಾಗಿ ನೀವು ಆಕಾಶಕ್ಕೆ ಕೈ ಚಾಚಬೇಕಾದ ಅಗತ್ಯವೇನೂ ಇಲ್ಲ .

ವೃಷಭ : ಖುಷಿಯ ಲಹರಿ ಮುಂದುವರಿಯಲಿದೆ. ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಅನ್ನುವಂತೆ ನೀವು ಜೋಡಿಯಾಗುವ ಕಾಲದ ಶುಭ ಸೂಚನೆ ಇಂದು ಕಾಣುತ್ತೀರಿ.

ಮಿಥುನ : ನೀನೆ ನನ್ನ ಜೀವ ಎಂದು ನೀವು ನಂಬಿರುವುದು ನಿಮ್ಮ ಪ್ರೀತಿಯ ನಿರ್ಮಲತೆಯನ್ನು ಸೂಚಿಸುತ್ತದೆ. ಆದರೆ, ಅವರೂ ನಿಮ್ಮಂತೆ ಏನಲ್ಲ . ಕೆಂಪು ಗುಲಾಬಿಗೆ ಕೈ ಒಡ್ಡುವ ಮುನ್ನ ಯೋಚಿಸಿ.

ಕಟಕ : ಆರೋಗ್ಯ ಮತ್ತೆ ಕೈ ಕೊಡುತ್ತಿದೆ. ದೇಹಸ್ಥಿತಿಗೂ ಗ್ರಹಗತಿಗೂ ಗಂಟು ಹಾಕುವುದು ಬೇಡ. ದೇಹವೇ ದೇಗುಲ ಎನ್ನುವುದನ್ನು ಇನ್ನಾದರೂ ಅರ್ಥ ಮಾಡಿಕೊಂಡಲ್ಲಿ ಆಸ್ಪತ್ರೆಯಿಂದ ದೂರವಿರುತ್ತೀರಿ.

ಸಿಂಹ : ಸಂಜೆ ಷಾಪಿಂಗ್‌ ಹವೆ ನಿಮ್ಮೀ ದಿನದಲ್ಲಿದೆ. ದಣಿದ ಮನಸ್ಸನ್ನು ಹಗುರಾಗಿಸಿಕೊಳ್ಳಲು ಸದ್ಯಕ್ಕೆ ಇದಕ್ಕಿಂಥಾ ಉತ್ತಮ ಅವಕಾಶ ನಿಮಗೆ ಸಿಕ್ಕುವುದು ಕಷ್ಟ.

ಕನ್ಯಾ : ಸರಸ್ವತಿಯಾಗುವ ಸಮಯ ಸನ್ನಿಹಿತವಾಗಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವವರು ನೀವಲ್ಲವಾದ್ದರಿಂದ ಸುಮ್ಮನೆ ಉದ್ವೇಗ ಬೇಡ. ಈ ದಿನ ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ತುಲಾ : ಮಾತು ಬಂಗಾರ ಜಾತಿಯವರು ನೀವು. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳದಿರುವುದಕ್ಕೆ ಇದೂ ಪ್ರಮುಖ ಕಾರಣವಿದ್ದೀತು. ಈ ದಿನ ನಿಮ್ಮ ಮನಸ್ಸನ್ನು ಅವರಲ್ಲಿ ಹಂಚಿಕೊಳ್ಳಬಾರದೇಕೆ.

ವೃಶ್ಚಿಕ : ಮನೆ ಮಂದಿಯನ್ನು ನೆನಪಿಸಿಕೊಳ್ಳುವ ಮುಹೂರ್ತ ಕೂಡಿ ಬಂದಿದೆ. ನೀವು ಬಿಜಿಯಾಗಿದ್ದೀರಿ ಅನ್ನುವುದು ಪೂರ್ಣಸತ್ಯವೇನಲ್ಲ , ಅಲ್ಲವೇ?

ಧನಸ್ಸು : ನೀವು ಹೆತ್ತವರನ್ನು ದೂರುವಂತೆ ನಿಮ್ಮ ಮಕ್ಕಳು ನಿಮ್ಮನ್ನು ದೂರಬಾರದಲ್ಲವೆ ! ಉಳಿತಾಯದ ಯೋಜನೆಗಳನ್ನು ಪಕ್ಕಕ್ಕಿರಿಸಬೇಡಿ. ಈ ಸಂಬಂಧ ಮನದನ್ನೆ ನೀಡುವ ಸಲಹೆಗಳನ್ನು ಮಾನ್ಯ ಮಾಡುವುದು ಒಳ್ಳೆಯದು.

ಮಕರ : ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಹೊತ್ತು ಬಂದಿದೆ. ಇಂದಿನ ತಿರುಗಾಟದಲ್ಲಿ ನಿಮ್ಮ ಸ್ವ ಹಿತಾಸಕ್ತಿಯೂ ಅಡಗಿರುವುದರಿಂದ ಬೇಸರ ಬೇಡ.

ಕುಂಭ : ಪ್ರಾರ್ಥನೆ, ದೇವರು ಎಂದು ಏಸು ಕಾಲವಾಯಿತು. ಈ ದಿನ ಒಮ್ಮೆಗೇ ಮನಸ್ಸು ಅಧ್ಯಾತ್ಮದತ್ತ ಹೊರಳಿದರೆ ಅದಕ್ಕೆ ನಿಮ್ಮ ಕೆಲಸದ ಒತ್ತಡವೇ ಕಾರಣ.

ಮೀನ : ಹೆಂಡತಿಯಾಂದಿಗೆ ಮನಸ್ತಾಪ. ಮನೆಯಲ್ಲಿ ನೆಮ್ಮದಿ ಕಳವು. ನಿಮ್ಮ ದುಡುಕಿಗೆ ನಿಮ್ಮನ್ನೇ ದೂರಿಕೊಳ್ಳಿ. ಮನಸ್ತಾಪಗಳೇನೇ ಇದ್ದರೂ ನಿಮ್ಮ ಒಳ್ಳೆಯತನ ಅವರಿಗೆ ಅರ್ಥವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+