Get Updates
Get notified of breaking news, exclusive insights, and must-see stories!

ಭಾರತದ ವಿರುದ್ಧ ಷಾರ್ಜಾದಲ್ಲಿ ಆಡಲು ಪಾಕಿಸ್ತಾನ ಸಿದ್ಧ : ಪಿಸಿಬಿ

ಇಸ್ಲಮಾಬಾದ್‌ : ಬರುವ ಏಪ್ರಿಲ್‌ನಲ್ಲಿ ನಡೆಯುವ ಷಾರ್ಜಾ ತ್ರಿಕೋನ ಸರಣಿಯಲ್ಲಿ ಭಾರತದ ವಿರುದ್ಧ ಆಡಲು ಸಿದ್ದವಿಲ್ಲ ಎನ್ನುವ ತನ್ನ ನಿಲುವಿನಿಂದ ಹಿಂದೆ ಸರಿದಿರುವ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (ಪಿಸಿಬಿ), ತಮ್ಮ ತಂಡ ಭಾರತದ ವಿರುದ್ಧ ಷಾರ್ಜಾದಲ್ಲಿ ಆಡಲು ಸಿದ್ಧವಿದೆ ಎಂದು ಶನಿವಾರ ಹೇಳಿದೆ.

ಭಾರತ ತಂಡದ ಪಾಕಿಸ್ತಾನ ಪ್ರವಾಸವನ್ನು ಭಾರತ ಸರ್ಕಾರ ರದ್ದು ಪಡಿಸಿದ್ದರಿಂದ ಷಾರ್ಜಾದಲ್ಲಿ ಭಾರತದ ವಿರುದ್ಧ ಆಡಲು ಈ ಮೊದಲು ಪಿಸಿಬಿ ನಿರಾಕರಿಸಿತ್ತು . ಪಾಕಿಸ್ತಾನ ಪ್ರವಾಸಕ್ಕೆ ಭಾರತ ಹಿಂಜರಿದಿರುವುದರಿಂದ ಅದರ ವಿರುದ್ಧ ತಟಸ್ಥ ರಾಷ್ಟ್ರಗಳಲ್ಲಿ ಸೇರಿದಂತೆ ಎಲ್ಲಿಯೂ ಆಡ ಬಯಸುವುದಿಲ್ಲ ಹಾಗೂ ಭಾರತದೊಂದಿಗೆ ಎಲ್ಲಾ ಕ್ರಿಕೆಟ್‌ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಪಿಸಿಬಿ ಬೆದರಿಕೆ ಹಾಕಿತ್ತು.

ಕ್ರೀಡೆಯಾಂದಿಗೆ ರಾಜಕೀಯ ಬೆರೆಸಬಾರದೆನ್ನುವ ತನ್ನ ನೀತಿಗೆ ಪಾಕಿಸ್ತಾನ ಅಂಟಿಕೊಂಡಿದೆ. ಅದರಿಂದಾಗಿಯೇ ನಾವು ಷಾರ್ಜಾದಲ್ಲಿ ಭಾರತದೊಂದಿಗೆ ಆಡುವ ಒಪ್ಪಂದಕ್ಕೆ ಬದ್ಧರಾಗಿದ್ದೇವೆ ಎಂದು ಪಿಸಿಬಿಯ ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ. ಪಾಕ್‌ನ ಮಾಜಿ ಕ್ರಿಕೆಟ್‌ ತಾರೆಗಳಾದ ಸರ್ಫಾಜ್‌ ನವಾಜ್‌ ಮತ್ತು ಮಜೀದ್‌ ಖಾನ್‌ರಿಗೆ ಸಹಾಯಾರ್ಥ ನಿಧಿ ಒದಗಿಸುವ ಟೂರ್ನಿಯು ಏಪ್ರಿಲ್‌ 4 ರಿಂದ 14 ರವರೆಗೆ ನಡೆಯಲಿದೆ.

ನಾವು ಭಾರತವನ್ನು ಎಲ್ಲಿ ಬೇಕಾದರೂ ಎದುರಿಸಲು ಸಿದ್ಧವಿದ್ದೇವೆ ಎಂದು ಸ್ಪಷ್ಟಪಡಿಸಿದ ಪಿಸಿಬಿಯ ವಕ್ತಾರರು, ಷಾರ್ಜಾದಲ್ಲಿ ಜರುಗಿವೆ ಎನ್ನಲಾದ ಕ್ರಿಕೆಟ್‌ ಮ್ಯಾಚ್‌ಫಿಕ್ಸಿಂಗ್‌ ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ನೇಮಿಸಿರುವ ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಯ ಕ್ರಮವನ್ನು ಸ್ವಾಗತಿಸಿದರು. ಈ ಆಯೋಗವು ಷಾರ್ಜಾದ ಕಳಂಕವನ್ನು ತೊಡೆಯುತ್ತದೆ ಎಂದು ಎಮಿರೇಟ್ಸ್‌ ಮಂಡಳಿಯ ಅಧ್ಯಕ್ಷ ಅಬ್ದುರ್‌ ರೆಹಮಾನ್‌ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+