ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರಿಗೆ ಚಳಿಯ ಅನುಭವ

By Staff
|
Google Oneindia Kannada News

ಬೆಂಗಳೂರು : ಗುಲ್ಬರ್ಗಾದ ಹವೆಯೇ ಹೀಗೆ. ಚಳಿಗಾಲದಲ್ಲಿ ಬೆಳಗ್ಗೆ ಸುಡುತ್ತದೆ ರಾತ್ರಿ ಕೊರೆಯುತ್ತದೆ. ಆಶ್ಚರ್ಯವಾಯಿತೆ. ಕಳೆದ ಕೆಲವು ದಿನದಿಂದ ಗುಲ್ಬರ್ಗಾದಲ್ಲಿ ಗರಿಷ್ಠ ತಾಪಮಾನ 32-33ರ ಆಸುಪಾಸಿನಲ್ಲಿದ್ದರೆ, ಕನಿಷ್ಠ ತಾಪಮಾನ 8.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.

ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಆಗಿರುವುದೂ ಇದೆ. ಗರಿಷ್ಠ ತಾಪಮಾನ 32 ಡಿಗ್ರಿ ಇದ್ದು, ಕನಿಷ್ಠ 9.5ಕ್ಕೆ ಇಳಿದಿದೆ. ರಾಜ್ಯದ ಅತಿ ಕನಿಷ್ಠ ಉಷ್ಣಾಂಶವೂ ಇದೇ ಆಗಿದೆ. ಇನ್ನು 2-3 ತಿಂಗಳಲ್ಲೇ ಇಲ್ಲಿ ರಣ ಬಿಸಿಲು ಮೂಡುತ್ತದೆ. ತಾಪಮಾನ 40 - 45 ಡಿಗ್ರಿಯನ್ನೂ ದಾಟುತ್ತದೆ. ಜನ ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಂತೆಯೂ ಮಾಡುತ್ತದೆ.

ಅಂದಹಾಗೆ ರಾಜ್ಯದಲ್ಲಿ ಮತ್ತೆ ಒಣಹವೆ ಮೂಡಿತ್ತು. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಕುಸಿದಿದ್ದರೆ, ದಕ್ಷಿಣ ಒಳನಾಡಿನಲ್ಲಿ ತುಸು ಏರಿತ್ತು. ಕರಾವಳಿಯಲ್ಲಿ ಉಷ್ಣಾಂಶ ಕೊಂಚ ಬದಲಾಗಿತ್ತು. ಮುನ್ಸೂಚನೆಯ ರೀತ್ಯ ಮುಂದಿನ 48 ಗಂಟೆಗಳ ಅವಧಿಯಲ್ಲಿ ಮತ್ತೆ ಒಣಹವೆ ಮುಂದುವರಿಯಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ನಿರ್ಮಲ ಆಕಾಶ ಇದ್ದು, ಚುಕ್ಕಿಗಳನ್ನು ಸೊಗಸಾಗಿ ಎಣಿಸಬಹುದು. ಕನಿಷ್ಠ ತಾಪಮಾನ 14 ಡಿಗ್ರಿಗೆ ಇಳಿಯುವ ಸಾಧ್ಯತೆ ಇರುವುದರಿಂದ ಬೆಂಗಳೂರಿಗರಿಗೆ ಚಳಿಯ ಅನುಭವ ಆಗೇ ತೀರುತ್ತದೆ. ಮುಂಜಾನೆಯಲಿ ಮುತ್ತಿನಂತೆ ಮಂಜೂ ಸುರಿಯುತ್ತಿದೆ. ಮೈ ಕೈ ಒಡೆಯುತ್ತಿದೆ. ತುಟಿಗಳೂ ಬಿರಿಯುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X