Get Updates
Get notified of breaking news, exclusive insights, and must-see stories!

ರಾಮ ಸಮುದ್ರದಲ್ಲೊಂದು ಕೈಗಾರಿಕಾ ಷೆಡ್ಡು,ಅಲ್ಲಿ ನಡೆಯುತ್ತಿದೆ ಶಾಲೆ

ರಾಮ ಸಮುದ್ರ : ಏಕೋಪಾಧ್ಯಾಯ ಶಾಲೆ, ಮರದ ಕೆಳಗಿನ ಶಾಲೆಗಳನ್ನು ನೀವು ಕಂಡಿದ್ದೀರಿ ಅಥವಾ ಕೇಳಿದ್ದೀರಿ. ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ರಾಮ ಸಮುದ್ರದ ಶಾಲೆಯದ್ದು ಬೇರೆಯೇ ವಿಶೇಷ. ಇಲ್ಲಿ ಶಾಲೆ ನಡೆಯುತ್ತಿರುವುದು ಕೈಗಾರಿಕಾ ಷೆಡ್ಡಿನಲ್ಲಿ . ಅಂದಹಾಗೆ ಅದು ಸರ್ಕಾರಿ ಪ್ರೌಢಶಾಲೆ.

ರಾಮ ಸಮುದ್ರ ಶಾಲೆಯದ್ದು ಕಡಲೆ ಹಾಗೂ ಹಲ್ಲಿನ ಕತೆ. ತಿನ್ನಲು ಕಡಲೆಯಿದ್ದರೂ ಜಗಿಯಲು ಹಲ್ಲೇ ಇಲ್ಲದ ಹಾಗೂ ಕೃತಕ ಹಲ್ಲಿಗಾಗಿ ದಂತ ವೈದ್ಯನ ಬಳಿ ಹೋಗಲಾಗದ ವಿಪರ್ಯಾಸ ಇಲ್ಲಿಯದು. ಶಾಲೆಯ ಸ್ವಂತ ಕಟ್ಟಡಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿ ತುಂಬಾ ದಿನಗಳೇ ಆಗಿವೆ. ಆದರೆ, ಕಟ್ಟಡ ಎದ್ದು ನಿಲ್ಲಲು ನಿವೇಶನವೇ ಇಲ್ಲ . ನಿವೇಶನ ಸಿಗುವವರೆಗೆ ಕಟ್ಟಡವಿಲ್ಲ . ಯಾರಾದರೂ ಸ್ಥಳೀಕರು ಉದಾರ ಮನಸ್ಸಿನಿಂದ ಸ್ಥಳದಾನ ಮಾಡಿದರೆ, ಸ್ವಂತ ಕಟ್ಟಡದ ಶಾಲೆಯ ಕನಸು ನನಸಾದೀತು ಎನ್ನುವ ನಿರೀಕ್ಷೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಿದ್ದಾರೆ.

ಸ್ವಂತ ಕಟ್ಟಡ ಇಲ್ಲ . ಹಾಗೆಂದು ಶಾಲೆಯನ್ನು ನಡೆಸದಿರಲಾದೀತೆ? ಮರದ ಕೆಳಗೆ ಗುರುಕುಲವ ನಡೆಸೋಣವೆಂದರೆ, ಶಾಲೆಯಲ್ಲಿ 216 ವಿದ್ಯಾರ್ಥಿಗಳಿದ್ದಾರೆ. ಅಷ್ಟೂ ಜನಕ್ಕೆ ನೆರಳು ನೀಡುವ ದೊಡ್ಡ ಮರ ಎಲ್ಲಿ ಸಿಗಬೇಕು. ಮರ ಹುಡುಕುತ್ತಾ ಬೆಂಗಳೂರಿನ ರಾಮೋಹಳ್ಳಿಗೆ ಬರಲು ಸಾಧ್ಯವಿಲ್ಲ . ಆದಕ್ಕೆಂದೇ ರಾಮ ಸಮುದ್ರದಲ್ಲಿಯೇ ಸುಲಭವಾಗಿ ಸಿಕ್ಕಿದ ಕೈಗಾರಿಕಾ ಷೆಡ್ಡಿನಲ್ಲಿ ಶಾಲೆಯನ್ನು ನಡೆಸಲಾಗುತ್ತಿದೆ. ಅಲ್ಲಿ ಓದುತ್ತಿರುವ ಕೆಲ ತುಂಟರು, ನಮ್ಮ ಮಕ್ಕಳು ಓದುವ ಕಾಲಕ್ಕಾದರೂ ಶಾಲೆಗೆ ಸ್ವಂತ ಕಟ್ಟಡ ಸಿಕ್ಕೇ ಸಿಗುತ್ತದೆ ಎನ್ನುತ್ತಿದ್ದಾರೆ. ಅವರ ನಿರೀಕ್ಷೆ ನಿಜವಾಗಲಿ ಎಂದು ಹಾರೈಸೋಣವಾ!

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+