11 ಬೈಕ್‌ನಲ್ಲಿ 181 ಎಎಸ್‌ಸಿ ಸೈನಿಕರು ಮೆರೆದ ವಿಶ್ವ ವಿಕ್ರಮ
ಬೆಂಗಳೂರು : ಇವರು ಬೆಂಗಳೂರಿನ ಸೈನಿಕ ಸೇವಾ ನಿಗಮದ 181 ಶೂರರು. ಈಗ ವಿಶ್ವ ದಾಖಲೆಯ ವೀರರು. ಗುರುವಾರ ಈ ಎಲ್ಲ ಧೈರ್ಯಶಾಲಿ 181 ಜವಾನರು ಕೇವಲ 11 ಬೈಕ್‌ಗಳಲ್ಲಿ ಪಿರಮಿಡ್ ಮಾದರಿಯಲ್ಲಿ 220 ಮೀಟರ್ ಕ್ರಮಿಸಿ ಹೊಸ ವಿಶ್ವ ವಿಕ್ರಮ ಮೆರೆದರು.
ಎಎಸ್‌ಸಿಯ 240ನೇ ವಾರ್ಷಿಕೋತ್ಸವ ಮತ್ತು ಪುನರ್ಮಿಲನದ 7ನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ನಡೆದ ಈ ಪ್ರದರ್ಶನದಲ್ಲಿ ನೂತನ ದಾಖಲೆ ಬರೆದರು. ಹದಿನಾಲ್ಕು ಮೋಟಾರು ಬೈಕ್‌ಗಳಲ್ಲಿ 115 ಮಂದಿ ಪಿರಮಿಡ್ ರಚಿಸಿ 200 ಮೀಟರ್ ದೂರ ಕ್ರಮಿಸಿದ್ದೇ ಈವರೆಗಿನ ಗಿನ್ನಿಸ್ ದಾಖಲೆ ಆಗಿತ್ತು.
ಈ ಸಾಧನೆಯಾಂದಿಗೆ ಎಎಸ್‌ಸಿ ಧೀರರ ಈ ಸಾಹಸ ಪ್ರದರ್ಶನದ ಸಾಧನೆ ಗಿನ್ನಿಸ್ ಪುಸ್ತಕ ಸೇರುವುದು ಖಚಿತವಾಗಿದೆ. ಹಳದಿ, ಹಸಿರು ಹಾಗೂ ಬಿಳಿ ವಸ್ತ್ರ ಧರಿಸಿದ್ದ ಈ 181 ಮಂದಿ ಸಾಹಸಿಗರ ಟೂರ್ನೆಡೋಸ್ ತಂಡ 1ನಿಮಿಷ 17 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿತು.
ಬೈಕ್‌ಗಳೂ ಸೇರಿದಂತೆ 181 ಸಾಹಸಿಗರ ಒಟ್ಟು ತೂಕ 13,139 ಕಿ.ಗ್ರಾಂ. ಇದಕ್ಕೂ ಮುನ್ನ ಒಂದೇ ಬೈಕ್‌ನಲ್ಲಿ 32 ಮಂದಿ 600 ಮೀಟರ್ ಕ್ರಮಸಿ ವೀಕ್ಷಕರನ್ನು ನಿಬ್ಬೆರಗು ಗೊಳಿಸಿದರು. 18 ಬೈಕ್‌ಗಳ ವಿವಿಧ ಆಕೃತಿಗಳ ರಚನೆ, ಸರ್ಕಸ್ ಜೋಕರ್ ಮಾದರಿಯ ವ್ಯಕ್ತಿ ಪೇಪರ್ ಓದುತ್ತಾ ಕೈಬಿಟ್ಟು ಬೈಕ್ ಚಲಿಸಿದ್ದು, ಬೈಕ್‌ನಿಂದ ಇಳಿದು ಅದನ್ನು ಹಿಡಿಯಲು ಮಾಡಿದ ಸಾಹಸವೇ ಮುಂತಾದ ಹಾಸ್ಯದ ಸಿಂಚನ ಪ್ರದರ್ಶನಕ್ಕೆ ಹೊಸ ಮೆರುಗು ನೀಡಿತ್ತು.
ದಾಖಲೆಯ ನಂತರ ಪತ್ರಿಕೆಗಳ ಛಾಯಾ ಗ್ರಾಹಕರ ವಿನಂತಿಯ ಮೇರೆಗೆ ಮತ್ತೊಮ್ಮೆ ಪೋಸ್ ನೀಡಲು ಸಾಹಸಿಗರು ಬೈಕ್ ಏರಿದಾಗ ಬೈಕ್ ಒಂದರ ಟೈರ್ ಒಡೆದು ಸಂಭವಿಸಿದ ಅವಗಢದಲ್ಲಿ ಕೆಲವರು ಗಾಯಗೊಂಡ ದುರ್ಘಟನೆಯೂ ನಡೆಯಿತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications