Get Updates
Get notified of breaking news, exclusive insights, and must-see stories!

ಮಂಗಳೂರಿನಲ್ಲಿ ವಿಮಾನ ಅಪಘಾತ, ಇಬ್ಬರಿಗೆ ಗಾಯ

ಮಂಗಳೂರು : ಮಂಗಳೂರು ಹಾಗೂ ಮುಂಬೈ ನಡುವೆ ಸಂಚರಿಸುವ ಜೆಟ್‌ ಏರ್‌ವೇಸ್‌ನ ಬೋಯಿಂಗ್‌ 737 -400 ವಿಮಾನವು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೀಡಾಯಿತಾದರೂ ಅದರಲ್ಲಿದ್ದ 122 ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಈ ವಿಷಯವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿಶ್ವನಾಥನ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆದರೆ, ಇಬ್ಬರಿಗೆ ಗಾಯಗಳಾಗಿದ್ದು ವಿಮಾನದ ಅಂಡರ್‌ ಕ್ಯಾರೇಜ್‌ಗೆ ಭಾರಿ ಹಾನಿಯುಂಟಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ವಿಮಾನಾಪಘಾತದಿಂದ ರನ್‌ವೇಗೆ ಅಡಚಣೆಯುಂಟಾಗಿದ್ದು, ಇತರ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಮಾನದ ಚಕ್ರದ ಟ್ಯೂಬ್‌ ಪಂಕ್ಚರ್‌ ಆಗಿದ್ದರಿಂದ ವಿಮಾನ ಇಳಿಯುವಾಗ ಈ ಅವಘಡ ಸಂಭವಿಸಿದೆ ಎಂದೂ ತಿಳಿದುಬಂದಿದೆ. ವಿಮಾನಾಪಘಾತಕ್ಕೆ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+