Get Updates
Get notified of breaking news, exclusive insights, and must-see stories!

ಶನಿವಾರ ಗಮಕಿ ರಾಘವೇಂದ್ರ ರಾವ್‌ ಸ್ಮರಣೆ

ಬೆಂಗಳೂರು : ಕನಕ ಪುರಂದರ ಪ್ರಶಸ್ತಿ ಪುರಸ್ಕೃತರಾಗಿದ್ದ ಗಮಕ ಕಲಾ ಭೀಷ್ಮ ದಿವಂಗತ ಗಮಕಿ ರಾಘವೇಂದ್ರರಾವ್‌ ಸಂಸ್ಮರಣೆ ಕಾರ್ಯಕ್ರಮ ಶನಿವಾರ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ.

ರಾಘವೇಂದ್ರ ರಾಯರ ಬದುಕು - ಬರಹ ಕುರಿತು ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌, ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ವಸಂತ ಕುಷ್ಟಗಿ, ಡಾ. ಕೃಷ್ಣ ಕೊಲ್ಹಾರ್‌ ಕುಲಕರ್ಣಿ, ಪ್ರೊ. ಜಿ. ಅಶ್ವತ್ಥನಾರಾಯಣ್‌, ಟಿ.ಎನ್‌. ನಾಗರತ್ನ, ಡಾ. ಪಿ.ವಿ. ನಾರಾಯಣ್‌ ಮೊದಲಾದವರು ಮಾತನಾಡುತ್ತಿದ್ದಾರೆ.

ರಾಘವೇಂದ್ರ ರಾವ್‌ ವಿರಚಿತ ಕೃತಿಗಳ ಕಾವ್ಯಗಳ ವಿಶ್ಲೇಷಣೆಯೂ ನಡೆಯಲಿದೆ. ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಶ್ಯಾಮಲಾ ಜಿ. ಭಾವೆ, ರತ್ನಮಾಲಾ ಪ್ರಕಾಶ್‌, ಮಾಲತಿ ಶರ್ಮಾ ಮೊದಲಾದವರು ರಾಯರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅ.ರಾ. ಚಂದ್ರಹಾಸ ಗುಪ್ತಾ ಪಾಲ್ಗೊಳ್ಳುತ್ತಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ನಾರಾಯಣ್‌ ವಹಿಸಲಿದ್ದು, ಗಮಕ ಅಂದು - ಇಂದು - ಮುಂದು ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ.

ರಾಘವೇಂದ್ರರಾಯರ ಕೀರ್ತನೆಗಳನ್ನು ಆರ್‌.ಕೆ. ಶ್ರೀಕಂಠನ್‌ ಹಾಡುತ್ತಿದ್ದು, ಸುಮನ್‌ ನಾಗೇಶ್‌ ಹಾಗೂ ತಂಡದವರಿಂದ ಗೀತಾಚಾರ್ಯ ನಮನ ಎಂಬ ನೃತ್ಯ ರೂಪಕ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+