ಭಾರತ ಪ್ರವಾಸಕ್ಕೆ ಒಲ್ಲೆ ಎನ್ನುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗರು
ಲಂಡನ್ : ಈ ವರ್ಷದ ಕ್ರಿಸ್‌ಮಸ್ಸನ್ನು ತಮ್ಮೂರಲ್ಲಿ ಆಚರಿಸುವುದರಿಂದ ವಂಚಿತರಾಗಿರುವ ಇಂಗ್ಲೆಂಡಿನ ಕ್ರಿಕೆಟಿಗರು ಮುಂದಿನ ವರ್ಷದ ಚಳಿಗಾಲದಲ್ಲಿ ಭಾರತ ಪ್ರವಾಸ ಕೈಗೊಳ್ಳಲು ಸಿದ್ಧರಿಲ್ಲ. ಈಗ ಪಾಕಿಸ್ತಾನ ಟೂರ್‌ನಲ್ಲಿರುವ ಇಂಗ್ಲೆಂಡ್‌ನ ಬಹುತೇಕ ಆಟಗಾರರಿಗೆ ಮುಂದಿನ ವರ್ಷವೂ ಕ್ರಿಸ್‌ಮಸ್ಸನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲವಂತೆ.
ಈಗ ರೂಪಿಸಲಾಗಿರುವ ಕಾರ್ಯಕ್ರಮದಂತೆ ಮುಂದಿನ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದೆ. ಆದರೆ ಇಂಗ್ಲೆಂಡ್ ಮತ್ತು ವೇಲ್ಸ್ ಮಂಡಳಿ (ಇಸಿಬಿ) ಗೆ ಅನೇಕ ಆಟಗಾರರು ಈ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಒತ್ತಡ ತರುತ್ತಿದ್ದಾರೆ. ನಿಗದಿಯಾಗಿರುವಂತೆ ಭಾರತದ ವಿರುದ್ಧ ಇಂಗ್ಲೆಂಡ್ 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ನಂತರ ನ್ಯೂಜಿಲೆಂಡ್ ಪ್ರವಾಸ.
ಭಾರತ ಪ್ರವಾಸ ಕೈಗೊಳ್ಳಲು ತಂಡದ ನಾಯಕ ಅಲೆಕ್ ಸ್ಟುವರ್ಟ್, ಗ್ರಹಾಂ ಥೋರ್ಪ್, ಆ್ಯಂಡ್ರೂ ಕ್ಯಾಡಿಕ್ ಹಾಗೂ ಡೆರಿನ್ ಗಾಫ್ ಸುತಾರಾಂ ಒಪ್ಪುತ್ತಿಲ್ಲ. ಭಾರತಕ್ಕೆ ಹೋಗುವುದೊಂದು ರಿಸ್ಕು. ಜೊತೆಗೇ ಸಿಗೋ ದುಡ್ಡೂ ಕಡಿಮೆ ಎನ್ನುವುದು ಅವರು ಕೊಡುವ ಕಾರಣ. ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಯಾಗುವುದಾಗಿ ಮೈಕೆಲ್ ಆರ್ಥಟನ್ ಹೇಳಿ ಬಿಟ್ಟಿದ್ದಾರೆ. ಬಾಂಗ್ಲಾ ಪ್ರವಾಸವನ್ನು ರದ್ದು ಪಡಿಸುವುದರಲ್ಲಿ ಸ್ಟುವರ್ಟ್ ಯಶಸ್ವಿಯಾಗಿದ್ದರು.
ಕಳೆದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಆಡಿದ ಮೂರೂ ಟೆಸ್ಟ್‌ಗಳನ್ನೂ ಸೋತಿತ್ತು. ಮೊದಲೇ ನಯೋ ಎನ್ನುತ್ತಿರುವ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಕೇಳಿ ಬರುತ್ತಿರುವ ಆಟಗಾರರ ಇಂಥ ನಿರ್ಣಯಗಳು ಮಂಡಳಿಯ ಅಧಿಕಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿವೆ. ಒತ್ತಡ ಕಡಿಮೆ ಮಾಡಲು ಒಂದು ದಿನದ ಪಂದ್ಯಗಳಿಗೇ ಒಂದು, ಟೆಸ್ಟ್‌ಗಳಿಗಾಗಿ ಮತ್ತೊಂದು ಪ್ರತ್ಯೇಕ ತಂಡಗಳನ್ನು ರಚಿಸುವ ಬಗೆಗೆ ಮಂಡಳಿ ಯೋಚಿಸುತ್ತಿದೆ.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications