Get Updates
Get notified of breaking news, exclusive insights, and must-see stories!

ಕಪ್ಪು ದಿನ/ಶೌರ್ಯ ದಿನ ಆಚರಣೆ:ಅಯೋಧ್ಯೆ ಸೇರಿದಂತೆ ದೇಶ ಶಾಂತ

ನವದೆಹಲಿ : ರಾಜಧಾನಿಯ ಬಹುತೇಕ ಹಿಂದೂ ಸಂಘಟನೆಗಳಿಗೆ ಬುಧವಾರ ಶೌರ್ಯ ದಿವಸವಾದರೆ, ಜಾತ್ಯತೀತ ಕೋಮುಗಳಿಗೆ ಕಪ್ಪು ದಿನ. ಇದು ಬಾಬ್ರಿ ಮಸೀದಿ ಕೆಡವಿದ 8ನೇ ವಾರ್ಷಿಕ ದಿನಾಚರಣೆ.

ಸಂಸತ್ತಿನ ಜಂತರ್‌ ಮಂತರ್‌ ಬಳಿ ಕೆಲ ಕಾಂಗ್ರೆಸಿಗರ ಧರಣಿ. ಅಯೋಧ್ಯ ಪ್ರಕರಣದ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಗೃಹ ಸಚಿವ ಎಲ್‌.ಕೆ.ಅಡ್ವಾಣಿ, ಮಾನವ ಸಂಪನ್ಮೂಲ ಖಾತೆ ಸಚಿವ ಎಂ.ಎಂ.ಜೋಷಿ ಹಾಗೂ ಕ್ರೀಡಾ ಸಚಿವೆ ಉಮಾಭಾರತಿ ರಾಜೀನಾಮೆಗೆ ಕಟ್ಟೊತ್ತಾಯ. ಪೊಲೀಸರಿಂದ ಕೆಲವರ ಬಂಧನ. ರಾಷ್ಟ್ರೀಯವಾದಿಗಳ ಕಾಂಗ್ರೆಸ್‌ ಪಕ್ಷ (ಎನ್‌ಸಿಎ) ದ ಮುಖ್ಯ ಕಾಯದರ್ಶಿ ತಾರಿಕ್‌ ಅನ್ವರ್‌ ನೇತೃತ್ವದ ತಂಡ ಮೆರವಣಿಗೆ ನಡೆಸಿದ್ದೇ ಅಲ್ಲದೆ ಆರೋಪ ಪಟ್ಟಿಯಲ್ಲಿರುವ ಸಂಸದರನ್ನು ಬಂಧಿಸುವಂತೆಯೂ ಆಗ್ರಹಿಸಿತು.

ಅಯೋಧ್ಯ ಪ್ರಕರಣದ ವಿಷಯವಾಗಿ ಸತತ 2ನೇ ದಿನವೂ ಸಂಸತ್ತಿನ ಉಭಯ ಸದನಗಳ ಕಾರ್ಯ ಕಲಾಪಗಳು ರದ್ದಾದವು. ನಂತರ ಸುದ್ದಿಗಾರರೊಡನೆ ಮಾತನಾಡಿದ ವಾಜಪೇಯಿ ಯಾವುದೇ ಕಾರಣಕ್ಕೂ ಮಂತ್ರಿಗಳು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಂತರ್‌ ಮಂತರ್‌ ಸುತ್ತ ಬಿಗಿ ಪೊಲೀಸ್‌ ಪಹರೆಯಿತ್ತು.

ಕರ್ನಾಟಕದ ಅವಳಿ ನಗರಗಳು ಶಾಂತ : ಕಪ್ಪು ದಿನದ ಪ್ರಯುಕ್ತ ರಾಜ್ಯದ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಮುಸ್ಲಿಂ ಬಾಂಧವರ ಎಲ್ಲಾ ಅಂಗಡಿ ಮುಂಗಟ್ಟುಗಳೂ ಸಂಪೂರ್ಣ ಮುಚ್ಚಿದ್ದವು. ಬಸ್‌ ಸಂಚಾರ, ಉಳಿದ ವ್ಯಾಪಾರ ವಹಿವಾಟು ಮಾಮೂಲಿನಂತಿತ್ತು. ಮುಂಜಾಗ್ರತಾ ಕ್ರಮವಾಗಿ ಅವಳಿ ನಗರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಅಯೋಧ್ಯ, ಫೈಜಾಬಾದ್‌ ವರದಿ : ಪರಿಸ್ಥಿತಿ ಪ್ರತಿನಿತ್ಯಕ್ಕಿಂತ ತೀರಾ ಭಿನ್ನವಾಗೇನೂ ಇರಲಿಲ್ಲ. ಮುಸ್ಲಿಂ ಸಮುದಾಯದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನಜೀವನ ಎಂದಿನಂತೆ ಸಾಮಾನ್ಯವಾಗಿತ್ತು.

ಹೈದರಾಬಾದ್‌ ವರದಿ : ನಗರದ ಕೆಲವೆಡೆ ಕಪ್ಪು ಧ್ವಜಗಳನ್ನು ಹಾರಿಸಲಾಯಿತು. ಅಂಬರ್‌ಪೇಟೆ ಪ್ರದೇಶದಲ್ಲಿ ಸಣ್ಣ ಪುಟ್ಟ ಕಲ್ಲು ತೂರಾಟ ಘಟನೆಗಳು ನಡೆದದ್ದು ಬಿಟ್ಟರೆ ಉಳಿದಂತೆ ಜನಜೀವನ ಮಾಮೂಲಿನಂತಿತ್ತು . ನಗರ ಬಸ್‌ಗಳ ಸಂಚಾರ ಯಥಾಸ್ಥಿತಿಯಲ್ಲೇ ನಡೆಯಿತು. 6 ಸಾವಿರಕ್ಕೂ ಹೆಚ್ಚು ಪೊಲೀಸರು ವಿವಿಧೆಡೆಗಳಲ್ಲಿ ನಿಗಾ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಿರುವನಂತಪುರ ವರದಿ : ಅಬ್ದುಲ್‌ ನಜೀರ್‌ ಮುದಾನಿ ನೇತೃತ್ವದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಬುಧವಾರ ಕೇರಳ ರಾಜ್ಯಾದ್ಯಂತ ಹರತಾಳಕ್ಕೆ ಕರೆ ಕೊಟ್ಟಿದ್ದರು. ಇದಕ್ಕೆ ಸಾಮಾನ್ಯ ಎನ್ನುವಂಥ ಪ್ರತಿಕ್ರಿಯೆ ಕಂಡು ಬಂತು. ರಾಜ್ಯದ ಕೊಲ್ಲಂ ಹಾಗೂ ಉತ್ತರ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ಕಂಡು ಬಂತು.

ಕೆಲವೆಡೆ ಕಲ್ಲು ತೂರಾಟದ ಪ್ರಕರಣಗಳು ವರದಿಯಾಗಿವೆ. ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದ ಕಾವಲುಗಾರನ ಮೇಲೆ ಹಲ್ಲೆ ನಡೆದಿದೆ. ಉಳಿದಂತೆ ಜನಜೀವನ ಎಂದಿನಂತಿತ್ತು. ಅತ್ಯಾವಶ್ಯಕ ವಸ್ತುಗಳ ಪೂರೈಕೆಗೆ ಯಾವುದೇ ಅಡ್ಡಿಯಾಗಿಲ್ಲ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+