Get Updates
Get notified of breaking news, exclusive insights, and must-see stories!

ರಾಜ್ಯಕ್ಕೂ ತಟ್ಟಿದ ಮುಷ್ಕರದ ಬಿಸಿ, ಅಂಚೆ ಸೇವೆ ಸಂಪೂರ್ಣ ಸ್ಥಗಿತ

ಬೆಂಗಳೂರು : ಬೇಡಿಕೆಗಳ ಈಡೇರಿಕೆಗಾಗಿ ಅಂಚೆ ಇಲಾಖೆ ಸಿಬ್ಬಂದಿ ಮಂಗಳವಾರದಿಂದ ಆರಂಭಿಸಿರುವ ಅನಿರ್ದಿಷ್ಟ ಕಾಲದ ಮುಷ್ಕರ ಪರಿಣಾಮವಾಗಿ ದೇಶಾದ್ಯಂತ ಅಂಚೆ ಸೇವೆ ಅಸ್ತವ್ಯಸ್ತಗೊಂಡಿದೆ. ಅಂಚೆ ಪತ್ರಗಳನ್ನು ಒಳಗೊಂಡ ಮೂಟೆಗಳು ಆರ್‌ಎಂಎಸ್‌ ಹಾಗೂ ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಲ್ಲಿ ರಾಶಿರಾಶಿಯಾಗಿ ಬಿದ್ದಿದೆ.

ರಾಜ್ಯಕ್ಕೂ ಮುಷ್ಕರದ ಬಿಸಿ ತಟ್ಟಿದ್ದು, ರಾಜ್ಯದಲ್ಲೂ ಸಂಪೂರ್ಣವಾಗಿ ಅಂಚೆ ಸೇವೆ ಅಸ್ತವ್ಯಸ್ತವಾಗಿದೆ. ಅಂಚೆ ಬಟವಾಡೆ, ಪತ್ರಗಳ ಕ್ಲಿಯರೆನ್ಸ್‌, ತ್ವರಿತ ಅಂಚೆ ಸೇವೆಯೂ ಸೇರಿದಂತೆ ಇಲಾಖೆಯ ಎಲ್ಲ ಕೆಲಸಗಳೂ ಸ್ತಬ್ಧವಾಗಿವೆ. ರಾಜ್ಯಾದ್ಯಂತ ಅಂಚೆ ನೌಕರರು ಕಚೇರಿಗೆ ಗೈರುಹಾಜರಾಗಿದ್ದರು. ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಹಾಜರಿದ್ದರು. ಈ ಮಧ್ಯೆ ಜನರಿಗೆ ಉಂಟಾಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಂಚೆ ನೌಕರರ ಬೇಡಿಕೆಗಳ ಈಡೇರಿಕೆ ಸಂಬಂಧ ಮಾತುಕತೆಗೂ ಮುಂದಾಗಿದೆ.

ಟೆಲಿಗ್ರಾಂ ಇತ್ಯಾದಿ ಅವಶ್ಯ ಸೇವೆಗಳಿಗೆ ಪರ್ಯಾಯ ಕ್ರಮವನ್ನೂ ಕೈಗೊಳ್ಳಲಾಗಿದೆ. ಹೊಂಗಾರ್ಡ್ಸ್‌ ನೆರವೂ ಪಡೆಯಲಾಗಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳಲ್ಲಿ ಮುಷ್ಕರ ಸಂಪೂರ್ಣ ಯಶಸ್ವಿಯಾಗಿರುವ ಬಗ್ಗೆ ವರದಿಗಳಿದ್ದು, ಉಳಿದಂತೆ ಮುಷ್ಕರ ದೇಶಾದ್ಯಂತ ಶೇ. 80ರಷ್ಟು ಯಶಸ್ವಿಯಾಗಿದೆ. ಈ ಮಧ್ಯೆ ಕೊರಿಯರ್‌ನವರಿಗೆ ಭಾರಿ ಬೇಡಿಕೆ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+