Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಬಂದ ಹಣವೆಲ್ಲಾ ನೀರಾಗಿ ಹರಿಯುತ್ತದೆ. ಸಮಸ್ಯೆಗಳು ಸಾಕಷ್ಟಿವೆ. ಎಲ್ಲ ವ್ಯವಹಾರದಲ್ಲೂ ಹಿನ್ನಡೆಯ ಭಯ. ದೇವರ ಪೂಜೆಯಿಂದ ಕಷ್ಟಗಳ ಪರಿಹಾರ.

ವೃಷಭ : ನಿಮಗೆ ಆರೋಗ್ಯದ್ದೇ ಸಮಸ್ಯೆ. ಆದರೂ ಪ್ರಯಾಣ ಅನಿವಾರ್ಯ. ದೇಹ ದಂಡನೆ ಒಳ್ಳೆಯದಲ್ಲ. ದೇಹಾಲಸ್ಯದಿಂದ ನೆಮ್ಮದಿಯ ಹಾಳು.

ಮಿಥುನ : ಉದ್ಯೋಗದಲ್ಲಿ ಪ್ರಗತಿ ಇದೆ. ಸ್ಥಳ ಬದಲಾವಣೆಯ ಲಕ್ಷಣಗಳೂ ಕಾಣುತ್ತಿವೆ. ಪ್ರಣಯಿಗಳಿಗಿದು ಸುದಿನ. ಶುಭವಾರ್ತೆಗಳ ಮಹಾಪೂರವೇ ಹರಿದು ಬರಲಿದೆ. ಉದ್ವೇಗ ಬೇಡ.

ಕಟಕ : ಮಿತ್ರರೇ ನಿಮಗೆ ಸಮಸ್ಯೆ ತಂದೊಡ್ಡುತ್ತಾರೆ. ಇಲ್ಲ ಸಲ್ಲದ ಅಪಪ್ರಚಾರಗಳೂ ನಿಮ್ಮ ಮೇಲಿದೆ. ಚೌತಿಯ ಚಂದ್ರನ ದರ್ಶನ ಮಾಡಿದ್ದೀರಾದರೆ ತುಸು ಎಚ್ಚರದಿಂದಿರಿ.

ಸಿಂಹ : ನಿಮ್ಮ ಹೊಸ ಹೊಸ ಯೋಜನೆಗಳಿಗೆ ಇಂದು ಯಶಸ್ಸು ದೊರಕುವುದು ಕಷ್ಟ. ಪ್ರಯಾಣಕ್ಕೆ ಕಡಿವಾಣ ಹಾಕಿ. ಆತ್ಮೀಯರಲ್ಲಿ ನಿಮ್ಮ ನೋವನ್ನು ತೋಡಿಕೊಳ್ಳಿ. ಸಂಸಾರಗುಟ್ಟು, ವ್ಯಾಧಿರಟ್ಟು ಎಂಬುದನ್ನು ಮರೆಯಬೇಡಿ.

ಕನ್ಯಾ : ವಿಪರೀತ ಕೆಲಸದಿಂದ ನಿಮಗೆ ಬದುಕೇ ಬೇಡ ಎನಿಸುವಂತೆ ಮಾಡಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಬರುವ ಕಾಲ ಹತ್ತಿರ. ತುಸು ಶ್ರದ್ಧೆ ಇದ್ದರೆ, ಯಶಸ್ಸು ಕಟ್ಟಿಟ್ಟ ಬುತ್ತಿ. ವಿಮಾನ ಯಾನ ಯೋಗವಿದೆ.

ತುಲಾ : ಷೇರು ವ್ಯವಹಾರದಲ್ಲಿ ಜಯ ನಿಮ್ಮದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಪ್ರಗತಿ. ಅಶುಭ ವಾರ್ತೆ ಬಂದರೂ ಬಂದೀತು. ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ವೃಶ್ಚಿಕ : ಹೊರಗೆ ಬಿಸಿಲು ಏರುತ್ತಿರುವಂತೆಯೇ ನಿಮ್ಮ ಮನದಲ್ಲೂ ಕಾವು ಮೂಡುತ್ತಿದೆ. ಅಗತ್ಯವಿಲ್ಲದ ಸುದ್ದಿಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇಲ್ಲ. ಆರೋಗ್ಯ ಕೈಕೊಡುವ ಭೀತಿ ಇದೆ.

ಧನಸ್ಸು : ಬಂಧು - ಬಾಂಧವರ ಆಗಮನದಿಂದ ಮನಸ್ಸಿಗೆ ಮುದ ದೊರಕಲಿದೆ. ದೂರವಾಗಿರುವ ಗೆಳೆಯರೂ ಹತ್ತಿರವಾಗುತ್ತಾರೆ. ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ. ಆರೋಗ್ಯದ ಬಗ್ಗೆ ಗಮನ ಕೊಡಿ.

ಮಕರ : ನಿಮಗೆ ಮಾನಸಿಕ ಗೊಂದಲ ಇದೆ. ಬಾಲ್ಯದ ಗೆಳೆಯರ ಭೇಟಿಯಿಂದ ಮನಸ್ಸಿಗೆ ಮುದ ಸಿಗುತ್ತದೆ. ಅನಿರೀಕ್ಷಿತ ಸಿಹಿ ಸುದ್ದಿ ಬರಲಿದೆ. ಆನಂದಾತಿರೇಕಕ್ಕೆ ಒಳಗಾಗದಿರಿ.

ಕುಂಭ : ಭೂ ವ್ಯವಹಾರಕ್ಕೆ ಕೈಹಾಕದಿರಿ. ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ತೊಂದರೆಗಳೂ ಇವೆ. ಇವೆಲ್ಲ ಕ್ಷಣಿಕ. ವಿದ್ಯಾಭ್ಯಾಸದಲ್ಲಿ ಪ್ರಗತಿ. ನೌಕರಿಯಲ್ಲಿ ಬಡ್ತಿ ನಿರೀಕ್ಷೆ.

ಮೀನ : ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೀರಿ. ನಿಮಗೆ ಆ ಸುದ್ದಿ ಆಶ್ಚರ್ಯ ಹಾಗೂ ಆನಂದ ಎರಡೂ ತರುತ್ತದೆ. ಕುಲದೇವರನ್ನು ನಂಬಿ. ದೇವತಾರ್ಚನೆಯಿಂದ ಧನಯೋಗ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+