ತ್ವರಿತ ಅಲರ್ಟ್ ಗಳಿಗಾಗಿ
For Daily Alerts
9ರಂದು ಮಾಗಡಿಯಲ್ಲಿ ಹನುಮ ಜಯಂತಿ
ಮಾಗಡಿ : ಮಾಗಡಿಯ ತಿರುಮಲೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 9ರ ಶನಿವಾರ ಹನುಮ ಜಯಂತ್ಯುತ್ಸವ ನಡೆಯಲಿದೆ. ಶ್ರೀ ಬಿಲ್ವಪಡೆ, ಆಂಜನೇಯ ಸ್ವಾಮಿ ಸೇವಾ ಸಮಿತಿ, ಈ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಹನುಮ ಜಯಂತ್ಯುತ್ಸವದ ನಿಮಿತ್ತ ಅಂದು ಬೆಳಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಪವಮಾನ ಹೋಮ, ದೀಪೋತ್ಸವವೇ ಮೊದಲಾದ ಧಾರ್ಮಿಕ ಪೂಜಾ ಕೈಂಕರ್ಯಗಳೂ ನಡೆಯಲಿವೆ ಎಂದು ಸೇವಾ ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Comments
Story first published: Sunday, December 24, 2000, 5:30 [IST]